ಕಲಬುರಗಿ: ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಹಾಗೂ ತೊಗರಿ ಬೆಳೆಯ ಹಿತಕಾಪಾಡಲು, ಬೆಳಗಾವಿ ಅಧಿವೇಶನದಲ್ಲಿ ವಿಶೇಷ ಚರ್ಚೆ ನಡೆಸಿ ರೈತರಿಗೆ ಪರಿಹಾರ ಒದಗಿಸಬೇಕೆಂದು, ಕಾಳಗಿ ಬಸ್ ನಿಲ್ದಾಣದಿಂದ ತಹಸೀಲ್ದಾರ್ ಕಛೇರಿ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡು, ಕಾಳಗಿ ತಹಸೀಲ್ದಾರರ ಮೂಲಕ,ಚಿಂಚೋಳಿ ಜೆಡಿಎಸ್ ನಿಯೋಜಿತ ಅಭ್ಯರ್ಥಿ ಸಂಜೀವನ್ ಆರ್. ಯಾಕಾಪೂರ್, ಹಾಗೂ ಕಾಳಗಿ ತಾಲೂಕ ಜೆಡಿಎಸ್ ಅಧ್ಯಕ್ಷ ಗೌರಿಶಂಕರ್ ಸೂರವಾರ್ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಜಿಲ್ಲೆ ಕಾಳಗಿ ತಾಲೂಕಿನ ಜೆಡಿಎಸ್ ಪಕ್ಷದ ವತಿಯಿಂದ ತಾಲೂಕಿನಲ್ಲಿ ಪ್ರವಾಹ ಮತ್ತು ನೆಟೆ ರೋಗಕ್ಕೆ ಬೆಳೆ ನಾಶವಾಗಿರುವ ಹಾಗೂ ಭೂಗೋಳಿಕ ಸೂಚಕ
(ig tag)ಪಡೆದಿರುವ ತೊಗರಿ ಬೆಳೆ ಈ ವರ್ಷ ಸಂಪೂರ್ಣ ಹಾಳಾಗಿದ್ದು, ರೈತರಿಗೆ ತೀವ್ರ ನಷ್ಟವಾಗಿದೆ. ಐದು ಲಕ್ಷ ಹೆಕ್ಟರನಲ್ಲಿ ಬಿತ್ತನೆ ಮಾಡಲಾಗಿತ್ತು ಆದರೆ ಎರಡು ಲಕ್ಷ ಹೆಕ್ಟರಗೂ ಅಧಿಕ ಬೆಳೆ ಪ್ರವಾಹ ಮತ್ತು ನೆಟೆ ರೋಗಕ್ಕೆ ಹಾಳಾಗಿದ್ದು ರೈತನ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು.
ಈ ಸಂಧರ್ಭದಲ್ಲಿ ರಾಹುಲ್ ಯಾಕಪೂರ್,ಲಾಲಪ್ಪ ಹೊಳ್ಕರ್, ವಿಷ್ಣುಕಾಂತ್ ಮೂಲಗೆ, ರವಿ ಪಾಟೀಲ್ ಕೋಟಗಾ, ಸೇರಿದಂತೆ ಅನೇಕ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.