ಶಾಸ್ವತ ಕುಡಿಯುವ ನೀರಿನ ಬೇಡಿಕೆ ಬೇಗ ಈಡೇರಿದ್ದು ಹೆಮ್ಮೆಯ ಸಂಗತಿ; ಸಚಿವ ಬಸವರಾಜ

0
10

ಸುರಪುರ:ನಗರದ ವೀರಶೈವ ಕಲ್ಯಾಣ ಮಂಟಪ ಆವರಣದಲ್ಲಿ ಸುರಪುರ ನಗರಕ್ಕೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ನಗರಕ್ಕೆ ಮತ್ತು 3 ಹಳ್ಳಗಿಳಿಗೆ 2 ನೇ ಹಂತದ ಕುಡಿಯುವ ನೀರು ಸರಬರಾಜು ಕಾಮಗಾರಿ ಉದ್ಘಾಟನಾ ಹಾಗೂ ಕೃಷ್ಣಭಾಗ್ಯ ಜಲ ನಿಗಮದ 2022-23 ನೇ ಸಾಲಿನ ಅನುದಾನದಲ್ಲಿ ದೇವತ್ಕಲ್, ತಳ್ಳಳ್ಳಿ ಮತ್ತು ಏದಲಭಾವಿ ಏತನೀರಾವರಿ ಹಾಗೂ ಬೈರಿಮಡ್ಡಿ ಕೆರೆಯಿಂದ ಫೀಡರ್ ಕಾಲುವೆ ಮುಖಾಂತರ ರೈತರ ಜಮೀನುಗಳಿಗೆ ನೀರು ಹರಿಸುವ ಕಾಮಗಾರಿಗಳಿಗೆ ಹಾಗೂ ನಗರದಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮವನ್ನು ನಡೆಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ನಗರಾಭಿವೃಧ್ಧಿ ಸಚಿವ ಬೈರತಿ ಬಸವರಾಜ ಮಾತನಾಡಿ,ದಾಹ ಮುಕ್ತ ಕರ್ನಾಟಕ ಮಾಡುವುದೇ ಸರ್ಕಾರ ಸಂಕಲ್ಪವಾಗಿದ್ದು, ಸುರಪುರದಲ್ಲಿ ನದಿ ಮೂಲದಿಂದ ಶುದ್ದ ಕುಡಿಯುವ ನೀರು ತರುವ ಕೆಲಸ ಮಾಡಿ, ಶಾಶ್ವತ ಕುಡಿಯುವ ನೀರಿನ ಬೇಡಿಕೆ ಈಡೇರಿದ್ದು ಹೆಮ್ಮೆಯ ಸಂಗತಿ, ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಎಲ್ಲ ಮೂಲ ಸೌಕರ್ಯಗಳಿಗಿಂತ ಕುಡಿಯುವ ನೀರು ಹೆಚ್ಚು ಅವಶ್ಯಕ ದಿನದ 24 ಗಂಟೆಯೂ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ನಲ್ಲಿಯಲ್ಲಿ ಬರುವಂತೆ ಮಾಡಿದ್ದು ಮಾದರಿ ಕೆಲಸವಾಗಿದೆ. ಕುಡಿಯುವ ನೀರಿನ ಯೋಜನೆಯು ಎಲ್ಲಾ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ನೀರಿನ ದಾಹ ನೀಗಿಸಲು ಹೊಸಹೊಸ ಯೋಜನೆ ಮಾಡಲಾಗಿದೆ. ಕುಡಿಯುವ ನೀರಿನ ಅಭಾವ ಆಗಬಾರದೆಂದು ಕಲ್ಯಾಣ ಕರ್ನಾಟಕ ಭಾಗಕ್ಕೆ 2700 ಕೋಟಿ ರೂಗಳನ್ನು ಮೀಸಲಿಡಲಾಗಿದೆ. ಪ್ರಧಾನ ಮಂತ್ರಿಯವರು ಅಮೃತ ಯೋಜನೆಯಡಿಯಲ್ಲಿ 4500 ಕೋಟಿ ರೂಗಳನ್ನು ರಾಜ್ಯಕ್ಕೆ ನೀಡಿದ್ದಾರೆ ಎಂದು ಅವರು ನುಡಿದರು.

ನೀರಾವರಿ ಇಲಾಖೆಯಿಂದ 53 ಸಾವಿರ ಎಕರೆಗೆ ನೀರನ್ನು ಒದಗಿಸುವ ಕೆಲಸ ಮಾಡಲಾಗಿದೆ ಎಂದು ಸಚಿವರು ನುಡಿದರು.

*ಶಾಸಕ ನರಸಿಂಹ ನಾಯಕ (ರಾಜುಗೌಡ) ಮಾತನಾಡಿ,* ನಗರಸಭೆ ವ್ಯಾಪ್ತಿಯಲ್ಲಿ ಬರುವ 31 ವಾರ್ಡ್ ಗಳ 11 ಸಾವಿರ ಮನೆಗಳಿಗೆ ಅತೀ ಶುದ್ದ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗಿದೆ. ದಿನದ 24 ಗಂಟೆಯೂ ನೀರು ಒದಗಿಸುವ ಅದ್ಬುತ ಯೋಜನೆ ಇದಾಗಿದೆ. ಕೃಷ್ಣಾ ನದಿಯಿಂದ ನೀರು ತರುವ ಮಧ್ಯದ ಹಳ್ಳಿಗಳಾದ ದೇವಾಪುರ, ಕವಡಿಮಟ್ಟಿ ಮತ್ತು ಎಸ್.ಹೆಚ್ ಖಾನಾಪುರ ಗ್ರಾಮಗಳಿಗೆ ಸರಬರಾಜು ಮಾಡಲು ಯೋಜನೆ ರೂಪಿಸಲಾಗಿದೆ ಒಟ್ಟು 196 ಕೋಟಿ ರೂ ವೆಚ್ಚ ಮಾಡಲಾಗಿದೆ ಎಂದು ಶಾಸಕರು ಹೇಳಿದರು.

ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು. ನೀರು ಬಳಕೆ ಮಾಡಿದರೆ ನೀರಿನ ಬಿಲ್ ಜಾಸ್ತಿ ಬರುತ್ತದೆ ಎಂದು ಭಯಪಡಬೇಡಿ. ಸುಮಾರು 1 ರಿಂದ 8 ಸಾವಿರ ಲೀಟರ್ ನೀರು ಬಳಕೆ ಮಾಡಿದರೆ ಕೇವಲ 56 ರೂಪಾಯಿಗಳಷ್ಟು ಮಾತ್ರ ಬಿಲ್ ಬರುತ್ತದೆ ಎಂದರು.

5 ವರ್ಷಗಳಲ್ಲಿ ಮಾಡಲಾಗದ ಕೆಲಸವನ್ನು ಕೇವಲ 12 ತಿಂಗಳಲ್ಲಿಯೇ ಅಧಿಕಾರಿಗಳು ಮಾಡಿ ಮುಗಿಸಿದ್ದಾರೆ ಎಂದು ಸಂತಸಪಟ್ಟು ಸಂಭಂದಿಸಿದ ಅಧಿಕಾರಿಗಳಿಗೆ ವೇದಿಕೆಯಲ್ಲಿ ಅಭಿನಂದಿಸಿದರು.

ಕೃಷ್ಣ ಭಾಗ್ಯ ಜಲ ನಿಗಮದ 2022-23 ನೇ ಸಾಲಿನ ಅನುದಾನದಲ್ಲಿ ರೂ.127.7 ಕೋಟಿಗಳ ವೆಚ್ಚದಲ್ಲಿ ಸುಮಾರು 56.355 ಎಕರೆ ಭೂಮಿಗೆ ನೀರು ಹರಿಸುವ ಏತ ನೀರಾವರಿಗಳಾದ ದೇವತ್ಕಲ್ ಏತನೀರಾವರಿ.ಕೆ ತಳ್ಳಳ್ಳಿ. ಭೈರಿಮಡ್ಡಿ ಕೆರೆಯಿಂದ ಪೀಡರ್ ಕಾಲುವೆ ಮೂಲಕ ನೀರಾವರಿ.ಏದಲಭಾವಿ ಏತನೀರಾವರಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿದ್ದು ಅಭಿವೃದ್ಧಿಯ ಕನಸು ನನಸಾಗಿದೆ ಎಂದರು.

ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಅಡಿಯಲ್ಲಿ ನಗರದ ವಿವಿಧ ವಾರ್ಡ್ ಹಾಗೂ ರಸ್ತೆ ಬದಿ ಚರಂಡಿ ನಿರ್ಮಾಣ, ಶಾಸಕರ ಅನುದಾನದ ಶಾಲಾ ಕೋಣೆಗಳ ನಿರ್ಮಾಣ, ತಿಂಥಣಿ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣ, ಸುರಪುರ ಪತ್ರಿಕಾ ಭವನ ನಿರ್ಮಾಣ ಕಾಮಗಾರಿ ಸೇರಿದಂತೆ ಸುಮಾರು 355 ಕೋಟಿ ರೂ ಗಳ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ರಾಯಚೂರು ಲೋಕಸಭಾ ಸದಸ್ಯ ರಾಜಾ ಅಮರೇಶ್ವರ ನಾಯಕ, ನಗರ ಸಭೆ ಅಧ್ಯಕ್ಷ ಸುಜಾತ ವೇಣುಗೋಪಾಲ ಜೇವರ್ಗಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ಸಜ್ಜನ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾ:ಸುರೇಶ ಸಜ್ಜನ್,ಉದ್ಯಮಿ ಡಾ:ಎಸ್.ಪಿ ದಯಾನಂದ ಸೇರಿದಂತೆ ಇನ್ನಿತರರು ನಗರಸಭೆ ಸದಸ್ಯರು , ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here