ಜ್ಯಾತ್ಯತೀತ ಸಮಾಜ ನಿರ್ಮಾಣ ಮಾಡಿದ ಬಸವಣ್ಣ; ಡಾ. ಶಿವರಂಜನ ಸತ್ಯಂಪೇಟೆ ಅಭಿಮತ

0
45

ಕಾಳಗಿ: ಆಧುನಿಕ ಸಮಾಜದಲ್ಲಿ ಜಾತಿಯ ಡಂಬಾಚಾರ ಹೆಚ್ಚಾಗಿದ್ದು, 12ನೇ ಶತಮಾನದ ಬಸವಾದಿ ಶರಣರು ಜಾತ್ಯತೀತ ಸಮಾಜ ನಿರ್ಮಾಣ ಮಾಡಿದ್ದರು ಎಂದು ಪತ್ರಕರ್ತ- ಲೇಖಕ ಡಾ.ಶಿವರಂಜನ ಸತ್ಯಂಪೇಟೆ ಹೇಳಿದರು.

ಕಾಳಗಿ ಪಟ್ಟಣದ ಜಗದ್ಗುರು ರೇವಣಸಿದ್ದೇಶ್ವರ, ನಾಗರತ್ನಮ್ಮ ಶಿವಶರಣಪ್ಪ ಕಮಲಾಪೂರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಕಾಳಗಿ ವತಿಯಿಂದ ಹಮ್ಮಿಕೊಂಡಿದ್ದ ಮಹಾ ತಪಸ್ವಿ ಗುರುನಂಜೇಶ್ವರ ಶಿವಯೋಗಿಗಳ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಬಸವಣ್ಣನವರ ವಚನಗಳಲ್ಲಿ ಲೋಕಾನುಭವ ವಿಷಯ ಕುರಿತು ವಿಶೇಷ ಅನುಭಾವ ನೀಡಿದ ಅವರು, ಬಸವಣ್ಣನವರು ದೇವರನ್ನು ನಿರಾಕರಿಸದೆ ಪ್ರತಿಯೊಬ್ಬರಲ್ಲೂ ದೇವರ ಇರುವಿಕೆಯನ್ನು ನೆಲೆಗೊಳಿಸಿದರು ಎಂದು ಅಭಿಪ್ರಾಯಪಟ್ಟರು.

Contact Your\'s Advertisement; 9902492681

ಶರಣರು ತಮ್ಮ ಲೋಕಾನುಭಾವ, ಆತ್ಮಾನುಭಾವದ ಮೂಲಕ ಹೊಸ ಚಿಂತನೆಗಳನ್ನು ಜಗತ್ತಿಗೆ ತಿಳಿಸಿಕೊಟ್ಟರು. ಸಮಾಜದಲ್ಲಿರುವ ಅನಿಷ್ಠಗಳನ್ನು ಕಳೆಯಲು ನಿಷ್ಠುರವಾಗಿ ಮಾತನಾಡಿದರು. ಅವರ ಬದುಕಿನ ಅನುಭವಗಳೇ ವಚನಗಳಾಗಿವೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ಜೀವನ ಮೌಲ್ಯಗಳಿಂದ ಕೂಡಿದ ವಚನ ಸಾಹಿತ್ಯದಲ್ಲಿ ಬದುಕಿಗೆ ಬೆಳಕಾಗಬಲ್ಲ ವಿಚಾರಗಳಿವೆ ಎಂದರು.

ಮುಖ್ಯ ಅತಿಥಿಯಿಯಾಗಿದ್ದ ಡಾ. ವಿಜಯಕುಮಾರ ಪರುತೆ ಮಾತನಾಡಿ, ಶರಣ ವಚನ ತಿಳಿಸುವ ಮಾತಲ್ಲ, ತಿಳಸದೆ ತಿಳಿಯದು, ತಿಳಿದರೆ ಇಳಿಯದು, ಇಳಿದರೆ ಅಳಿಯದು ಎಂದರು ಎಂದು ವಚನ ಸಾಹಿತ್ಯದ ಮರ್ಮ ತಿಳಿಸಿಕೊಟ್ಟರು.

ಸರಕಾರಿ ನೌಕರರ ಸಂಘದ ಅಧ್ಯಕ್ಷ ಶರಣಗೌಡ ಪಾಟೀಲ ಮಾತನಾಡಿದರು. ಪೆÇ್ರ.ಚಿತ್ರಶೇಖರ ನಾಗೂರ ಅಧ್ಯಕ್ಷತೆ ವಹಿಸಿದ್ದರು.

ಕಾಲೇಜು ಭೂದಾನಿ ಶಿವಶರಣಪ್ಪ ಕಮಲಾಪುರ, ಸುಧಾರಾಣಿ ಚಿದ್ರಿ, ರಾಜೇಂದ್ರ ಬಾಬು ಹೀರಾಪುರ, ರವೀಂದ್ರ ದಂಡಿಗಿ ಹೆಬ್ಬಾಳ ವೇದಿಕೆಯಲ್ಲಿದ್ದರು.

ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಡಾ. ಶಿವಶರಣಪ್ಪ ಮೋತಕಪಲ್ಲಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ.ಸಂಗೀತಾ ಹಿರೇಮಠ ನಿರೂಪಿಸಿದರು.

ಪ್ರಿಯಾಂಕಾ, ನಾಗರತ್ನ ಪ್ರಾರ್ಥಿಸಿದರು. ದೈಹಿಕ ಉಪನ್ಯಾಸಕಿ ಜಯಲಕ್ಷ್ಮಿ ವಂದಿಸಿದರು. ಪೆÇ್ರ. ಭದರುನ್ನೀಸಾ ಬೇಗಂ, ಪೆÇ್ರ.ಮಂಜುಳಾ ಭದ್ರಶೆಟ್ಟಿ, ಪೆÇ್ರ.ಶಾಂತಾ ಪಾಟೀಲ, ಬಸವರಾಜ ದಂಡೋತಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here