ಕಲಬುರಗಿ: ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಮುನ್ನೆಲೆಗೆ ತರುವಲ್ಲಿ ಕಲಿಕಾ ಹಬ್ಬ ವಿಶೇಷ ಕಾರ್ಯಕ್ರಮವಾಗಿದ್ದು, ಕಲಿಕಾ ಪರಿಸರ ನಿರ್ಮಾಣಕ್ಕೆ ಬಹುದೊಡ್ಡ ಕೊಡುಗೆಯಾಗಿದೆ ಎಂದು ಪಂಚಾಯತ ಅಭಿವೃದ್ಧಿ ಅಧಿಕಾರಿ ಸಂಗೀತಾ ಬಿರಾದಾರ ಹೇಳಿದರು.
ಕಮಲಾಪುರದ ಡೊಂಗರಗಾಂವ ಕ್ಲಸ್ಟರಿನ ‘ಕಲಿಕಾ ಹಬ್ಬ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಗುವಿನ ಹೊರ ಬದುಕಿನ ಅನುಭವಗಳು ಅನಾವರಣಗೋಳಿಸುವ ಕಲಿಕಾ ಪ್ರಕ್ರಿಯೆ ಇದಾಗಿದ್ದು, ವಿಶೇಷತೆಗೆ ಸಾಕ್ಷಿಯಾಗಿದೆ ಎಂದರು.
ಕಲಬುರಗಿ ಉತ್ತರ ವಲಯದ ಶಿಕ್ಷಣ ಸಂಯೋಜಕ ಮಹಾದೇವಪ್ಪ ಚಿಂಚೋಳಿ ಕಾರ್ಯಕ್ರಮ ಉದ್ಘಾಟಿಸಿ ಕಲಿಕಾ ಹಬ್ಬ ಬೌದ್ಧಿಕ ವಿಕಸನಕ್ಕೆ ಪೂರಕವಾಗಿದೆ ಎಂದರು. ನೋಡಲ್ ಅಧಿಕಾರಿ ಸುನೀತಾ ಬಿರಾದಾರ ಮಾತನಾಡಿ ಕಲಿಕಾ ಹಬ್ಬ ಮಕ್ಕಳ ಅನುಭವ ಕೇಂದ್ರಿತ ಕಲಿಕೆಯ ಹೆಜ್ಜೆ ಗುರುತಾಗಿದ್ದು ಸಾಮಾಜಿಕ ಕೌಶಲ್ಯಗಳನ್ನು ಗಟ್ಟಿಗೊಳಿಸುವ ಪ್ರಮುಖ ಯೋಜನೆಯಾಗಿದೆ ಎಂದು ಮಚ್ಚುಗೆ ವ್ಯಕ್ತಪಡಿಸಿದರು. ಗ್ರಾಪಂ. ಅಧ್ಯಕ್ಷೆ ಅಶ್ವಿನಿ ಮೂಕೆ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ರಕ್ಷಣಾ ವೇದಿಕೆಯ ಜಗನ್ನಾಥ ಮೂಕೆ, ಸಿ.ಆರ್.ಪಿ. ಉಮೇಶ, ತುಕಾರಾಮ, ಹಣಮಂತ, ಮಲ್ಲಿಕಾರ್ಜುನ, ಹಿರಿಯ ಶಿಕ್ಷಕರಾದ ಪ್ರಮಿಳಾ, ಮಹಾದೇವಿ, ಡಾಕುನಾಯಕ, ಪದ್ಮಾವತಿ, ಹೇಮಾವತಿ, ಧರ್ಮಣ್ಣ, ಬಸವರಾಜ ಇದ್ದರು.
ಡೊಂಗರಗಾಂವ ವ್ಯಾಪ್ತಿಯಲ್ಲಿನ ಎಲ್ಲ ಶಾಲಾ ಮಕ್ಕಳೊಂದಿಗಿನ ಕಲಿಕಾ ಹಬ್ಬದ ಭವ್ಯ ಮೆರವಣಿಗೆ ಗ್ರಾಮಸ್ಥರಿಂದ ಚಾಲನೆಗೊಂಡು, ಮಕ್ಕಳ ಡೊಳ್ಳು ಕುಣಿತ, ಲೇಜಿಮ್, ಲಂಬಾಣಿ ನೃತ್ಯ, ಭಜನೆ, ಛದ್ಮವೇಷಗಳೆಲ್ಲವೂ ಎಲ್ಲರನ್ನು ರಂಜಿಸಿದವು, ಶಾಲಾ ಕೋಣೆಗಳ ನಾಲ್ಕು ಮೂಲೆಗಳಲ್ಲಿನ ಕಲಿಕಾ ಹಬ್ಬದ ಚಟುವಟಿಕೆಗಳು ವಿದ್ಯಾರ್ಥಿಗಳ ಕೌಶಲತೆಗೆ ಗಮನ ಸೆಳೆದವು.
ಸಿ.ಆರ್.ಪಿ. ಮಹಾದೇವ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಆರ್.ಪಿ. ಪ್ರವೀಣ ಕಲಿಕಾ ಹಬ್ಬದ ಮಹತ್ವ ಕುರಿತಾದ ಕವಿತೆ ವಾಚನಗೈದರು. ಮಹಾದೇವಿ ಪ್ರಸನ್ನ ಪ್ರಾರ್ಥನೆಗೈದರು. ಶಾಲಾ ಶಿಕ್ಷಕ ಭೀಮಾಶಂಕರ ರಾಜೇಶ್ವರ ನಿರೂಪಿಸಿದರು. ನಬೀಸಾಬ ಮೋಮಿನ್ ಸ್ವಾಗತಿಸಿದರು, ಡಾ. ಸೂರ್ಯಕಾಂತ ಪಾಟೀಲ ವಂದಿಸಿದರು.
ಹೋಳಿಗೆ ಉಣಬಡಿಸಿದ ಗ್ರಾಮ ಪಂಚಾಯತ ಮಾಜಿ ಅದ್ಯಕ್ಷ ಅನಿಲಕುಮಾರ ಬೆಳಕೇರಿ, ಸದಸ್ಯರಾದ ರೇವಣಸಿದ್ದಪ್ಪ ಸುತಾರ, ಪಂಚಾಯತಿಯ ಶಿವುಕುಮಾರ ಹಾಗೂ ಕಲಿಕಾ ಹಬ್ಬದ ಸಂಪನ್ಮೂಲ ವ್ಯಕ್ತಿಗಳಾದ ಅಂಗದರಾವ ಪಾಟೀಲ, ಜ್ಯೋತಿ, ಸಂಜೀವಕುಮಾರ, ಬಾಲಿಕಾ ಹಾಗೂ ನೀಲಮ್ಮ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.