ನಗರದಲ್ಲಿರುವ ಇಂದಿರಾ ಕ್ಯಾಂಟಿನ್‍ಗಳು ಬಂದಾಗಿದ್ದು ಪುನಃ ಚಾಲನೆ ಮಾಡಿ ಮೇಯರ್‍ಗೆ ಒತ್ತಾಯ

0
25

ಕಲಬುರಗಿ; ನಗರದಲ್ಲಿರುವ ಇಂದಿರಾ ಕ್ಯಾಂಟಿನ್‍ಗಳು ಬಂದಾಗಿದ್ದು ಪುನಃ ಚಾಲನೆ ಮಾಡಬೇಕೆಂದು ಜೈ ಕನ್ನಡಿಗರ ಸೇನೆ ಘಟಕದ ವತಿಯಿಂದ ಮಹಾನಗರ ಪಾಲಿಕೆ ಮೇಯರ್ ವಿಶಾಲ ದರ್ಗಿ ಅವರಿಗೆ ಮನವಿ ಸಲ್ಲಿಸಿದರು.

ನಗರದಲ್ಲಿ ಸುಮಾರು 7 ಇಂದಿರಾ ಕ್ಯಾಂಟಿನಗಳು ಇದ್ದು ಇದರಲ್ಲಿ ಮಹತ್ವವಾಗಿ ಸರಕಾರಿ ಆಸ್ಪತ್ರೆ, ಎ.ಪಿ.ಎಮ್.ಸಿ. ಗಂಜ, ಕೇಂದ್ರ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಕಲಬುರಗಿ ಇನ್ನಿತರ ಇಂದಿರಾ ಕ್ಯಾಂಟಿನಗಳು ಬಂದಾಗಿರುತ್ತವೆ. ಇಂದಿರಾ ಕ್ಯಾಂಟಿನಿನ ಮೇಲ್ವಿಚಾರಕರಿಗೆ ವಿಚಾರಿಸಿದಾಗ ಸರಕಾರದ ಹಣ ಮಂಜೂರಿಯಾಗಿರುವುದಿಲ್ಲ, ಕಾರಣ ಕ್ಯಾಂಟಿನಗಳನ್ನು ಬಂದ ಮಾಡಲಾಗಿದೆ. ಸರಕಾರದಿಂದ ಹಣ ಮಂಜೂರಿಯಾದ ನಂತರವೇ ಇಂದಿರಾ ಕ್ಯಾಂಟಿನಗಳನ್ನು ಆರಂಭಗೊಳಿಸಲಾಗುವುದೆಂದು ತಿಳಿಸುತ್ತಿದ್ದಾರೆ ಅಲ್ಲದೆ ಈಗಾಗಲೆ ಬೆಂಗಳೂರಿನಲ್ಲಿರುವ ಇಂದಿರಾ ಕ್ಯಾಂಟಿನಗಳು ಆರಂಭಗೊಂಡಿರುತ್ತವೆ.

Contact Your\'s Advertisement; 9902492681

ಕಾರಣ ತಾವುಗಳು ಸರಕಾರಿ ಆಸ್ಪತ್ರೆಗೆ ಬಡ ಜನರು ಚಿಕಿತ್ಸೆ ಸಲುವಾಗಿ ಬಂದಾಗ ಅವರಿಗೆ ಇಂದಿರಾ ಕ್ಯಾಂಟಿನ ಸೌಲಭ್ಯ ದೊರೆಯುತ್ತಿಲ್ಲ ಹಾಗೂ ಕೇಂದ್ರ ಬಸ್ ನಿಲ್ದಾಣ, ಎ.ಪಿ.ಎಮ್.ಸಿ. ಗಂಜ, ರೈಲ್ವೆ ನಿಲ್ದಾಣದಲ್ಲಿ ಕೂಲಿ ಕಾರ್ಮಿಕರು ಉಪಹಾರವನ್ನು ಇಂದಿರಾ ಕ್ಯಾಂಟಿನಲ್ಲಿ ಸೇವೆಸುತ್ತಿದ್ದರು ಈಗ ಇಂದಿರಾ ಕ್ಯಾಂಟಿನಗಳು ಬಂದ ಆದ ನಂತರ ಅವರು ದುಡಿದ ಅರ್ಧ ದುಡಿಮೆಯನ್ನು ಊಟ ಊಪಹಾರಕ್ಕಾಗಿ ಸುರಿಯಬೇಕಾಗಿದೆ. ಕಾರಣ ತಾವು ಮುಂದೆ ನಡೆಯುವ ಅಧಿವೇಶನದಲ್ಲಿ ಸರಕಾರದ ಮೇಲೆ ಒತ್ತಡ ಹೇರಿ ಇಂದಿರಾ ಕ್ಯಾಂಟಿನಗಳಿಗೆ ಹಣ ಮಂಜೂರಿ ಮಾಡಿ ಮರಳಿ ಇಂದಿರಾ ಕ್ಯಾಂಟಿನ ಮನರ ಆರಂಭಗೊಳಿಸಿ ಬಡ ಜನರಿಗೆ, ಕೂಲಿ ಕಾರ್ಮಿಕರಿಗೆ, ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ದತ್ತು ಹೆಚ್, ಭಾಸಗಿ, ಸುಭಾಷ ಅರುಣ, ಪವನ, ಅಂಬೇಷ, ಸಾಯಿ, ಲಕೃತಿ, ಅಮರ, ದರ್ಶನ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here