ಕುವೆಂಪು: ಜನಸಾಮಾನ್ಯರ ಪ್ರಜ್ಞೆ

0
15

ಕಲಬುರಗಿ: ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ರಾಷ್ಟ್ರಕವಿ ಕುವೆಂಪುರವರ 118ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಮುಖ್ಯತಿಥಿಗಳಾದ ಡಾ. ಗುರುಪಾದ ಮರಿಗುದ್ದಿಯವರು ಮಾತಾಡುತ್ತಾ, ಮಲೆನಾಡಿನ ತೀರ್ಥಹಳ್ಳಿಯಂತಹ ಗೊಂಡಾರಣ್ಯ ಪ್ರದೇಶದಲ್ಲಿ ಹುಟ್ಟಿ ಬೆಳೆದ ಕುವೆಂಪುರವರು ರಾಷ್ಟ್ರ ಕವಿಯಾದರು. ಕುವೆಂಪು ಅವರಿಗೆ ಪ್ರಕೃತಿಯ ಬಗ್ಗೆ ಕೂತುಹಲ, ಆಸಕ್ತಿ ಇರುವ ಕಾರಣಕ್ಕಾಗಿ ಮಲೆನಾಡಿನ ಪರಿಸರವನ್ನು ವಿಹಂಗಮವಾಗಿ ಚಿತ್ರಿಸಿದ್ದಾರೆ.

Contact Your\'s Advertisement; 9902492681

ಪ್ರಕೃತಿಯ ರಹಸ್ಯ, ಸೌಂದರ್ಯವನ್ನು ಅತ್ಯಂತ ಅರ್ಥಪೂರ್ಣವಾಗಿ ಸಾಹಿತ್ಯಕವಾಗಿ ಕಟ್ಟಿಕೊಟ್ಟಿದ್ದಾರೆ. ಇವರಿಗೆ ನಿಸರ್ಗದ ಮೀಮಾಂಸೆಯೇ ಸಾಹಿತಿಕ ವಸ್ತುವಾಗಿ ರೂಪಗೊಂಡಿತು ಎಂಬುದು ಅವರ ಕೃತಿಗಳಲ್ಲಿ ಕಾಣಬಹÅದಾಗಿದೆ. ಅವರ ಮಲೆನಾಡಿನ ಚಿತ್ರಗಳು ಕೃತಿಯನ್ನು ನೋಡಿದಾಗ ಸಮಾಜದಲ್ಲಿನ ಅನ್ಯಾಯ, ಅವ್ಯವಸ್ಥೆಯನ್ನು, ಕಂಡುಂಡ ಬಾಲ್ಯದ ನೆನಪುಗಳನ್ನು ಮೇಲಕು ಹಾಕಿದ್ದಾರೆ. ಈ ಕಾರಣಕ್ಕಾಗಿಯೆ ಅವರ ಸಾಮಾಜಿಕ ಕಳಕಳಿ ಬರಹ, ಮೌಲಿಕ ಚಿಂತನೆಗಳು ಅವರನ್ನು ವಿಶ್ವಮಾನವನ್ನಾಗಿಸಿವೆ.

ಮಾನವೀಯ ದೃಷ್ಟಿಕೋನ, ವೈಚಾರಿಕ ಚಿಂತನೆ ಸಹೃದಯ ಮನಸ್ಸುಗಳಿಂದಾಗಿಯೇ ಅವರು ಕಥಾಸರಿತ್ಸಾಗರವಾಗಿದ್ದಾರೆ ಎಂದು ಹೇಳಿದರು. ಕುವೆಂಪು ಅವರ ಕಾದಂಬರಿಗಳಲ್ಲಿ ನೈಜ ಅನುಭವ, ಮಾನವೀಯ ಸಂಬಂಧಗಳ ಚಿತ್ರಣವನ್ನು ಕಲಾತ್ಮಕವಾಗಿ ಮನಮುಟ್ಟುವಂತೆ ನಿರೂಪಿಸಿದ್ದಾರೆ. ಅಂದಿನ ಜಮೀನ್ದಾರಿ ವವ್ಯಸ್ಥೆಯನ್ನು, ಅಸಮಾನತೆಯನ್ನು ವಿರೋಧಿಸಿ ಯುವ ಜನತೆಯನ್ನು ಕೇಂದ್ರವನ್ನಾಗಿಟ್ಟುಕೊಂಡು ಸಾಹಿತ್ಯ ರಚಿಸಿದರು.

ನಿರಂಕುಶಮತಿಗಳಾಗಿ ವೈಚಾರಿಕ ಎತ್ತರವನ್ನು ಸಾಧಿಸಬೇಕು ಎಂಬ ಆಶಯ ವ್ಯಕ್ತಪಡಿಸಿದ ಬಹುತ್ವ ಚಿಂತನೆಯ ಬರಹಗಾರ. ಕುವೆಂಪುರವರು ಪ್ರಾಚೀನ ಮಹಾಕಾವ್ಯಗಳಲ್ಲಿರುವ ಬಿರುಕುಗಳನ್ನು ಎತ್ತಿ ತೋರಿಸಿದರು. ಅವರು ಸಾಹಿತ್ಯದಲ್ಲಿ ತತ್ವಶಾಸ್ತ್ರದ ಸಾರ ಎರಕಹೆÇಯೊಯ್ದರು. ಕನ್ನಡ ಸಾಹಿತ್ಯದಲ್ಲಿ ಮೊದಲ ಬಂಡಾಯ ಚಿಂತನೆಯನ್ನು ಒಡಮೂಡಿಸಿದ್ದಾರೆ. ಸ್ಥಳೀಯ ಸಂಸ್ಕøತಿಯ ಚಿತ್ರಣ, ಜೀವಂತಿಕೆ, ನಾಡು-ನುಡಿಯ ಬಗ್ಗೆ ಸಾದೃಶ್ಯತೆ, ದೇಶದ ಐಕ್ಯತೆ, ರಾಷ್ಟ್ರೀಯತೆ ಮನೋಭಾವ ನೆಲೆಯಲ್ಲಿ ವಿಶ್ವಮಾನವ ಪ್ರಜ್ಞೆಯನ್ನು ಪ್ರತಿಪಾದಿಸಿದ ಮಹಾಕವಿ ಕುವೆಂಪು ಎಂದರು.

ಪೆÇ್ರ. ಎಚ್.ಟಿ. ಪೆÇೀತೆ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ ಕುವೆಂಪು ಅವರ ಸಾಹಿತ್ಯದ ಒಟ್ಟು ಸಾರ ದುಡಿಯುವ ವರ್ಗದ ಜೀವದ್ರವ್ಯವಾಗಿದೆ ಎಂದರು. ಲೇಖಕರು, ಪತ್ರಕರ್ತರ, ಕಲಾವಿದರು ಇಂದಿನ ಕಾಲದ ತಲ್ಲಣಗಳು ಅಭಿವ್ಯಕ್ತಿಸುವಂತಿಲ್ಲದ ಸ್ಥಿತಿಯಲ್ಲಿದ್ದೇವೆ ಎಂದರು. ಕುವೆಂಪು ಸಮಾನತೆ ಸಹೋದರತೆ ಸಹೃದಯತೆಯನ್ನು ಕೇಂದ್ರವಾಗಿಟ್ಟುಕೊಂಡು ಸಾಹಿತ್ಯ ರಚಿಸಿದ್ದಾರೆ. ಸಾಂಪ್ರದಾಯಿಕತೆ, ಮೂಢನಂಬಿಕೆ, ಮೌಢ್ಯತೆಯನ್ನು ವಿರೋಧಿಸಿದ ಬಹುದೊಡ್ಡದ್ದರು. ಇಂದಿನ ವಿದ್ಯಾರ್ಥಿಗಳು ವೈಚಾರಿಕ ಪರಂಪರೆಗೆ ಜೀವ ತುಂಬುವ ನಿಟ್ಟಿನಲ್ಲಿ ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ ಎಂದು ಕಿವಿ ಮಾತು ಹೇಳಿದರು.

ಡಾ. ಶ್ರೀಶೈಲ ನಾಗರಾಳ, ಕನ್ನಡ ಅತಿಥಿ ಉಪನ್ಯಾಸಕರಾದ ಡಾ. ಎಂ.ಬಿ. ಕಟ್ಟಿ, ಡಾ. ಮೇಲ್ಕೇರಿ, ವಸಂತ ನಾಸಿ ಮುಂತಾದವರು. ಸಂಶೋಧನಾ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿರಿದರು. ಡಾ. ಸಂತೋಷಕುಮಾರ ಕಂಬಾರ ಸ್ವಾಗತಿಸಿದರು, ಡಾ. ಶಿವಗಂಗಾ ಬಿಲಗುಂದಿ ನಿರೂಪಿಸಿದರು, ಡಾ, ಸುಲಾಬಾಯಿ ಹಿತವಂತ ನಿರೂಪಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here