ಮಾಜಿ ಸಿಎಂ ದಿ. ಧರ್ಮಸಿಂಗ್ ಅವರ ಒಡನಾಡಿಗಳಿಗೆ ಪ್ರಶಸ್ತಿ ಪ್ರದಾನ

0
270

ಕಲಬುರಗಿ: ಡಾ. ಎನ್ ಧರ್ಮಸಿಂಗ್ ಅವರು ಕಾಂಗ್ರೇಸ್ ಪಕ್ಷದಲ್ಲಿದ್ದರೂ ಎಲ್ಲ ಪಕ್ಷದ ಪ್ರಮುಖರ ಜೊತೆಗೆ ಉತ್ತಮ ಸನೇಹ ಹೊಂದಿ ಸರ್ವ ಸಮಾಜದ ನಾಯಕರೆನಿಸಿಕೊಂಡಿದ್ದರು. ಇವನಾರವ, ಇವನಾರವ ಎನ್ನದೇ ಇವ ನಮ್ಮವ ಇವನಮ್ಮವ ಎನ್ನುವ ಶರಣವಾಣಿ ತಮ್ಮ ಬದುಕಿನ ಉಸಿರಾಗಿಸಿಕೊಂಡಿದ್ದರು. ಕಲ್ಯಾಣ ಕರ್ನಾಟಕ ಭಾಗದ ಸಜ್ಜನ ರಾಜಕಾರಣಿಯಾಗಿದ್ದ ಧರ್ಮಸಿಂಗ್ ಅವರು ದೀನ, ದಲಿತರು, ಬಡವರ ಕಣ್ಮಣಿಯಾಗಿದ್ದರು. ಇಂತ ಶ್ರೇಷ್ಠ ರಾಜಕಾರಣಿಯೊಬ್ಬರ ಜನ್ಮದಿನ ಸಾರ್ವತ್ರಿಕವಾಗಿ ಆಚರಿಸುವ ಮೂಲಕ ಅವರನ್ನು ಶಾಶ್ವತವಾಗಿ ಜೀವಂತವಾಗಿಡುವ ಕಾರ್ಯ ಪ್ರತಿಷ್ಠಾನ ಮಾಡುತ್ತಿದೆ ಎಂದು ಸಾರಂಗಮಠದ ಜಗದ್ಗುರು ಶ್ರೀ ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ನುಡಿದರು.

ಮಾಜಿ ಸಿಎಂ ದಿ. ಎನ್. ಧರ್ಮಸಿಂಗ್ ಅವರ ಜನ್ಮದಿನದ ಪ್ರಯುಕ್ತ ಇಲ್ಲಿನ ವಿಶ್ವಜ್ಯೋತಿ ಪ್ರತಿಷ್ಠಾನವು ನಗರದ ಕನ್ನಡ ಭವನದಲ್ಲಿ ಶನಿವಾರ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಧರ್ಮಸಿಂಗ್ ಅವರ ಒಡನಾಡಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸಂಗ್ರಾಮ್, ನೀರಾವರಿ ಸೌಲಭ್ಯ, ರಸ್ತೆ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ದಿ ಕಾರ್ಯಗಳು ಕೈಗೊಲ್ಳುವುದರ ಮೂಲಕ ಕಲ್ಯಾಣ ಕರ್ನಾಟಕ ಭಾಗಕ್ಕೆ ಕೊಟ್ಟ ಕೊಡುಗೆ ಅಪಾರವಾಗಿದೆ. ಇಂದಿನ ಯುವ ರಾಜಕಾರಣಿಗಳಿಗೆ ಧರ್ಮಸಿಂಗ್ ಅವರು ಮಾದರಿಯಾಗಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದರು.

ಖ್ಯಾತ ವೈದ್ಯ ಡಾ. ಎಸ್ ಬಿ ಕಾಮರೆಡ್ಡಿ ಮಾತನಾಡಿ, ಮಾಜಿ ಸಿಎಂ ಎನ್ ಧರ್ಮಸಿಂಗ್ ಅವರು ಜಾತಿ, ಮತ, ಧರ್ಮ ಮೀರಿ ಸರ್ವಧರ್ಮ ಸಮನ್ವಯಕಾರರಾಗಿ ಬೆಳೆದಿದ್ದಾರೆ ಎಂದು ಮನದುಂಬಿ ಮಾತನಾಡಿದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಅವರು ಓರ್ವ ಧೀಮಂತ ರಾಜಕಾರಣಿಯಾಗಿ ಬೆಳೆದು, ಕಾವ್ಯ ಕ್ಷೇತ್ರಕ್ಕೂ ಉತ್ತಮ ಕೊಡುಗೆ ನೀಡಿದ್ದಾರೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮನಾನ 371 (ಜೆ) ಕಲಂ ಜಾರಿ ಬರಲು ಶ್ರಮಿಸಿದವರು ಡಾ.ಮಲ್ಲಿಕರ್ಜುನ ಖರ್ಗೆ ಹಾಗೂ ಎನ್ ಧರ್ಮಸಿಂಗ್ ಅವರಾಗಿದ್ದಾರೆ ಎಂದು ಹೇಳಿದರು.

ಪ್ರತಿಷ್ಠಾನ ಅಧ್ಯಕ್ಷ ಶ್ರೀಕಾಂತ ಪಾಟೀಲ ತಿಳಗೂಳ, ಸಂಚಾಲಕ ಬಿ.ಎಂ.ಪಾಟೀಲ ಕಲ್ಲೂರ, ಯಡ್ರಾಮಿ ಕಸಾಪ ಅಧ್ಯಕ್ಷ ನಾಗಪ್ಪ ಸಜ್ಜನ್, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಸಂಘಟನಾ ಕಾರ್ಯದರ್ಶಿ ರವಿಂದ್ರಕುಮಾರ ಭಂಟನಳ್ಳಿ, ಪ್ರಮುಖರಾದ ಶರಣಕುಮಾರ ಬಿಲ್ಲಾಡ, ವೀರೇಶ ಕಲಶೆಟ್ಟಿ,

ಧರ್ಮಸಿಂಗ್ ಒಡನಾಡಿಗಳಾದ ದೇವೇಂದ್ರಪ್ಪ ಮರತೂರ, ತಿರುಪತಿ ದೇಸಾಯಿ ವಡಗೇರಾ, ಸಿದ್ದಪ್ಪ ಕಲ್ಲಪ್ಪ ಬಂಗಾರಿ ನೆಲೋಗಿ, ರುಕುಮ್ ಪಟೇಲ್ ಕೂಡಿ, ಶಿವರಾಜ ಮುಗಳಿ ಓಕಳಿ ಅವರನ್ನು `ಧರ್ಮಪ್ರಜೆ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಪ್ರಮುಖರಾದ ಶಿವರಾಜ ಅಂಡಗಿ, ವಿನೋದ ಜೇನವೇರಿ, ವಿಶ್ವನಾಥ ತೊಟ್ನಳ್ಳಿ, ಬಸವಂತರಾಯ ಕೋಳಕೂರ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here