ಸಂಗೀತನಾದದಿಂದ ಮನಸ್ಸು ಸಮೃದ್ಧಿಗೊಳ್ಳುತ್ತದೆ

0
20

ಕಾಳಗಿ: ಸಂಗೀತವನ್ನಾಲಿಸುವುದರಿಂದ ಮನುಷ್ಯನ ಮನಸ್ಸು ಸಮೃದ್ಧಿಯತ್ತಸಾಗಿ ಸಂತೋಷದ ಬದುಕಿನತ್ತ ನಡೆಸುತ್ತದೆ ಎಂದು ಸೂಗೂರು (ಕೆ)ಗ್ರಾಮದ ಸಂಸ್ಥಾನ ಹಿರೇಮಠದ ಪೂಜ್ಯರಾದ ಷ. ಬ್ರ. ಡಾ. ಚನ್ನರುದ್ರಮುನಿ ಶಿವಾಚಾರ್ಯರು ತಿಳಿಸಿದರು.

ತಾಲೂಕಿನ ಸೂಗೂರು (ಕೆ) ಗ್ರಾಮದಲ್ಲಿ ಶ್ರೀ ದೇವರ ದಾಸಿಮಯ್ಯ ಸಂಗೀತ ಪಾಠ ಶಾಲೆ ಹಾಗೂ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಕಲಬುರ್ಗಿ ಅವರ ಸಂಯುಕ್ತಾಶ್ರಯದಲ್ಲಿ ರವಿವಾರ ಶ್ರೀ ಬನಶಂಕರಿ ದೇವಸ್ಥಾನ ಆವರಣದಲ್ಲಿ ಸಂಜೆ ಏರ್ಪಡಿಸಲಾಗಿರುವ ” ಜಾನಪದ ಸಂಗೀತೋತ್ಸವ ” ಸಮಾರಂಭದ ದಿವ್ಯ ಸಾನಿಧ್ಯ ವಹಿಸಿರುವ ಶ್ರೀಗಳು ತಮ್ಮ ಆಶೀರ್ವಾದ ಮೂಲಕ ಸಾರ್ವಜನಿಕರಿಗೆ ಸಂಗೀತದ ಮಹತ್ವದ ಬಗ್ಗೆ ತಿಳಿಯಪಡಿಸಿದರು.

Contact Your\'s Advertisement; 9902492681

ಗಡಿ -ಬಿಡಿ ಬದುಕಿನಿಂದ ಜೀವನ ಸಾಗಿಸುತ್ತಿರುವ ಇಂದಿನ ಯುವ ಜನಾಂಗಕ್ಕೆ ಸಂಗೀತ ಕಲಿಯೊಂದು ಮಾರ್ಗದರ್ಶಿಯಾಗಿ ನಿಲ್ಲಲಿದ್ದು, ವ್ಯಕ್ತಿಗೆ ಎಂತಹ ಸಂಕಷ್ಟಗಳೇ ಬಂದಿದ್ದರೂ ಕೂಡ ಸಂಗೀತ ದತ್ತ ಚಿತ್ತ ಹರಿಸಿದ್ದೆಯಾದರೆ ಅವರ ಕಷ್ಟ ಸಂಕಷ್ಟಗಳೆಲ್ಲವೂ ಸಂಗೀತನಾದದಿಂದ ಮಾಯವಾಗಲಿವೆ ಎಂದರು.

ನಮ್ಮ ದೇಶದ ಸಂಸ್ಕೃತಿ ಪರಂಪರೆಯನ್ನು ಉಳಿಸುವುದಕ್ಕಾಗಿ ಹಾಗೂ ಗ್ರಾಮೀಣ ಪ್ರದೇಶಗಳ ಸೊಗಡುಗಳನ್ನು ಎತ್ತಿ ಹಿಡಿಯುವ ಹಿತದೃಷ್ಟಿಯಿಂದ ಜಾನಪದ ಸಂಗೀತೋತ್ಸವಗಳಂತಹ ವಿಶೇಷ ಕಾರ್ಯಕ್ರಮಗಳನ್ನು ಕನ್ನಡ ಮತ್ತು ಸಂಸ್ಕೃತ ಇಲಾಖೆ ಅವರು, ಹಮ್ಮಿಕೊಳ್ಳುತ್ತಿರುವ ಕೆಲಸ ಶ್ಲಾಘನಿಯವಾಗಿದೆ ಎಂದರು.

ವಿವಿಧ ಗ್ರಾಮಗಳಿಂದ ಆಗಮಿಸಿರುವ ಕಲಾತಂಡಗಳಿಂದ ದಾಸವಾಣಿ, ತತ್ವಪದ, ಜಾನಪದ ಗೀತೆಗಳು, ಸಂಪ್ರದಾಯಿಕ ಹಾಡುಗಳು, ಮೊಹರಂ ಪದಗಳು ಹಾಗೂ ಹಂತಿಪದಗಳು ಸಾರ್ವಜನಿಕರನ್ನು ರಂಜಿಸಿದವು.

ಪ್ರಮುಖರಾದ ದೇವಾಂಗಪ್ಪ ಲಾಳಿ, ಉಮಾಕಾಂತ, ಬಸವರಾಜ ಕೋಟಿ, ದತ್ತರಾವ ಮುಚ್ಚಟ್ಟಿ, ಜಗನ್ನಾಥ ಹೊನಗುಂಟಿ, ಕಾಶಮ್ಮ ಒಡೆಯರಾಜ, ಅಮೃತರಾವ ಗುಂಡಮ್ಮಿ , ನಿಜಗುಣಯ್ಯಸ್ವಾಮಿ, ಬುಗ್ಗಮ್ಮ ಯಾದವ, ಅಮೃತ ಯಾದವ, ಮಲ್ಲಿಕಾರ್ಜುನ ಮುಧೋಳ , ಸುರೇಶ ಕೋಟಿ, ವಿನೋದ ಶಿವಪುತ್ರಯ್ಯ ಮಠಪತಿ, ಹನುಮಂತ ಕೋಟಿ ಸೇರಿದಂತೆ ಅನೇಕರಿದ್ದರು.

ಶ್ರೀ ದೇವರ ದಾಸಿಮಯ್ಯ ಸಂಗೀತ ಪಾಠಶಾಲೆ ಅಧ್ಯಕ್ಷ ಗಣಪತರಾವ ಸಿಂಗಶೆಟ್ಟಿ ಕಾಳಗಿ ಸ್ವಾಗತಿಸಿದರು, ಸೂರ್ಯಕಾಂತ ಕಟ್ಟಿಮನಿ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here