ಕಲಬುರಗಿ: ನಗರದ ಲಾರಿ ತಂಗುದಾಣ ಆಶ್ರಯ ಕಾಲೋನಿ ಮುಸ್ಲಿಂ ಸಂಘ ಬಡಾವಣೆಯ ರಸ್ತೆಯಲ್ಲಿ ಯುವಕನೋರ್ವನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಡೆದಿದೆ.
ರಫೀಕ್ ಖಾಸಿಂ (28) ಕೊಲೆಯಾದ ವ್ಯಕ್ತಿ. ರಫಿಕ್ ನಗರದ ಎಂ.ಎಸ್.ಕೆ. ಮಿಲ್ ಹುಸೈನಿ ಗಾರ್ಡನ್ ನಿವಾಸಿ ಎಂದು ತಿಳಿದು ಬಂದಿದ್ದು, ಈತ ಗೌಂಡಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ರಫಿಕ್ ನ ಮಾವನಿಂದಲೇ ಈ ಕೊಲೆ ನಡೆದಿದೆ ಎಂದು ಸಂಶಯ ವ್ಯಕ್ತಪಡಿಸಲಾಗಿದೆ.
ರಫಿಕ್ ಮತ್ತು ಮಾವನ ನಡುವೆ ರಫಿಕ್ ಕಳ್ಳತನ ಮಾಡುತಿರುವ ವಿಷಯಕ್ಕೆ ಸಂಬಂಧಿಸಿದಂತೆ ಆಗಾಗ ಕಲಹ ನಡೆಯುತ್ತಿತ್ತು, ರಫಿಕನ ಕೃತ್ಯದಿಂದ ಬೆಸೆತು ಮಾವನ ರಫಿಕನನ್ನು ಕೊಲೆ ಮಾಡಿದ್ದಾನೆ ಎಂದು ಪ್ರಥಮಿಕ ಮಾಹಿತಿಯಿಂದ ಸಂಶಯ ವ್ಯಕ್ತವಾಗುತಿದೆ.
ಇಂದು ರಫಿಕ್ ಮತ್ತು ಕೊಲೆಯ ಆರೋಪಿ ಮುಸ್ಲಿಂ ಸಂಘ ನಿವಾಸಿಯಾದ ಬಾಬಾ ರಹಿಂ ಹಾಗೂ ರಫಿಕ್ ಮದ್ಯೆ ಕಲಹ ಉಂಟಾಗಿ ನಗರದ ರಿಂಗ್ ರಸ್ತೆಯ ಆಶ್ರಯ ಲಾರಿ ತಂಗುದಾಣದಲ್ಲಿ ಕೊಲೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣದ ಕುರಿತು ಚೌಕ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.