ತಾಯಿಯೇ ಮೊದಲು ಗುರು; ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು

0
9

ಭಾಲ್ಕಿ; ಪಟ್ಟಣದ ಹಿರೇಮಠ ಗಲ್ಲಿಯಲ್ಲಿ ಹಮ್ಮಿಕೊಂಡಿರುವ ಮಹಾದೇವ ಮಂದಿರ ಉದ್ಘಾಟನಾ ಸಮಾರಂಭ ಹಾಗೂ ಹಿರೇಮಠ ಓಣಿ ಉತ್ಸವ ಮತ್ತು ಸಂಯಮ ಪ್ರಶಸ್ತಿ ಪುರಸ್ಕøತರಾದ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಅಭಿನಂದನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ, ಕುಟುಂಬ ಸಂಸ್ಕøತಿ ಭದ್ರವಾಗಿ ಇರಬೇಕಾದರೆ ತಾಯಿಯ ಪಾತ್ರ ಬಹುದೊಡ್ಡದಾಗಿರುತ್ತದೆ. ಕುಟುಂಬದಲ್ಲಿ ತಾಯಿ ಸಂಸ್ಕಾರವಂತಳಾಗಿದ್ದರೆ, ಸಂಪೂರ್ಣ ಕುಟುಂಬ ಸಂಸ್ಕಾವಂತವಾಗುತ್ತದೆ. ಮಕ್ಕಳು ನಾವು ಏನು ಹೇಳುತ್ತೇವೆ, ಅದನ್ನು ಕೇಳುವುದಕ್ಕಿಂತಲೂ ನಾವು ಹೇಗೆ ನಡೆಯುತ್ತೇವೆ ಅದನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಾರೆ. ನಮ್ಮ ಮಾತಿಕ್ಕಿಂತಲೂ ನಮ್ಮ ನಡೆಯೇ ಮಕ್ಕಳಿಗೆ ಆದರ್ಶವಾಗಿರುತ್ತದೆ. ಅದಕ್ಕಾಗಿ ನಮ್ಮ ಮಕ್ಕಳು ಸಂಸ್ಕಾರವಂತರಾಗಿ ಬೆಳೆಯಬೇಕೆಂಬ ಅಪೇಕ್ಷೆ ಹೊಂದಿರುವ ಸಮಾಜ ಮೊದಲು ತಾಯಿ ತಂದೆಯ ನಡೆಯನ್ನು ಶುದ್ಧವಾಗಿರಬೇಕು. ಕಾರಣ ತಾಯಿಯೇ ಮೊದಲ ಗುರು, ಮನೆಯೇ ಮೊದಲ ಪಾಠ ಶಾಲೆಯಾಗಿರುತ್ತದೆ. ಜೀಜಾಮಾತಾ ಎನ್ನುವ ಒಬ್ಬ ತಾಯಿ ಶಿವಾಜಿಯಂತಹ ಮಹಾ ಪುರುಷನನ್ನು ರೂಪಿಸಿದಳು. ಅಕ್ಕನಾಗಲಾಂಬಿಕೆ ಬಸವಣ್ಣನವರ ವ್ಯಕ್ತಿತ್ವ ರೂಪಿಸಿದಳು. ಇಂದಿನ ದಿನಮಾನಗಳಲ್ಲಿ ನಮ್ಮ ಸಂಬಂಧಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಇಂತಹ ಉತ್ಸವಗಳು ಮಾಡುವ ಮೂಲಕ ನಾವೆಲ್ಲರೂ ಒಗ್ಗೂಡಿ ನಮ್ಮ ಸಂಬಂಧಗಳನ್ನು ಗಟ್ಟಿಸಿಕೊಳ್ಳುವ ಅಗತ್ಯತೆ ಇದೆ. ನಮಗೆ ಮಾನಸಿಕ ನೆಮ್ಮದಿ ಸಮಾಧಾನ ಸಂತೃಪ್ತಿ ದೊರೆಯಬೇಕಾದರೆ ನಮ್ಮ ಕೌಟುಂಬಿಕ ಮತ್ತು ಸಾಮಾಜಿಕ ಸಂಬಂಧಗಳು ಇಂತಹ ಉತ್ಸವದ ಮೂಲಕ ಬೆಳೆಸಿಕೊಳ್ಳಬೇಕೆಂದು ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.

ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಸನ್ಮಾನವನ್ನು ಸ್ವೀಕರಿಸಿ, ತಾವು ಮಾಡಿರುವ ಸನ್ಮಾನ ನನಗೆ ತುಂಬಾ ಖುಷಿತಂದಿದೆ. ಈ ಸನ್ಮಾನದಲ್ಲಿ ತಾಯಿತನದ ಪ್ರೀತಿ ಅಡಗಿದೆ. ನನ್ನ ಎಲ್ಲಾ ಸಾಧನೆಗೆ ನನ್ನ ಗುರುಗಳಾದ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರೇ ಕಾರಣ. ಅದಕ್ಕಾಗಿ ಈ ಪ್ರಶಸ್ತಿ ಮತ್ತು ಸನ್ಮಾನ ನಾನು ಅವರ ಪಾದಕ್ಕೆ ಸಮರ್ಪಿಸುತ್ತೇನೆ ಎಂದು ನುಡಿದರು.

Contact Your\'s Advertisement; 9902492681

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಸಾಗರ ಈಶ್ವರ ಖಂಡ್ರೆ ನೆರವೇರಿದರು. ಅಧ್ಯಕ್ಷತೆಯನ್ನು ಬಾಬು ವಾಲಿ ವಹಿಸಿಕೊಂಡಿದ್ದರು. ಡಾ. ಗೀತಾ ಈಶ್ವರ ಖಂಡ್ರೆ, ಭಾಲ್ಕಿ ಅನೀಲ ಸುಂಟೆ, ಅಶೋಕ ಗಾಯಕವಾಡ, ಅನೀತಾ ಧನರಾಜ ಪಾಂಚಾಳ, ಓಂಕಾರ ಮೋರೆ ಆಗಮಿಸಿದರು.

ಅಶೋಕ ಮಡ್ಡೆ, ಪ್ರಕಾಶ ಮಾಶೆಟ್ಟೆ ಮುಖ್ಯ ಅತಿಥಿಗಳಾಗಿ ಆಗಮಿಸಿದರು. ಕು.ಸಿದ್ಧರಾಮೇಶ್ವರ ವಾಲೆ ಸ್ವಾಗತಿಸಿದರು. ದೀಪಕ ಥಮಕೆ ನಿರೂಪಿಸಿದರು. ಸುಪ್ರಿಯಾ ಕೇರೆ ವಂದನಾರ್ಪಣೆ ಮಾಡಿದರು. ಸಂಗಮೇಶ ವಾಲೆ, ಸಂಗಮೇಶ ಅಣದೂರೆ, ಸುರೇಶ ಭೂರೆ, ರಾಜು ಹೊನ್ನಾ, ಬಸವರಾಜ ಹೊನ್ನಾ, ನಾಗಭೂಷಣ ಗದಗೆ, ಸಂತೋಷ ಗದಗೆ, ಸುಭಾಷ ಇಟಗೆ, ಬಸವರಾಜ ಕೆರೆ, ಗಣಪತಿ ಕೆರೆ, ಉಮಾಕಾಂತ ಹೊನ್ನಾ, ಸಂಜು ಹೊನ್ನಾ, ಸುನೀಲ ಕಲ್ಯಾಣೆ, ಅಶೋಕ ಕಲ್ಯಾಣೆ, ರಾಜಕುಮಾರ ಗಡೆ ಸಂಗಮೇಶ ಬಿರಾದಾರ ಓಣೆಯ ಅನೇಕ ಪ್ರಮುಖರ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದಸರು.

ಹಿರೇಮಠ ಓಣಿಯ ತವರು ಮನೆಗೆ ಆಗಮಿಸಿದ ಎಲ್ಲಾ ಹೆಣ್ಣುಮಕ್ಕಳಿಗೆ ಗೌರವಿಸಿ ಸನ್ಮಾನಿಸಲಾಯಿತು. ಬಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here