ಶಹಾಬಾದ:ಸಿದ್ಧರಾಮೇಶ್ವರರು ಕಾಯಕ, ದಾಸೋಹ ಪ್ರಜ್ಞೆಯನ್ನು ಬೆಳೆಸಿದ ಶರಣರು ನಾಡಿನ ಎಲ್ಲ ಸಮಾಜಕ್ಕೂ ಆದರ್ಶಪ್ರಾಯರು ಎಂದು ನಗರಸಭೆಯ ವ್ಯವಸ್ಥಾಪಕ ಶರಣಗೌಡ ಪಾಟೀಲ ಹೇಳಿದರು.
ಅವರು ರವಿವಾರ ನಗರಸಭೆಯಲ್ಲಿ ಆಯೋಜಿಸಲಾದ ಸಿದ್ಧರಾಮೇಶ್ವರರ ಜಯಂತಿಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಕಾಯಕಕ್ಕಿಂತ ಮಿಗಿಲಾದುದು ಯಾವುದು ಇಲ್ಲ. ವಿಶ್ವದ ಎಲ್ಲಾ ಜೀವರಾಶಿಗಳಿಗೆ ಹೊಟ್ಟೆ ತುಂಬಿಸುವ ಕಾರ್ಯ ಕಾಯಕದಿಂದ ಮಾತ್ರ ಸಾಧ್ಯ. ಕಾಯಕ ಸತ್ಯ ಮತ್ತು ಶುದ್ಧವಾಗಿರಬೇಕು.ಯಾವುದೇ ಅನಾಚಾರದ ಮೂಲಕ ಗಳಿಸುವ ಹಣ ಸತ್ಪಾತ್ರಕ್ಕೆ ಸಲ್ಲುವುದಿಲ್ಲ. ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಕಾಯಕ ಮಾಡುವ ಸಂಸ್ಕøತಿಯನ್ನು ಬೆಳೆಸಿದವರು ಶರಣರು ಎಂದು ಹೇಳಿದರು.
ಕನಕಪ್ಪ ದಂಡಗುಲಕರ್ ಮಾತನಾಡಿ, ಸಿದ್ಧರಾಮೇಶ್ವರ ಅಂತಹ ಮಹಾ ಶರಣರ ಜಯಂತಿ ಆಚರಿಸುವುದು ಸಂತೋಷದ ವಿಷಯ.ಆದರೆ ಇದು ಕೇವಲ ವರ್ಷಕ್ಕೊಮ್ಮೆ ಎಂಬಂತೆ ಕಾಟಾಚಾರಕ್ಕಾಗಿ ಆಚರಿಸದೇ, ಅವರ ನಿಜವಾದ ತತ್ವಗಳನ್ನು ಅಳವಡಿಸಿಕೊಳ್ಳುವ ಮೂಲಕ ಶರಣರು ಕಂಡಂತಹ ಕಲ್ಯಾಣ ರಾಜ್ಯವನ್ನು ಮತ್ತೆ ಮರು ಸ್ಥಾಪಿಸಬಹುದು ಎಂದು ಹೇಳಿದರು.
ಭೋವಿ ವಡ್ಡರ ಸಮಾಜ ಸೇವಾ ಸಂಘದ ತಾಲೂಕಾಧ್ಯಕ್ಷರಾದ ಕಳ್ಳೋಳ್ಳಿ ಬಿ. ಕುಸಾಳೆ,ನಗರ ಅಧ್ಯಕ್ಷರಾದ ಭೀಮರಾವ ಸಾಳೂಂಕೆ,ನಾಗರಾಜ ಮೇಲಗಿರಿ,ದೇವದಾಸ ಜಾಧವ,ಸಿದ್ರಾಮ ಕುಸಾಳೆ,ಶಂಕರ ಕುಸಾಳೆ,ನಗರಸಭೆ ಸದಸ್ಯರಾದ ಲಕ್ಷ್ಮೀಬಾಯಿ ಕುಸಾಳೆ,ಗೋವಿಂದಸ್ವಾಮಿ ಕುಸಾಳೆ, ಅಭೀμÉಕ ದೇವಕರ,ಉಮೇಶ ನಿಂಬಾಳಕರ,ದತ್ತು ಕುಸಾಳೆ,ಹಾಗೂ ಸಮಾಜದ ಬಂದುಗಳು,ನಗರಸಭೆ ಸಿಬ್ಬಂದಿಗಳು ಉಪಸ್ಥಿತರಿದ್ದರು.