ಸುರಪುರ:ಸಾರ್ವಜನಿಕ ಶಿಕ್ಷಣ ಇಲಾಖೆ,ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಸುರಪುರ ಇವರುಗಳ ವತಿಯಿಂದ ಪೇಠ ಅಮ್ಮಾಪುರ ಕ್ಲಷ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮವನ್ನು ನಡೆಸಲಾಯಿತು.
ತಾಲೂಕಿನ ಬೋನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಪೂಜಾರ್ ಚಾಲನೆ ನೀಡಿದರು.
ಗ್ರಾಮದ ಬಸವಣ್ಣ ದೇವಸ್ಥಾನದಿಂದ ಗ್ರಾಮದ ತುಂಬೆಲ್ಲ ಅದ್ದೂರಿ ಮೆರವಣಿಗೆ ಮೂಲಕ ಶಾಲೆಗೆ ಆಗಮಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಹೇಶ್ ಪೂಜಾರ್ ಮಾತನಾಡಿ, ಪ್ರತಿಯೊಬ್ಬ ಮಕ್ಕಳು ಭಾಷೆ ಗಣಿತ ವಿಷಯವನ್ನು ತುಂಬಾ ಚೆನ್ನಾಗಿ ಕಲಿಯುವುದು ಮಾಡಿ ಕಲಿ ಊರು ಸುತ್ತೋಣ ಮಕ್ಕಳು ತುಂಬಾ ಚೆನ್ನಾಗಿ ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದಾಗಿದೆ ಎಂದು ಅಭಿಪ್ರಾಯಪಟ್ಟರು ಮಕ್ಕಳನ್ನು ನಿರಂತರವಾಗಿ ಶಾಲೆಗೆ ಕಳುಹಿಸಲು ಪಾಲಕರಲ್ಲಿ ವಿನಂತಿಸಿಕೊಂಡರು.
ಪ್ರಾಸ್ತಾವಿಕವಾಗಿ ಬಿ ಆರ್ ಪಿ ಕಾಂತೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಪಂಡಿತ ನಿಂಬೂರ ಅಜೀಮ್ ಪ್ರೇಮ್ ಜಿ ಫೌಂಡೇಶನ್ ನ ಅನ್ವರ್ ಜಮಾದಾರ್ ಸಂಗನಗೌಡ ಬೆಳ್ಳಿ ಮಾತನಾಡಿದರು.
ವೇದಿಕೆಯಲ್ಲಿ ವೀರಭದ್ರಯ್ಯ ಸ್ವಾಮಿ ಕಾಮೆಂಟ್ ಚೆನ್ನಮ್ಮ ಹಿರೇಮಠ ರೇಷ್ಮಾ ಬೇಗಮ್ ಭೀಮಪ್ಪ ಲಕ್ಷ್ಮಿ ಶಿಕ್ಷಣ ಸಂಯೋಜಕರಾದ ಹಳ್ಳೆಪ್ಪ ಖಜಾಂಚಿ ಸಣ್ಣ ಹನುಮಂತಪ್ಪ ಸಿ ಆರ್ ಪಿ ಗಳಾದ ದೊಡ್ಡ ಮಲ್ಲಿಕಾರ್ಜುನ್ ಮಲ್ಲಿಕಾರ್ಜುನ್ ವಿನೋದ್ಕುಮಾರ ಯಾದವ್ ಸಿದ್ದರಾಮಪ್ಪ ಮಖ್ತುಂ ಶಿಕ್ಷಕರಾದ ಶರಣುಪಾಕ್ ರೆಡ್ಡಿ,ಹೇಮನೂರಪ್ಪ, ಮನೋಹರ್, ಚೆನ್ನಮ್ಮ ಪಾಟೀಲ್, ಅಕ್ಕುಬಾಯಿ, ಪೇಟ ಅಮ್ಮಾಪುರ್ ಕ್ಲಸ್ಟರ್ನ ಎಲ್ಲಾ ಶಾಲೆಯ ಶಿಕ್ಷಕರು ಅತಿಥಿ ಶಿಕ್ಷಕರುಹಾಗೂ ಗ್ರಾಮದ ಹಿರಿಯರು ಪಾಲಕರು ಪೋಷಕರು ಎಸ್ ಡಿ ಎಂ ಸಿ ಸದಸ್ಯರೆಲ್ಲರೂ ಭಾಗವಹಿಸಿದ್ದರು ನೀಲಕಂಠಯ್ಯ ಸ್ವಾಮಿ ನಿರೂಪಿಸಿದರು ಮಲ್ಲಿಕಾರ್ಜುನ್ ವಂದಿಸಿದರು.