ಕಲಬುರಗಿಯಲ್ಲಿ ಮಹಿಳಾ ಸಾಮಾಜಿಕ ಕಾರ್ಯಕರ್ತೆಯ ಕೊಲೆ

0
222

ಕಲಬುರಗಿ : ಹಾಡುಹಗಲೇ ಮಹಿಳಾ ಸಾಮಾಜಿಕ ಕಾರ್ಯಕರ್ತೆಯ ಭೀಕರ ಹತ್ಯೆ ಮಾಡಲಾದ ಘಟನೆ ನಗರದ ಹಾಗರಗಾ ರಸ್ತೆ ಇನಾಮದರ್ಬ ಶಾಲೆ ಸಮಿಪ ನಡೆದಿದೆ.

ಮಜತ್ ಸುಲ್ತಾನ್ (35) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಬೈಕ್‌ಗೆ ಕಾರ್‌ನಿಂದ ಗುದ್ದಿ, ನಂತರ ತಲೆ ಮೇಲೆ ಕಲ್ಲು ಎತ್ತಿಹಾಕಿ ಭೀಕರ ಕೊಲೆ ಮಾಡಲಾಗಿದೆ.

Contact Your\'s Advertisement; 9902492681

ನಗರದ ಜಂಜಂ ಕಾಲೋನಿ ನಿವಾಸಿಯಾಗಿದ್ದ ಮಜತ್ ಸುಲ್ತಾನ್, ಸಾಮಾಜಿಕ ಕಾರ್ಯಕರ್ತೆ ಹಾಗೂ ನ್ಯಾಯವಾದಿಯಾಗಿ ಕೆಲಸ ಮಾಡುತ್ತಿದ್ದರು‌. ಆಸ್ತಿಯ ವಿಚಾರವಾಗಿ ಅಜೀಮ್ ಗೌಂಡಿ, ವಸೀಮ್ ಗೌಂಡಿ, ನಯೀಮ್‌ ಮತ್ತು ನದೀಮ್ ಸೇರಿ‌ ಕೊಲೆ‌ ಮಾಡಿದ್ದಾರೆಂದು ಕೊಲೆಯಾದ ಮಜತ್ ಸುಲ್ತಾನ್ ಪತಿ ಸದ್ದಾಂ ಆರೋಪ ಮಾಡಿದ್ದಾರೆ.

ನಯೀಮ್‌ ಮತ್ತು ನದೀಮ್ ಇಬ್ಬರು ಕೊಲೆಯಾದ‌ ಮಹಿಳೆ ಪತಿ ಸದ್ದಾಂ ನ ಸಹೋಧರರಾಗಿದ್ದು ಆಸ್ತಿ ವಿಚಾರದಲ್ಲಿ ಕಲಹ ನಡೆದಿತ್ತು.‌ ಇವರಿಬ್ಬರಿಗೆ ಸೋಶಿಯಲ್‌ ಮಿಡಿಯಾದಲ್ಲಿ ವಾರ್ತೆ ನಡೆಸುತ್ತಿದ್ದ ಅಜೀಮ್ ಗೌಂಡಿ, ವಸೀಮ್ ಗೌಂಡಿ ಸಹಾಯ ಮಾಡ್ತಿದ್ರು. ಆಸ್ತಿ ವಿಚಾರವಾಗಿಯೇ ಈ ಹಿಂದೆ ಎರಡುಬಾರಿ ಸದ್ದಾಂ ಹಾಗೂ ಮಜತ್ ಸುಲ್ತಾನ್ ಜೈಲು ವಾಸ ಅನುಭವಿಸಿ ಬಂದಿದ್ದಾರೆ. ಆದ್ರೆ ನಾವು ದೂರು ದಾಖಲಿಸಿದರು ಇವರ ಮೇಲೆ ಯಾವುದೆ ಕ್ರಮ ಆಗಿಲ್ಲ ಎಂದು ಸದ್ದಾಂ ಹೇಳಿದ್ದಾರೆ.

ಆಸ್ತಿ ವಿಚಾರದಲ್ಲಿ ಗಲಾಟೆ ನಡೆದ ಹಿನ್ನಲೆ ಸದ್ದಾಂ ದಂಪತಿ ಬೇರೆಯ ಬಡಾವಣೆಗೆ ಶೀಫ್ಟ್ ಆಗಿದ್ದು, ಇಂದು ಮನೆ ಖಾಲಿ ಮಾಡಿ ಟಂಟಂ ವಾಹನದಲ್ಲಿ ಸಾಮಾನು‌ ತೆಗೆದುಕೊಂಡು ಹೋಗುತ್ತಿದ್ದರು. ಟಂಟಂ ಹಿಂದೆ ಬೈಕ್ ಮೇಲೆ ಮಜತ್ ಸುಲ್ತಾನ್ ಹೋಗುವಾಗ ಹಗೆತನ ಸಾಧಿಸಿ ಕಾರ್‌ನಲ್ಲಿ ಬಂದ ನಾಲ್ವರು ಡಿಕ್ಕಿ‌ ಹೊಡೆದು ಬೈಕ್ ನೆಲಕ್ಕೆ ಬಿಳುತ್ತಿದ್ದಂತೆ ಕಲ್ಲು ಹಾಕಿ ಕೊಲೆ ಮಾಡಿದ್ದಾರೆಂದು ಮೃತಳ ಪತಿ ಆರೋಪಿಸಿದ್ದಾರೆ.

ಸದ್ಯ ಸ್ಥಳಕ್ಕೆ ಪೊಲೀಸ್ ಕಮಿಷನರ್ ಚೇತನ್ ಆರ್, ಡಿಸಿಪಿ ಆಡೂರು ಶ್ರೀನಿವಾಸಲು ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿನೀಡಿ ಪರಿಶೀಲನೆ ಮಾಡಿದ್ದಾರೆ.‌ ಡಾಗ್ ಸ್ಕಾಡ್, ಬೆರಳಚ್ಚು ತಂಡದವರು ಸಹ ಆಗಮಿಸಿ ಸ್ಥಳ ಪರಿಶೀಲನೆ ಮಾಡುತ್ತಿದ್ದಾರೆ. ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣದ ಕಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here