ಮೋದಿ ಸಾಹೇಬರು ಹೇಳಿದ ಮಾತು ಯಾರಿಗೂ ಹೇಳುವುದಿಲ್ಲ: ಕುತೂಹಲ ಕೆರಳಿಸಿದ ರಾಜುಗೌಡ ಹೇಳಿಕೆ

ಬಿಜೆಪಿ ವಿಜಯ ಸಂಕಲ್ಪ ಅಭಿಯಾನ: ಮತಕ್ಷೇತ್ರದಲ್ಲಿ ಬಿಜೆಪಿ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಇಂದು ಅಂದರೆ 21ನೇ ತಾರೀಖಿನಿಂದ 29ನೇ ತಾರೀಖಿನವರೆಗೆ ಒಂದು ಈ ಅಭಿಯಾನ ನಡೆಯಲಿದೆ.ನಮ್ಮ ಸರಕಾರದ ಸಾಧನೆ,ಕ್ಷೇತ್ರದಲ್ಲಿನ ಅಭಿವೃಧ್ಧಿ ಕಾರ್ಯಗಳು,ಸರಕಾರದ ಯೋಜನೆಗಳ ಕುರಿತು ಪ್ರತಿ ಮನೆ ಮನೆಗೆ ಹೋಗಿ ತಿಳಿಸಲು ವಿವಿಧ ತಂಡಗಳನ್ನು ಮಾಡಲಾಗಿದ್ದು,ನಮ್ಮ ಪಕ್ಷದ ಯುವ ಮುಖಂಡರು ತಂಡಗಳ ನೇತೃತ್ವವಹಿಸಲಿದ್ದು ಈ ತಂಡಗಳು ಪ್ರತಿ ಮನೆಗು ನಮ್ಮ ಸಾಧನೆಗಳನ್ನು ತಿಳಿಸಲಿದೆ ಎಂದು ತಿಳಿಸಿದರು.

ಸುರಪುರ:ಇದೇ 19 ರಂದು ನಡೆದ ಪ್ರಧಾನ ಮಂತ್ರಿಗಳ ಕಾರ್ಯಕ್ರಮದ ಕುರಿತು ಶ್ರಮಿಸಿದವರಿಗೆ ಕೃತಜ್ಞತೆ ತಿಳಿಸಲು ನಗರದ ಬಿಜೆಪಿ ಕಚೇರಿಯಲ್ಲಿ ಶಾಸಕ ನರಸಿಂಹ ನಾಯಕ (ರಾಜುಗೌಡ) ಸುದ್ದಿಗೋಷ್ಠಿ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು,ಸ್ಕಾಡಾ ಗೇಟ್‍ಗಳ ಉದ್ಘಾಟನೆ ಹಾಗೂ ಇತರೆ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರ ಕಾರ್ಯಕ್ರಮದ ಯಶಸ್ಸಿಗೆ ಹಲವರು ಹಗಲಿರಳೆನ್ನದೆ ಶ್ರಮವಹಿಸಿದ್ದಾರೆ,ಅದರಲ್ಲಿ ಜಿಲ್ಲಾಧಿಕಾರಿಗಳಾದ ಸ್ನೇಹಲ್ ಆರ್ ಅವರು ಒಂದು ವಾರದ ಕಾಲ ಇಲ್ಲೆ ಇದ್ದು ಹಗಲಿರಳು ಶ್ರಮಿಸಿದರು,ಅದರಂತೆ ಎಸ್ಪಿ ಡಾ:ಸಿ.ಬಿ ವೇದಮೂರ್ತಿಯವರು ಸೇರಿದಂತೆ ಪೊಲೀಸ್ ಇಲಾಖೆ,ಕಂದಾಯ ಇಲಾಖೆ ಹೀಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಶ್ರಮಿಸಿದ್ದಾರೆ ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುವೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರನ್ನು ಕಂಡು ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿಯವರು ತುಂಬಾ ಸಂತೋಷ ವ್ಯಕ್ತಪಡಿಸಿದ್ದಾರೆ,ಅದರಂತೆ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಮತ್ತು ಇತರೆ ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರನ್ನು ಮತ್ತು ಯಾವುದೇ ಲೋಪಗಳಿಲ್ಲದೆ,ಗದ್ದಲವಿಲ್ಲದೆ ಜನರು ಭಾಗವಹಿಸಿದ್ದು ಕಂಡು ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದರು.ಸುಮಾರು ನಾಲ್ಕುವರೆ ಲಕ್ಷದಷ್ಟು ಜನರು ಭಾಗವಹಿಸಿದ್ದರು,ಅದರಲ್ಲಿ ವಿಶೇಷವಾಗಿ ಸುಮಾರು 90 ಸಾವಿರದಷ್ಟು ಮಹಿಳೆಯರು ಭಾಗವಹಿಸಿದ್ದರು,ಆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಅದರಂತೆ ಪ್ರಧಾನ ಮಂತ್ರಿಗಳು ಕಾರ್ಯಕ್ರಮದ ಕುರಿತು ತಮಗೆ ಏನಾದರು ಹೇಳಿದರೆ ಎನ್ನುವ ಮಾತಿಗೆ ನಗುನಗುತ್ತಲೆ ಮಾತನಾಡಿದ ಶಾಸಕರು,ಅಭಿನಂದನ್ ಎಂದರು.

ಅದನ್ನು ಹೊರತುಪಡಿಸಿ ಇನ್ನುಳಿದಂತೆ ಹೇಳಿದ ಮಾತನ್ನು ಹೇಳಲಾಗದು ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದರು.ನರೇಂದ್ರ ಮೋದಿಜಿಯವರನ್ನು ನೋಡುವುದೆ ಒಂದು ಭಾಗ್ಯ,ಇನ್ನು ಅವರಿಗೆ ನಮಿಸುವುದು ಸೌಭಾಗ್ಯ ನಮಗೆಲ್ಲರಿಗೆ ಅದಕ್ಕಿಂತಲೂ ಮಿಗಿಲಾದ ಸಂತೋಷ ಮೂಡಿಸಿದೆ ಎಂದು ಆನಂದದಲ್ಲಿ ನುಡಿದರು.

ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ),ಬಿಜೆಪಿ ಸುರಪುರ ಮಂಡಲ ಅಧ್ಯಕ್ಷ ಮೇಲಪ್ಪ ಗುಳಗಿ,ಸಂಘ ಪರಿವಾರದ ವಿಸ್ತಾರಕ ಶಂಕರ,ಶಂಕರ ನಾಯಕ ಉಪಸ್ಥಿತರಿದ್ದರು.

emedialine

Recent Posts

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

5 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

8 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

12 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

13 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

15 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

1 day ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420