ಸ್ನೇಹ ಗಂಗಾ ವಾಹಿನಿ ಹೆಮ್ಮರವಾಗಿ ಬೆಳೆಯಲಿ: ದತ್ತಾತ್ರೇಯ ಸಿ ಪಾಟೀಲ ರೇವೂರ

0
18

ಕಲಬುರಗಿ; ನಗರದ ಕಸ್ತೂರಬಾಯಿ ಪಿ ಬುಳ್ಳಾ ಸಾಂಸ್ಕøತಿಕ ಸಭಾ ಭವನದಲ್ಲಿ ಅಖಿಲ ಕರ್ನಾಟಕ ಸ್ನೇಹ ಗಂಗಾ ವಾಹಿನಿಯ ಶಾಲಾ ಕಾಲೇಜುಗಳ ವಾರ್ಷಿಕೋತ್ಸವ ಸಮಾರಂಭವನ್ನು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಹಾಗೂ ಕಲಬುರಗಿ ದಕ್ಷಿಣ ಮತ ಕ್ಷೇತ್ರದ ಶಾಸಕ ದತ್ತಾತ್ರೇಯ ಸಿ ಪಾಟೀಲ ರೇವೂರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ನಂತರ ಮಾತನಾಡುತ್ತಾ ನಗರದ ಹೃದಯ ಭಾಗದಲ್ಲಿರುವ ಅಖಿಲ ಕರ್ನಾಟಕ ಸ್ನೇಹ ಗಂಗಾ ವಾಹಿನಿಯ ಪ್ರಾಥಮಿಕ ಶಾಲೆ, ಪದವಿ ಪೂರ್ವ, ಪದವಿ ಮಹಾವಿದ್ಯಾಲಯ ಹೊಂದಿರುವ ಈ ಸಂಸ್ಥೆ ಸಂತೋಷ ಕಾಲೂನಿ, ವಿವೇಕಾನಂದ ನಗರ ಗಂಗಾನಗರ, ಮಾಣಿಕೇಶ್ವರಿ ಕಾಲೂನಿ ಮತ್ತು ಚೌಡೇಶ್ವರಿ ಕಾಲೂನಿಗಳ ಮಧ್ಯಭಾಗದಲ್ಲಿ ಇದ್ದು ಬಡ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಶಿಕ್ಷಣ ಕೊಡಿಸುವ ಮೂಲಕ ಉತ್ತಮ ಗುಣಮಟ್ಟದ ಶೈಕ್ಷಣಿಕ ಸಂಸ್ಥೆಯಾಗಿ ಬೆಳೆದು ಸಂಸ್ಥಾಪಕರಾದ ಪೆÇ್ರ.ಎಸ್ ಎಸ್ ಅಲಗೂರ,ಪೆÇ್ರ.ಬಿ.ಜಿ.ನಾಟಿಕಾರ, ಪೆÇ್ರ.ಎಲ್ ಬಿ ಹಿಟ್ಟಿನ ಅವರ ಕನಸಿನ ಕೂಸಾಗಿದ್ದು,ಈ ಸಂಸ್ಥೆ ಹೆಸರು ಎತ್ತರಕ್ಕೆ ಬೆಳೆಸಿದ ಕೀರ್ತಿ ಈಗಿನ ಗೌರವಾಧ್ಯಕ್ಷರಾದ ಡಾ.ಬಿ.ಪಿ.ಬುಳ್ಳಾ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಹೆಮ್ಮರವಾಗಿ ಬೆಳೆಯಲಿ ನಮ್ಮ ಸಹಕಾರವು ಸಹ ಇರುತ್ತದೆ ಎಂದು ಮಾತನಾಡಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಗೌರವಾಧ್ಯಕ್ಷರಾದ ಡಾ.ಬಿ ಪಿ ಬುಳ್ಳಾ ವಹಿಸಿ ಮಾತನಾಡುತ್ತಾ ನಮ್ಮ ಸಂಸ್ಥೆಗೆ ಸರ್ಕಾರ ಮತ್ತು ಸಮಾಜದ ಸಹಕಾರ ಕೊರುತ್ತಾ ಮುಂದಿನ ಶೈಕ್ಷಣಿಕ ವರ್ಷದಿಂದ ಆಂಗ್ಲ ಮಾಧ್ಯಮ ಶಾಲೆ ಮತ್ತು ಎಂಟನೇ ತರಗತಿ ಪ್ರಾರಂಭಿಸವುದಾಗಿ ಹೇಳಿದರು.

ಮಹಾನಗರ ಪಾಲಿಕೆಯ ಸದಸ್ಯರಾದ ಅನುಪಮ ಆರ್ ಕಮಕನೂರ, ದಿಗಂಬರ ನಾಡಗೌಡ, ಮಹೇಶ ಪಟಣ್ಣಶೆಟ್ಟಿ, ಜಿಲ್ಲಾ ಕೋಲಿ ಕಬ್ಬಲಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ನೀಲಕಂಠ ಎಂ ಜಮಾದಾರ, ಉತ್ತರ ವಲಯದ ಶಿಕ್ಷಣ ಸಂಯೋಜಕರಾದ ಅರ್ಜುನ ಹತ್ತಿ ಮುಖ್ಯ ಅತಿಥಿಗಳಾಗಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಸಾಯಿಬಣ್ಣ ವಡಗೇರಿ, ರಾಮಲಿಂಗ ನಾಟೀಕಾರ, ಕು.ಸೋನಾಲಿ ಬೆಟಗೇರಿ, ಮಂಜುಳಾ ಗುತ್ತೇದಾರ ಅತಿಥಿಗಳಾಗಿ ಭಾಗವಹಿಸಿದ್ದರು.

ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಸದಸ್ಯರಾದ ಯಲ್ಲಾಲಿಂಗ ಕೋಬಾಳ, ಅರವಿಂದ್ ಹುಣಚಿಕೇರಿ, ಅಶೋಕ ಸೋನ್ನ, ಸಂಗೀತಾ ಬುಳ್ಳಾ, ಕಾಶಿನಾಥ ಬಾನರ, ಧರ್ಮರಾಜ ಜವಳಿ, ರಾಜು ಸೊನ್ನ, ಚಂದ್ರಕಾಂತ ತಳವಾರ,ಕರ್ಣಪ್ಪ ಬೀರಾದಾರ, ಮಾಣಿಕಮ್ಮಾ ವಾಡಿ, ಬಸವರಾಜ ಮಳ್ಳಿ, ವಿಜಯಲಕ್ಷ್ಮೀ ಜಮಾದಾರ, ಗೀತಾ ನಾಟಿಕಾರ, ಶ್ರೀನಿವಾಸ ಅಕ್ಕಿ,ಈಶ್ವರ ಜಮಾದಾರ,ಡಾ.ರಾಘವೇಂದ್ರ ಗುಡಗುಂಟಿ, ರಾಜೇಂದ್ರ ತೆಲೂರ,ವೀರನಾಥ ಕೋಠಾರಿ ಹಾಜರಿದ್ದರು.

ಸಮಾಜದ ಮುಖಂಡರಾದ ದಶರಥ ಗೋಳಸರ, ರಾಜೇಂದ್ರ ಝಳಕಿ, ಶ್ರೀಕಾಂತ ಆಲೂರ, ಅರ್ಜುನ್ ಜಮಾದಾರ, ಪ್ರಮೋದ್ ಕಟ್ಟಿ ಮಹಾಂತೇಶ ಬಂದರವಾಡ, ಪ್ರಕಾಶ ತಲಾರಿ,ಪ್ರಭು ಕೊಗನೂರ, ಅಶೋಕ ನಾಟಿಕಾರ, ಭೀಮಾಶಂಕರ ಮರತೂರ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here