ಸುರಪುರ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುರಪುರ ಶಾಖೆ ವತಿಯಿಂದ ನಗರದ ವಿದ್ಯಾರ್ಥಿಗಳ ವಸತಿ ನಿಲಯದ ಆವರಣದಲ್ಲಿರುವ ಶ್ರೀ ಆಂಜನೇಯ ದೇವಸ್ಥಾನದ ಆವರಣದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ವಿಶೇಷವಾಗಿ ಆಚರಿಸಲಾಯಿತು.
ಈ ಸಂದರ್ಬದಲ್ಲಿ ಬಿಎಸ್‍ಎಫ್ ಮಾಜಿ ಯೋಧರಾದ ವಿಶ್ವನಾಥ್ ಪತ್ತಾರ್ ಮತ್ತು ವಸತಿ ನಿಲಯದ ಅಧಿಕಾರಿಗಳಾದ ಶಿವು ಕುಮಾರ್ ಹಾಗೂ ಎಬಿವಿಪಿ ಯ ಡಾ: ಉಪೇಂದ್ರ ನಾಯಕ್ ಸುಬೇದಾರ್ ವೇದಿಕೆಯಲ್ಲಿದ್ದರೂ.
ಕಾರ್ಯಕ್ರಮ ದಲ್ಲಿ ಉಪನ್ಯಾಸಕರಾದ ಡಾ:ಉಪೇಂದ್ರ ನಾಯಕ್ ವಿದ್ಯಾರ್ಥಿ ಪರಿಷತ್ ಕುರಿತು ಮಾತನಾಡಿದರು ಹಾಗೆಯೇ ಬಿಎಸ್‍ಎಫ್ ಮಾಜಿ ಯೋಧ ರಾದ ವಿಶ್ವನಾಥ್ ಮಾತನಾಡಿ, ದೇಶದ ರಕ್ಷಣೆ ಪ್ರತಿಯೊಬ್ಬ ಯುವಕನ ಕರ್ತವ್ಯವಾಗಿದೆ , ಪ್ರತೀ ಯುವಕನ ಕೈಯಲ್ಲಿ ದೇಹದ ಭವಿಷ್ಯ ಮತ್ತು ಆಭಿರುದ್ದಿ ಅಡಗಿದೆ.ಹಾಗೂ ನಮ್ಮ ದೇಶದ ಸೈನ್ಯ ದೇಶದ ರಕ್ಷಣೆ ಮಾಡುತ್ತಿದೆ.ಇದಕ್ಕೆ ಎಲ್ಲರೂ ಕೃತಜ್ಞ ರಾಗಿ ಇರಬೇಕಾಗುತ್ತದೆ ಎಂದು ಮಾತನಾಡಿದರು.
ವಸತಿ ನಿಲಯದ ಅಧಿಕಾರಿಗಳಾದ ಶಿವು ಕುಮಾರ್ ಅವರು ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಕುರಿತು ಮಾತನಾಡಿದರು. ಸ್ವಾಗತವನ್ನು ಕಾರ್ಯಕರ್ತರಾದ ಶರಣ ಬಸವ, ನಿರೂಪಣೆ ದೇವರಾಜ ಮತ್ತು ವಂದನಾರ್ಪಣೆ ಕಾರ್ಯದರ್ಷಿ ವಿನೋದ್ ಮಾಡಿದರು. ಸಂದರ್ಬದಲ್ಲಿ ವಿದ್ಯಾರ್ಥಿನಿ ಪ್ರಮುಖರು ಸವಿತಾ ಅಂಬಿಕಾ ಮಾಯಾವತಿ ಕಾವೇರಿ ಲಕ್ಷ್ಮಿ ಹಾಗೂ ವಿದ್ಯಾರ್ಥಿ ಪ್ರಮುಖರಾದ ಸುನಿಲ್ ತಿಮ್ಮಯ್ಯ ಅಭಿಷೇಕ್ ಹಾಗೂ ವಸತಿ ನಿಲಯದ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಇದೆ ಸಂದರ್ಬದಲ್ಲಿ ಇದೆ ವರ್ಷದಲ್ಲಿ ನಿವೃತ್ತರಾದ ಬಿಎಸ್‍ಎಫ್ ನ ಯೋಧರಾದ ವಿಶ್ವ ನಾಥ ಪತ್ತಾರ್ ಅವರಿಗೆ ಸನ್ಮಾನ ಮಾಡಿ .ನಂತರ ಸರಸ್ವತಿ ವಂದನೆ ಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯ ಗೊಳಿಸಲಾಹಿತು