ಕಲಬುರಗಿ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರವಾಹ ಪಿಡಿತ ಪ್ರದೇಶಗಳಿಗೆ ಎಸ್.ಡಿ.ಪಿ.ಐ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸಂಯುಕ್ತ ಆಶ್ರಯದಲ್ಲಿ ನೆರೆ ಸಂತ್ರಸ್ತರಿಗೆ ಆಹಾರ ಹಾಗೂ ರಕ್ಷಣೆ ಕಾರ್ಯಾ ಹಮ್ಮಿಕೊಳಲ್ಲಾಗಿದೆ ಎಂದು ಕಲಬುರಗಿ ಎಸ್.ಡಿ.ಪಿ.ಐ ಜಿಲ್ಲಾ ಸಮಿತಿಯ ಅಧ್ಯಕ್ಷ ಮೊಹಮ್ಮದ್ ಮೋಹಸಿನ್ ಅವರು ತಿಳಿಸಿದರು.
ಎಸ್‌ಡಿಪಿಐ ರಾಜ್ಯ ಅಧ್ಯಕ್ಷ ಜನಬ್ ಮೊಹಮ್ಮದ್ ಇಲ್ಯಾಸ್ ಸಹಾಬ್ ಮತ್ತು ಉತ್ತರ ಕರ್ನಾಟಕ ವಲಯ ಅಧ್ಯಕ್ಷ ಶಾಹಿದ್ ನಸೀರ್ ಅವರು ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನಡೆಯುತ್ತಿರುವ ಪರಿಹಾರ ಕಾರ್ಯಗಳನ್ನು ತಮ್ಮ ಕಾರ್ಯಕರ್ತರು ಮೇಲ್ವಿಚಾರಣೆ ಮಾಡುತ್ತಿದ್ದಾರೆ.
ಎಸ್‌ಡಿಪಿಐ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೆಟ್ ಮತ್ತು ಸೈಯದ್ ಇಶಾಕ್ ಹುಸೇನ್ ಹಾಗೂ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ನೇತೃತ್ವದಲ್ಲಿ ಆಹಾರ ವ್ಯವಸ್ಥೆ, ತಾತ್ಕಾಲಿಕ ಶೆಡ್‌ಗಳ ತಯಾರಿಕೆ, ಗೃಹೋಪಯೋಗಿ ವಸ್ತುಗಳನ್ನು ಸ್ಥಳಾಂತರಿಸುವುದು, ವೃದ್ಧರನ್ನು ಮತ್ತು ಮಕ್ಕಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವುದು ಇತ್ಯಾದಿಗಳು ಈ ಸ್ವಯಂಸೇವಕರು ನಡೆಸುತ್ತಿದ್ದಾರೆ.
ಜಮ್ಖಂಡಿ ತಾಲ್ಲೂಕಿನಲ್ಲಿ ಜನರನ್ನು ರಕ್ಷಿಸಲು ಮತ್ತು ಪುನರ್ವಸತಿ ಕಲ್ಪಿಸಲು ನಮ್ಮ ಕಾರ್ಯಕರ್ತರು ಕಂಕಣವಾಡಿ, ಕನಕೋಲ್, ಅಲಗೂರ್, ಕುಂಬರಹಲ್, ಸನಾಲ್, ಹಿರೆಪದಾಸಲಗಿ, ಹಿಪ್ಪರಗಿ, ಜನವಾಡ್, ಸೌದ್, ಆಸಂಗಿ, ಧವಲೇಶ್ವರ, ಕುಂಚನೂರು, ಜಂಬಗಿ, ತಂಬಾಚಿ, ಸುರಪಾಲ, ತಕ್ಕಡಗಿ, ಮೈಗುರು, ಮ್ಯಾಥಿಯು ಸೇರುದಂತೆ ಮುಂತಾದ ಸ್ಥಳಗಳಲ್ಲಿ ರಕ್ಷಣೆ ಕಾರ್ಯಾದಲ್ಲಿ ತೊಡಗಿದ್ದಾರೆಂದು ಅವರು ತಿಳಿಸಿದರು.