ರಾಷ್ಟ್ರಕೂಟರ ನಾಡಲ್ಲಿ ಬುದ್ದನ ಹೆಜ್ಜೆಯ ಗುರುತುಗಳು ಕುರಿತು ಉಪನ್ಯಾಸ

0
17

ಸೇಡಂˌ: ನಮೋ ಬುದ್ದ ಸೇವಾ ಕೇಂದ್ರ ಚಾರಿಟೇಬಲ್ ಮತ್ತು ವೆಲ್ಪೆರ್ ಟ್ರಸ್ಟವತಿಯಿಂದ ಇಂದು “ರಾಷ್ಟ್ರಕೂಟರ ನಾಡಲ್ಲಿ ಬುದ್ದನ ಹೆಜ್ಜೆಯ ಗುರುತುಗಳು ” ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಇಂದು ಸರಕಾರಿ ಪದವಿ ಪೂರ್ವ ಕಾಲೇಜನಲ್ಲಿ ಹಮ್ಮಿ ಕೋಳ್ಳಯಾಯಿತು.

ಡಾ. ಶ್ರೀಶೈಲ್ ಬಿರದಾರ ಇತಿಹಾಸ ತಜ್ಞರು ಹಾಗೂ ಸಂಶೋದಕರು ರವರು ಮಾತನಾಡುತ್ತಾ ರಾಷ್ಟ್ರಕೂಟರ ನಾಡು ಒಂದು ಕಾಲದಲ್ಲಿ ಇಡಿ ಭಾರತವೆ ರಾಷ್ಟ್ರಕೂಟರ ಸಾರ್ವಬೌಮಕ್ಕೆ ಒಳಪಟ್ಟ ಪ್ರದೇಶವಾಗಿತ್ತು.ಉತ್ತರದ ಹಿಮಾಲದಿಂದ ದಕ್ಷಿಣದ ಶ್ರೀಲಂಕದವರಿಗೂ ರಾಷ್ಟ್ರಕೂಟರ ಸಾಮ್ರಾಜ್ಯ ವಿಸ್ತರಿಸಿತು.

Contact Your\'s Advertisement; 9902492681

ಹಿಂದೊಮ್ಮೆ ಭಾರತವೆಲ್ಲವು ಬೌದ್ದ ಧರ್ಮಮಯವಾಗಿತ್ತು ಇದರ ಪ್ರತಿದ್ವನಿ ಕಲ್ಯಾಣ ಕರ್ನಾಟಕದವರಿಗೂ ಮೊಳಗಿತು ˌಅದಕ್ಕೆ ಸಾಕ್ಷಿಯಾಗಿ ಈ ಭಾಗದಲ್ಲಿ ದೊರೆತ ಸಾಮ್ರಾಟ ಅಶೋಕನ ಕಾಲದ ಕುರುಹುಗಳು ಇಲ್ಲಿ ಸಿಗುತ್ತವೆˌ ಸನ್ನತಿ ˌಗುರುಸುಡಗಿ ˌ ಹಸರಗುಂಡಗಿ ˌ ಮಂಗಲಗಿ ˌಇಂಗಳಗಿˌ ಸೇಡಂˌ ಕೊಡ್ಲಾ ಇತ್ಯಾದಿ ಕಡೆಗಳಲ್ಲಿ ಬೌದ್ದ ಸಂಸ್ಕ್ಕ್ರತಿಯ ಕುರುಗಳು ಸೀಗುತ್ತವೆ. ಪ್ರಮುಖವಾಗಿ ಸನ್ನತಿ ಬೌದ್ದರ ಕೇಂದ್ರ ಸ್ಥಾನವಾಗಿತ್ತು. ಅಶೋಕ ಚಕ್ರವರ್ತಿಯ ˌಶಾತವಾಹನರ ಕಾಲದಲ್ಲಿ ಅದು ಬೌದ್ದ ಧರ್ಮದ ಮತ್ತು ಆಡಳಿತದ ಮುಖ್ಯ ಕೇಂದ್ರ ಸ್ಥಾನಗಳಾಗಿದ್ದವು ಎಂದು ಹೇಳಿದ್ದರು.

ಅಶೋಕ ಚಕ್ರವರ್ತಿ ಸ್ವತಹ ಈ ನೆಲಕ್ಕೆ ಸಂದರ್ಶನ ಕೊಟ್ಟಿರುವ ಸಾಕ್ಷಿಗಳಿವೆ ಎಂದರು.

ಜೈನರು ಕನ್ನಡ ಸಾಹಿತ್ಯದ ಆದಿ ಕವಿಗಳೆಂದು ನಂಬಿದ್ದೆವೆ ಆದರೆ ಅದಕ್ಕಿಂತ ಮುಂಚೆ ಬೌದ್ದರಿಂದ ಕನ್ನಡ ಸಾಹಿತ್ಯ ರಚನೆ ಮಾಡಿರ ಬಹುದೆಂದರು ˌ ಬೌದ್ದರೆ ಕನ್ನಡ ಸಾಹಿತ್ಯದ ಆದಿ ಕವಿಗಳಾಗಿರ ಬಹುದೆಂದು ಅಭಿಪ್ರಾಯ ಪಟ್ಟರು.

ಕರ್ನಾಟಕದಲ್ಲಿ ಶೈವˌ ವೀರಶೈವˌ ವೈಷ್ಣವ! ಜೈನ ಸಾಹಿತ್ಯ ಸಂಸ್ಕ್ರತಿಯ ಅದ್ಯಯನ ವ್ಯೆವಸ್ಥಿತವಾಗಿ ನಡೆದಿದೆ . ಅದೇ ರೀತಿ ಬೌದ್ದ ಸಾಹಿತ್ಯ ಸಂಸ್ಕ್ರತಿಕ ಅದ್ಯಯನ ಸಂಶೋಧನೆ ನಡೆಯ ಬೇಕಾಗಿದೆ ಈ ನಿಟ್ಟಿನಲ್ಲಿಕಣ್ಶರೆಯಾದ ಬೌದ್ದ ಸಂಸ್ಕ್ರತಿಯ ಮೇಲೆ ಹೊಸ ಬೆಳಕು ಚೆಲ್ಲ ಬೇಕೆಂದು ಕರೆ ಕೊಟ್ಟರು.

ಕಾರ್ಯಕ್ರಮದ ಅದ್ಯಕ್ಷತೆಯನ್ನು ಪಿಯುಸಿ ಕಾಲೇಜಿನ ಪ್ರಾಚಾರ್ಯರಾದ ಪಂಡಿತರಾವ ಪಾಟೀಲರು ವಹಿಸಿದರು.
ವೇದಕಿಯ ಮೇಲೆ ಉಪನ್ಯಾಸಕರಾದ ಸೈಯದ್ ಬಾಬುಮೀಯಾ ˌ ಸುಜಾತ ರೆಡ್ಡಿ ˌಉಪಸ್ಠಿತರಿದ್ದರು.

ಪ್ರಾಸ್ತಾವಿಕ ಹಾಗೂ ಸ್ವಾಗತ ರಾಜು ಕಟ್ಟಿ ಮಾತನಾಡಿದರು.
ವಂದನಾರ್ಪಣೆ ನಾಗರಾಜ ಓಮಕಾರ ಹಾಗೂ ಕಾರ್ಯಕ್ರಮ ನಿರೂಪಣೆ ಅಮೃತ ಹೆಡ್ಡಳ್ಳಿ ಯವರು ನೆರವೆರಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here