ಸಿದ್ಧಲಿಂಗೇಶ್ವರ ಪ್ರಕಾಶನ 46ನೇ ವಾರ್ಷಿಕೋತ್ಸವ; 117 ಪುಸ್ತಕಗಳ ಲೋಕಾರ್ಪಣೆ ಸಮಾರಂಭ ಮಾ. 25ರಂದು

0
16

ಕಲಬುರಗಿ: ಇಲ್ಲಿನ ಶ್ರೀ ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಹಾಗೂ ಬಸವ ಪ್ರಕಾಶನದ 46ನೇ ವಾರ್ಷಿಕೋತ್ಸವ ಹಾಗೂ 117 ಲೋಕಾರ್ಪಣೆ ಸಮಾರಂಭ ಜರುಗಲಿದೆ ಎಂದು ಪ್ರಕಾಶಕ ಬಸವರಾಜ ಕೋನೇಕ್ ತಿಳಿಸಿದರು.

ನಗರದ ಚೇಂಬರ್ ಆಪ್ ಕಾಮರ್ಸ್ ಸಭಾಂಗಣದಲ್ಲಿ ಅಂದು ಬೆಳಗ್ಗೆ 10.30ಕ್ಕೆ ನಡೆಯಲಿರುವ ಈ ಸಮಾರಂಭದ ಸಾನ್ನಿಧ್ಯವನ್ನು ಬಡದಾಳ ತೇರಿನ ಮಠದ ಡಾ. ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು ವಹಿಸಲಿದ್ದಾರೆ.

Contact Your\'s Advertisement; 9902492681

ಸಿಯುಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಉದ್ಘಾಟಿಸಲಿದ್ದಾರೆ. ಪುಸ್ತಕ ಲೋಕಾರ್ಪಣೆಯನ್ನು ಸಾಹಿತಿ ಪ್ರೊ. ಮಲ್ಲಿಕಾರ್ಜುನ ಹಿರೇಮಠ ಮಾಡಲಿದ್ದಾರೆ. ಹಿರಿಯ ಪತ್ರಕರ್ತ ರವೀಂದ್ರ ಭಟ್ ಗುಲ್ಬರ್ಗ ವಿವಿ ಕುಲಸಚಿವ ಡಾ. ಬಿ. ಶರಣಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದೇ ವೇಳೆಯಲ್ಲಿ ವಿವಿಧ ಪ್ರಶಸ್ತಿ ಪಡೆದ ಪ್ರಕಾಶನ ಸಂಸ್ಥೆಯ ಸದಸ್ಯರನ್ನು ಸನ್ಮಾನಿಸಲಾಗುವುದು ಎಂದರು. ಶಿವರಾಜ ಪಾಟೀಲ, ಡಾ.‌ಸ್ವಾಮಿರಾವ ಕುಲಕರ್ಣಿ, ಡಾ. ಗವಿಸಿದ್ದಪ್ಪ ಪಾಟೀಲ, ಡಾ. ಚಿ.ಸಿ.‌ನಿಂಗಣ್ಣ, ಡಾ. ಶರಣಬಸವ ವಡ್ಡನಕೇರಿ ಇದ್ದರು.

ವಿಮರ್ಶೆ, ವಚನ, ದೃಶ್ಯಕಲೆ, ಚರಿತ್ರೆ, ಜೀವನ ಚರಿತ್ರೆ, ಸಂಪಾದನೆ ಸೇರಿದಂತೆ 77 ಸಾಹಿತ್ಯಕ ಕೃತಿಗಳು, ಉಳಿದಂತೆ 44 ಎನ್ ಇಪಿ ಪಠ್ಯಪುಸ್ತಕಗಳು ಬಿಡಗಡೆಯಾಗಲಿದ್ದು, ವ್ಯಾಪಾರದ ಜೊತೆಗೆ ವಿದ್ಯಾಸೇವೆ ಕೂಡ ಈ ಪ್ರಕಾಶನ ಸಂಸ್ಥೆ ವತಿಯಿಂದ ಮಾಡಲಾಗುತ್ತಿದೆ. – ಬಸವರಾಜ ಕೊನೇಕ್, ಕಲಬುರಗಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here