ಜೇವರ್ಗಿ: ಇಲ್ಲಿನ ಶ್ರೀ ಸಾಯಿ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಭಾರತ ಬಿಟ್ಟು ತೊಲಗಿ ಚಳುವಳಿಯ 77ನೆಯ ವರ್ಷದ ದಿನವಾದ ಇಂದು ವಿದ್ಯಾರ್ಥಿ ಯುವಕರು ಉದ್ಯೋಗಕ್ಕಾಗಿ ನಿರುದ್ಯೋಗ ಭಾರತ ಬಿಟ್ಟು ತೊಲಗಿ ಚಳುವಳಿ ಕೈಗೊಳ್ಳಬೇಕಾಗಿದೆ ಎಂದು ರಾಜು ವಿ ಮುದ್ದಡಗಾ ಆಗ್ರಹಿಸಿದ್ದಾರೆ.
ಸಂಪನ್ಮೂಲ ಭಾಷಣಕಾರರಾಗಿ ಆಗಮಿಸಿ ಮಾತನಾಡಿ ನಮ್ಮ ದೇಶದಲ್ಲಿ ಪ್ರತಿವರ್ಷ 60, 70 ಲಕ್ಷ ಜನ ನಿರುದ್ಯೋಗಿಗಳು ಪಡೆದುಕೊಂಡು ಹೊರಜಗತ್ತಿಗೆಬರುತ್ತಿದ್ದಾರೆ. ಸರಕಾರವು ಖಾಸಗೀಕರಣ ಹಾಗೂ ಜಾಗತೀಕರಣದ ಪರಿಣಾಮವಾಗಿ ಇರುವ ಉದ್ಯೋಗಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೆ ಉದ್ಯೋಗವನ್ನು ಮಾಡಲು ತರಬೇತಿಯನ್ನು ಹೊಂದಿರುವ ಪದವೀಧರರಿಗೆ ಸರಕಾರ ಗುತ್ತಿಗೆ ಪದ್ಧತಿ ಮೂಲಕ ಉದ್ಯೋಗದ ಭದ್ರತೆ ಕಸಿದುಕೊಳ್ಳುವ ಮೂಲಕ ಸರಕಾರ ಮೋಸ ಮಾಡುತ್ತಿದೆ ಎಂದರು.
ಅಧ್ಯಕ್ಷತೆ ಶ್ರೀ ಕಾಲೇಜಿನ ಪ್ರಾಚಾರ್ಯರಾದ ಅಭಿನವ ಹೊಸಮನಿ ವಹಿಸಿದ್ದರು. ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಜಿಲ್ಲಾ ಸಂಚಾಲಕರಾದ ನಾಗರಾಜ ಶರಣು ಅತಿಥಿ ಸ್ಥಾನವನ್ನು ವಹಿಸಿದ್ದರು.
ಉಪನ್ಯಾಸಕರಾದ, ಬಸವರಾಜ್. ಮೌನೇಶ್. ಸಾಯಿ ಗಣೇಶ್ ಭಾಗವಹಿಸಿದ್ದರು ಪ್ರಾರ್ಥನ ಗೀತೆಯನ್ನು ವಿದ್ಯಾರ್ಥಿನಿ ಭಾಗಮ್ಮ ಹಾಡಿದರು ,ಕಾರ್ಯಕ್ರಮವನ್ನು ಶ್ರೀಕಾಂತ್ ಹೊಸ್ಮನಿ ನಿರೂಪಿಸಿದರು.