ಕಾರ್ಮಿಕ ಇಲಾಖೆಯ ಭ್ರಷ್ಟ ಅಧಿಕಾರಿಗಳ ಪದಚ್ಯುತಿಗೆ ಸಂಘ ಆಗ್ರಹ

0
41

ಕಲಬುರಗಿ: ಕಾರ್ಮಿಕ ಇಲಾಖೆಯಲ್ಲಿ ನಡೆಯುತ್ತಿರುವ ಬ್ರಷ್ಟಾಚಾರ ಮತ್ತು ವ್ಯವಹಾರದ ಬಗ್ಗೆ ಸೂಕ್ತ ತನಿಖೆಗೆ ಒಳಪಡಿಸಿ ಭ್ರಷ್ಟಚಾರದಲ್ಲಿ ತೊಡಗಿರುವ ಅಧಿಕಾರಿಗಳನ್ನು ಪದಚ್ಯುತಿಗೆ ಆಗ್ರಹಿಸಿ ಬಡ ಕಾರ್ಮಿಕರಿಗೆ ನ್ಯಾಯ ಸೇರಿದಂತೆ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ದೂರಿ ನೀಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ, ಮಂಜುನಾಥ, ಶ್ರೀಹರಿ ದೇಶಪಾಂಡೆ, ದಿಲೀಪಕುಮಾರ, ಸಂತೋಶ, ಸುರೇಶ ಕೂಡಿ, ದಿಗಂಬರ ಕೂಡಿ, ಬಸವರಾಜ ಕಲಶೆಟ್ಟಿ, ಪರಶುರಾಮ, ರವಿಕುಮಾರ ಈ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು 2012 ರಿಂದ ಕಾರ್ಮಿಕ ಇಲಾಖೆಯಲ್ಲಿ ಕಟ್ಟಡ ಕಾರ್ಮಿಕ ಫಲಾನುಭವಿಗಳಿಗೆ ಮದುವೆ ಸಹಾಧನ ಹೆರಿಗೆ ಸಹಾಯಧನ, ಮರಣ ಸಹಾಯಧನ ಮತ್ತು ಶೈಕ್ಷಣಿಕ ಸಹಾಯಧನ ಅರ್ಜಿಗಳ ಮಂಜೂರಾತಿಗಾಗಿ ಫಲಾನುಭವಿಗಳಿಂದ ಹಣ ಪಡೆದುಕೊಳ್ಳುತ್ತಿದ್ದಾರೆಂದು ದೂರಿನಲ್ಲಿ ಸಂಘ ಆರೋಪಿಸಿದೆ.

Contact Your\'s Advertisement; 9902492681

ಕೋವಿಡ್-19 ಸಂಧರ್ಬದಲ್ಲಿ ಕಟ್ಟಡ ಕಾರ್ಮಿಕರ ಫಲಾನುಭವಿಗಳಿಗೆ ಪರಿಹಾರ ಮೊತ್ತವನ್ನು 5 ಸಾವಿರ ಮತ್ತು 3 ಸಾವಿರ ಹಣವನ್ನು ಕೊಡುತ್ತಿರುವ ಸಮಯದಲ್ಲಿ ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆ ಮಾಡಲು ಲಕ್ಷಾಂತರ ಹಣವನ್ನು ಬ್ರೋಕರ್‍ಗಳ ಮೂಲಕ ಹಣವನ್ನು ಪಡೆದುಕೊಂಡಿರುತ್ತಾರೆ ಎಂದು ಸಂಘದ ಅಧ್ಯಕ್ಷ ಭೀಮರಾಯ ಎಂ ಕಂದಳ್ಳಿ ಸೇರಿದಂತೆ ಕಾರ್ಮಿಕರು ಆರೋಪಿಸಿದ್ದಾರೆ.

ಸೂಕ್ತ ಮಾಹಿತಿ ನೀಡುವಂತೆ ಮತ್ತು 2013 ರಿಂದ ಇಲ್ಲಿಯ ತನಕ ಆಫ್‍ಲೈನ್ ಮತ್ತು ಆನ್‍ಲೈನ್ ಅರ್ಜಿಗಳ ದಾಖಲೆಗಳನ್ನು ಲೋಕಾಯುಕ್ತರ ತನಿಕೆಗೆ ಒಳಪಡಿಸಬೆಕಾಗಿ ಕಾರ್ಮಿಕರ ಕಛೇರಿ ಎದುರು ಹೋರಾಟ ಹಮ್ಮಿಕೊಳ್ಳಲಾಗಿತ್ತು. ಆದರೆ ಯಾವ ಅಧಕಾರಿಯೂ ಸಹ ಇಲ್ಲಿಯವರೆಗೆ ಯಾವ ವಿಷಯ ಕುರಿತು ಸಹ ಸೂಕ್ತ ಕ್ರಮ ಮತ್ತು ಮಾಹಿತಿ ನೀಡಿದೇ ಅವ್ಯವಹಾರಕ್ಕೆ ಕುಮಕ್ಕು ನೀಡುತ್ತಿದ್ದಾರೆ ಎಂದು ದುರಿದ್ದಾರೆ.

ಇಲಾಖೆಯಲ್ಲಿ ಅವ್ಯವಹಾರ ತಡೆಯುವಲ್ಲಿ ಜಿಲ್ಲಾಡಳಿತ ವಿಫಲವಾದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಮುತ್ತಿಗೆ ಹಾಕಲಾಗುವುದೆಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಶಿವಕುಮಾರ ಎಸ್ ಬೆಳಗೇರಿ, ಮಹಾಂತೇಶ ದೊಡ್ಡಮನಿ, ಖಜಾಂಚಿ ದೇವಿಂದ್ರ ಎಸ್. ಉಳಗಡ್ಡಿ, ಬಾಬುರಾವ ದೇವರಮನಿ, ಶರಣು ಮಾಡಬೂಳ ಸೇರಿದಂತೆ ಹಲವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here