ಕಲಬುರಗಿ: ರಾಜ್ಯದಲ್ಲಿ ನಿರೀಕ್ಷಿಸದ ಮಟ್ಟಿಗೆ ಎದ್ದಿರುವ ಬಿಜೆಪಿ ಪರ ಅಲೆಯನ್ನು ನೋಡಿ ವಿಚಲಿತರಾದ ಕಾಂಗ್ರೆಸ್ಸಿಗರು ಕೀಳು ಅಭಿರುಚಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ವಕ್ತಾರರು ಆಗಿರುವ ಸೇಡಂ ಶಾಸಕ ರಾಜಕುಮಾರ ತೇಲ್ಕೂರ ತಿರುಗೇಟು ನೀಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು,
ನಾವೇ ಅಧಿಕಾರಕ್ಕೆ ಬರ್ತೀವಿ ಅಂತ ಹೇಳ್ತಿದ್ದೀರಾ. ಇದು ಸುಲಭವಲ್ಲ. ನೀವು 50ರಿಂದ 60 ಸೀಟು ಪಡೆಯುವುದು ಬಹಳ ಕಷ್ಟ. ಆದರೆ ಬಿಜೆಪಿ ಭಾರಿ ಬಹುಮತದೊಂದಿಹೆ ನಾವು ಮತ್ತೆ ಅಧಿಕಾರ ಮಾಡಲಿದ್ದೇವೆ ಎಂದು ಸವಾಲು ಹಾಕಿದ್ದಾರೆ.
ಇತ್ತೀಚೆಗೆ ಕಾಂಗ್ರೆಸ್ ಮುಖಂಡರು, ಬಿಜೆಪಿ ಮುಖಂಡರನ್ನು ಗುರಿ ಮಾಡಿಕೊಂಡು ಕೀಳಾಗಿ ಮಾತನಾಡಿ, ವ್ಯಕ್ತಿಗತ ನಿಂದನೆ ಮಾಡುತ್ತಿದ್ದಾರೆ. ಮೇಲ್ಮನೆ ವಿರೋಧ ಪಕ್ಷದ ನಾಯಕರಾದ ಹರಿಪ್ರಸಾದ್ ಅವರು ನಮ್ಮ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ಸಿ.ಟಿ ರವಿ ಅವರ ವಿರುದ್ಧ ಇಲ್ಲಸಲ್ಲದ ಆಪಾದನೆ ಮಾಡ್ತಿರೋದೆ ಇದಕ್ಕೆ ಸಾಕ್ಷಿಯಾಗಿದೆ ಎಂದು ಆಕ್ಷೇಪಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಅದೇ ದಾಟಿಯಲ್ಲಿ ಎಲ್ಲರನ್ನೂ ಮೂದಲಿಸುತ್ತಾರೆ. ಹರಿಪ್ರಸಾದ ಅವರು ಹಿರಿಯರು ಹೀಗೆ ಟೀಕಿಸುತ್ತಿರುವುದ ಸಣ್ಣ ತನ ಕಂಡು ಬರುತ್ತಿದೆ. ಸಿ.ಟಿ ರವಿ ಅವರ ಬಗ್ಗೆ ಏನೇನು ಅಂದಿದ್ದೀರಿ ಎಂದು ಹೇಳಿದರೆ, ತಮಗೂ ನಮಗೂ ವ್ಯತ್ಯಾಸವಾಗುವುದಿಲ್ಲ. ಇನ್ನೂ ಮುಂದೆ ಯಾದರೂ ಕಾಂಗ್ರೆಸ್ ನಾಯಕರು ಅರಿತು ವಿವೇಕದಿಂದ ಟೀಕೆ ಮಾಡಲಿ ಎಂದು ತೇಲ್ಕೂರ ತಿರುಗೇಟು ನೀಡಿದ್ದಾರೆ.
ಮದ್ಯ ಸೇವಿಸುವಂತಿಲ್ಲ ಎಂದು ಕಾಂಗ್ರೆಸ್ ಸಂವಿಧಾನದಲ್ಲೇ ಇದೆ. ಅಂಥವರಿಗೆ ಕಾಂಗ್ರೆಸ್‍ನಲ್ಲಿ ಸದಸ್ಯತ್ವ ಕೊಡುವುದಿಲ್ಲವೋ, ಕಾಂಗ್ರೆಸ್‍ನಲ್ಲಿ ಯಾರೂ ಕುಡಿಯುವುದಿಲ್ಲವೇ? ಸಿದ್ದರಾಮಯ್ಯ, ಡಿಕೆಶಿ, ನೀವು, ಬೇರೆಯವರು ಯಾರೂ ಕುಡಿಯುವುದಿಲ್ಲವೇ?
ರಾಹುಲ್ ಗಾಂಧಿ ಮೇಲೆ ಅಪಾದನೆ ಮಾಡಿದ್ದನ್ನೇ ಅ
ತಿರುಚಿ ಸಿ.ಟಿ.ರವಿ ಮೇಲೆ ಹೇಳ್ತಿದ್ದೀರಾ? ರಾಹುಲ್ ಗಾಂಧಿಯವರನ್ನು ಕುಡುಕ ಅಂತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೇಳಲಾಗಿದೆ. ಡ್ರಗ್ ಪೆಡ್ಲರ್ ಅಂದಿದ್ದಾರೆ. ನಾವು ಅದನ್ನೆಲ್ಲ ಹೇಳುವುದಿಲ್ಲ. ನಿಮಗೆ ತಾಕತ್ತಿದ್ದರೆ ರಾಹುಲ್ ಗಾಂಧಿಯವರನ್ನು ನೀವೇ ಕೇಳಿ ಎಂದು ತೇಲ್ಕೂರ ಸವಾಲೆಸೆದಿದ್ದಾರೆ.