ಹೈದರಾಬಾದ್ ಕರ್ನಾಟಕ

ಯುವಕರು ದೇಶದ ಉತ್ತಮ ಪ್ರಜೆಗಳಾಗಲಿ

ಕಲಬುರಗಿ: ಇಂದಿನ ಯವ ಜನತೆ ದೇಶದ ಶಕ್ತಿ ಯಾಗಿದ್ದು, ಉತ್ತಮ ಜೀವನ ನಡೆಸಲು ಮುಂದಾಗಬೇಕು ಎಂದು ಎಂ.ಬಿ ನಗರ ಪೊಲೀಸ್ ಠಾಣೆಯ ಸಿಪಿಐ ಚಂದ್ರಶೇಖರ ತೀಗಡಿ ಕರೆ ನೀಡಿದರು.

ಎಂ.ಬಿ ನಗರ ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ಸಾರ್ವಜನಿಕರ ಬೀಟ್ ಸಭೆಯಲ್ಲಿ ಕನ್ನಡ ಭೂಮಿ ಜಾಗೃತಿ ಸಮಿತಿ ಜಿಲ್ಲಾ ಅಧ್ಯಕ್ಷ ಪ್ರಶಾಂತ್ ತಂಬೂರಿ ಅವರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಯುವಕರು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಬೇಕು.ದುಶ್ಚಟಗಳಿಗೆ ಬಲಿಯಾಗಬಾರದು.ಇಸ್ಪೀಟ್,ಜೂಜುಗಳಂಥ ಕೆಟ್ಟ ಅಭ್ಯಾಸಗಳು ಯುವಕರ ಭವಿಷ್ಯ ಹಾಳು ಮಾಡುತ್ತವೆ.ಅಂಥವುಗಳಿಂದ ದೂರವಿದ್ದು ಸಮಾಜಮುಖಿ ಕೆಲಸ ಮಾಡಬೇಕು ಎಂದ ಅವರು ಯುವಕರಲ್ಲಿ ಕ್ರೀಡಾ ಆಸಕ್ತಿ ಬೆಳೆಸಲು ವೈಯಕ್ತಿಕವಾಗಿ ಸಹಾಯ ಮಾಡಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಸಮಿತಿಯ ವಿದ್ಯಾರ್ಥಿ ಘಟಕದ ಅಧ್ಯಕ್ಷ ಶರಣಯ್ಯ ಇಕ್ಕಳಕಿಮಠ,ಜೈಭೀಮ ಸಾಲೇಗಾಂವ ಸೇರಿದಂತೆ ವಿವಿಧ ಬಡಾವಣೆಯ ಹಿರಿಯರು, ಯುವಕರು ಉಪಸ್ಥಿತರಿದ್ದರು.

emedialine

Recent Posts

ಮಕ್ಕಳ ಸೃಜನಶೀಲತೆ ಅನಾವರಣಗೊಳಿಸಿದ ಮಣ್ಣೆತ್ತಿನ ಸ್ಪರ್ಧೆ

ರಾವೂರ: ಶ್ರೀ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಮಣ್ಣೆತ್ತಿನ ಸ್ಪರ್ಧೆಯ ಅಂಗವಾಗಿ ಹಮ್ಮಿಕೊಂಡಿದ್ದ ಮಣ್ಣೇತ್ತು ಮಾಡುವ ಸ್ಪರ್ಧೆಯಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು…

2 hours ago

ವಾಡಿ: ಕುಸ್ತಿ ಪಂದ್ಯಾವಳಿ: 50ಗ್ರಾಂ.ಬೆಳ್ಳಿ ಕಡಗ ವಿಜೇತ ಮಂಜುನಾಥ

ಇಂಗಳಗಿ ಹಜರತ್ ಸೈಯದ್ ಶೇರ್.ಖಾನ್.ವಲಿ ದುರ್ಗಾದ 621ನೇ ಜಾತ್ರಾ ಮಹೋತ್ಸವ ವಾಡಿ: ಪಟ್ಟಣ ಸಮೀಪದ ಇಂಗಳಗಿ ಗ್ರಾಮದ ಹಜರತ್ ಸೈಯದ್…

2 hours ago

ಹಿರಿಯ ನಾಗರಿಕರ ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ ಅಗತ್ಯ: ಅರ್ಥಶಾಸ್ತ್ರಜ್ಞ ವಿಜಯ್ ದೇಶಮುಖ್

ಕಲಬುರಗಿ: ದೇಶದ ಹಿರಿಯ ನಾಗರಿಕರನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಿ ಅವರ ಕಲ್ಯಾಣಕ್ಕಾಗಿ ಕೇಂದ್ರ ಸರಕಾರವು ಹಿರಿಯ ನಾಗರಿಕರ ಸಚಿವಾಲಯವನ್ನು…

5 hours ago

ಪ್ರಣವ್ ಮೆಂಡನ್ ಫಿಸಿಯೋಥೆರಪಿ ಪದವಿ ಪ್ರದಾನ

ಕಲಬುರಗಿ : ಜಿಲ್ಲಾ ಹೋಟೆಲ್ ಅಸೋಸಿಯೇಷನ್ ನ ಕಾರ್ಯದರ್ಶಿ ಹಾಗೂ ವಿಮಾನ ನಿಲ್ದಾಣ ಪ್ರಾಧಿಕಾರದ ಸದಸ್ಯರಾದ ನರಸಿಂಹ ಮೆಂಡನ್ ಅವರ…

5 hours ago

ಕನ್ನಡ ಸಾಹಿತ್ಯಕ್ಕೆ ಕಮಲ ಹಂಪನಾ ಕೊಡುಗೆ ಅಪಾರ: ಹಣಮಂತ್ರಾಯ ಕಾಳನೂರ

ಯಾದಗಿರಿ : ಆಧುನಿಕ ಸಾಹಿತ್ಯದ ಪ್ರಕಾರಗಳಾದ ನವ್ಯ,ನವೋದಯ,ಪ್ರಗತಿಶೀಲ,ದಲಿತ ಬಂಡಾಯದ ಕಾವ್ಯ,ಕಥೆ,ಕಾದಂಬರಿ ಹಾಗೂ ನಾಟಕ ಮುಂತಾದ ಪ್ರಕಾರಗಳಲ್ಲಿ ಸ್ತ್ರೀ ಸಂವೇದನೆಗೆ ವಿಶೇಷವಾದ…

6 hours ago

ನಾಡೋಜ ಪಾಟೀಲ್ ಪುಟ್ಟಪ್ಪ ಸ್ಮಾರಕ ಮಾಧ್ಯಮ ಪ್ರಶಸ್ತಿ ಪ್ರದಾನ: ಜುಲೈ 7ರಂದು

ಬೆಂಗಳೂರು: ಜಗತ್ತಿನ ಪ್ರಚಲಿತ ವಿದ್ಯಮಾನಗಳ ಮಾಹಿತಿ ನೀಡುವ ಪತ್ರಕರ್ತರು ಹಗಲುರಾತ್ರಿ ಎನ್ನದೇ ಕಷ್ಟವಾದರೂ ಇಷ್ಟಪಟ್ಟು ವರದಿ ಮಾಡುವ ಮಾಧ್ಯಮ ಮಿತ್ರರಿಗೆ,…

10 hours ago