ಕಲಬುರಗಿ:ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ನಿಮಿತ್ತ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶಹಾಬಾದ ನಗರದಲ್ಲಿ ಮಂಗಳವಾರ ಬೃಹತ್ ರೋಡ್ ಶೋ ನಡೆಸಿದರು.
ಬಸವೇಶ್ವರ ವೃತ್ತದಿಂದ ಆರಂಭವಾದ ರೋಡ್ ಶೋ ಶಾಸ್ತ್ರಿ ವೃತ್ತದ ಮೂಲಕ ತ್ರಿಶೂಲ ವೃತ್ತ ತಲುಪಿತು. ಮಾರ್ಗದುದ್ದಕ್ಕೂ ವಿವಿಧ ವಾದ್ಯಮೇಳಗಳು ಕಳೆತಂದವು. ಅಪಾರ ಸಂಖ್ಯೆಯಲ್ಲಿ ಸೇರಿದ ಬಿಜೆಪಿ ಕಾರ್ಯಕರ್ತರು ನಿರಂತರ ಜೈಕಾರ ಮೊಳಗಿಸಿದರು. ಯಡಿಯೂರಪ್ಪ ಅವರ ಸ್ವಾಗತಕ್ಕಾಗಿ ಪಟ್ಟಣವನ್ನು ಕೇಸರಿಮಯ ಮಾಡಲಾಗಿತ್ತು.ರೋಡ್ ಶೋನಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು.
ಬಿಜೆಪಿ ಬಾವುಟ ಹಿಡಿದು, ಕೇಸರಿ ರುಮಾಲು, ಟೊಪ್ಪಿಗೆ ಹಾಕಿಕೊಂಡು ಕಾರ್ಯಕರ್ತರು ಮೆರವಣಿಗೆ ಮುಂದೆ ಕುಣಿದು ಕುಪ್ಪಳಿಸಿದರು. ಲಂಬಾಣಿ ಮಹಿಳಾ ತಂಡದ ಲಂಬಾಣಿ ಕುಣಿತದ ಮೂಲಕ ಗಮನ ಸೆಳೆದರು.ಅಲ್ಲದೇ ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ಅವರನ್ನು ಬಿಜೆಪಿ ಕಾರ್ಯಕರ್ತರು ಹೆಗಲ ಮೇಲೆ ಕುಳಿಸಿಕೊಂಡು ಕುಣಿದು ಸಂಭ್ರಮಿಸಿದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಕೇಂದ್ರ ಸಚಿವ ಭಗವಂತ ಖೂಬಾ, ಸಂಸದ ಡಾ.ಉಮೇಶ ಜಾಧವ, ಒಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಲಕ್ಷ್ಮಣ ರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ, ರವಿಕುಮಾರ, ಸುನೀಲ ವಲ್ಯಾಪುರೆ, ಮಾಲಿಕಯ್ಯ ಗುತ್ತೆದಾರ, ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಶಾಸಕರಾದ ಬಸವರಾಜ ಮತ್ತಿಮಡು, ಮಾರುತಿರಾವ ಮೂಳೆ, ಅಮರನಾಥ ಪಾಟೀಲ, ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೆವಾಡಿಗಿ, ಅಣವೀರ ಇಂಗಿನಶೆಟ್ಟಿ, ಜಯಶ್ರೀ ಮತ್ತಿಮಡು, ಭಾಗಿರಥಿ ಗುನ್ನಾಪೂರ, ಜ್ಯೋತಿ ಶರ್ಮಾ, ಶಶಿಕಲಾ ಸಜ್ಜನ್, ಸಂಗಮೇಶ ವಾಲಿ, ಕನಕಪ್ಪ ದಂಡಗುಲಕರ, ನಿಂಗಪ್ಪ ಹುಳಗೋಳಕರ, ಸದಾನಂದ ಕುಂಬಾರ, ಸಿದ್ರಾಮ ಕುಸಾಳೆ, ಅರುಣ ಪಟ್ಟಣಕರ್, ನಾಗರಾಜ ಮೇಲಗಿರಿ,ಚಂದ್ರಕಾಂತ ಗೊಬ್ಬೂರಕರ್,ಬಸವರಾಜ ಬಿರಾದಾರ, ಅನೀಲ ಬೋರಗಾಂವಕರ್, ಮಹಾದೇವ ಗೊಬ್ಬೂರಕರ್,ರವಿ ರಾಠೋಡ, ದತ್ತಾ ಫಂಡ, ವಿರೇಶ ಬಂದಳ್ಳಿ, ದತ್ತು ಗಂಟಿ, ಬೀಮರಾವ ಸಾಳುಂಕೆ,ಭೀಮಯ್ಯ ಗುತ್ತೆದಾರ, ಸುಭಾಷ ಜಾಪೂರ,ಲಿಂಗರಾಜ ಮಲಕೂಡ, ಶರಣು ಜೇರಟಗಿ, ರಾಜು ಬೆಳಗುಂಪಿ,ಶಿವುಗೌಡ, ಶ್ರೀಶೈಲ ಬೆಳಮಗಿ, ಶಾಂತಕುಮಾರ ಮಾಣಿಕ್, ವಿಜಯಕುಮಾರ ಮಾಣಿಕ್,ಬಸವರಾಜ ತರನಳ್ಳಿ,ರಾಜು ಕುಂಬಾರ, ರಾಜು ಕೋಬಾಳ,ಶಂಕರ ಕುಂಬಾರ, ಸೂರ್ಯಕಾಂತ ವಾರದ,ಯಲ್ಲಪ್ಪ ದಂಡಗುಲಕರ್, ಸಂಜಯ ಸೂಡಿ ಸೇರಿದಂತೆ ಅನೇಕರು ಇದ್ದರು.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…