“ಅಮ್ರತಮತಿ”ಚಲನಚಿತ್ರ ಪ್ರದರ್ಶನಕ್ಕೆ ಚಾಲನೆ

0
2

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಪ್ರಖ್ಯಾತ ಕನ್ನಡ ಚಲನಚಿತ್ರ ಹಾಸ್ಯ ನಟ ಟೆನಿಸ್ ಕ್ರಷ್ಣ ಅವರು  ಕನ್ನಡ  ಖ್ಯಾತ ಸಾಹಿತಿ ಡಾ ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದ “ಅಮ್ರತಮತಿ”ಚಲನಚಿತ್ರ ಪ್ರದರ್ಶನ ಉದ್ಘಾಟನೆ ನೆರವೇರಿಸಿದರು.

ಚಲನಚಿತ್ರಗಳು ಸಮಾಜದ ಕಣ್ಣು ಮನಸ್ಸು  ಸಮಾಜದ ಓರೆ. ಕೋರೆಗಳನ್ನು ಕಥನವನ್ನು ದ್ರಶ್ಯ ಮಾಧ್ಯಮ ಮೂಲಕ ತೆರೆದು ತೋರಿಸುತ್ತವೆ ಆದರೆ ಕನ್ನಡ ಸಾಹಿತ್ಯ  ಸಾಹಿತ್ಯ ಚರಿತ್ರೆಯಲ್ಲಿ ಸಿನಿಮಾ ಸಾಹಿತ್ಯ ಅಲಕ್ಷಿಸಲಾಗಿದ್ದಕ್ಕೆ ವಿಷಾದಿಸಿದರು ಸಿನಿಮಾವನ್ನು ಸಾಹಿತ್ಯ ಮಾಧ್ಯಮಕ್ಕೆ ತಂದ ಕೀರ್ತಿ ಪ್ರೊ ಬರಗೂರು ರಾಮಚಂದ್ರಪ್ಪ ಅವರಿಗೆ ಸಲ್ಲುತ್ತದೆ.

Contact Your\'s Advertisement; 9902492681

ಉತ್ತರ ಕರ್ನಾಟಕ ಕಲ್ಯಾಣ ಕರ್ನಾಟಕದ ಜನರು ಕಲಾವಿದರನ್ನು ಪೋಷಿಸಿ ನೀಡಿದ ಪ್ರೋತ್ಸಾಹ ನೆನೆಸಿಕೊಂಡರು. ರಾಜಕುಮಾರ ವಿಷ್ಣುವರ್ಧನ್ ಶಂಕರನಾಗ್ ಅನಂತನಾಗ್ ರಂಥ ಅಭಿಜಾತಕಲಾರತ್ನರಿಂದ ಹಿಡಿದು ಬಿರಾದಾರ ಸಾಧುಕೋಕಿಲ ಬ್ಯಾಂಕ್ ಜನಾರ್ದನ್ ನನ್ನಂಥ ಟೆನಿಸ್ ನನ್ನು ಕನ್ನಡ ಕಲಾ ಪ್ರೇಕ್ಷಕರು ಪೋಷಿಸಿದ್ದಾರೆ ಕನ್ನಡ ನಾಡಿನಲ್ಲಿ ಹುಟ್ಟಿದ ನನ್ನ ಜನ್ಮ ಸಾರ್ಥಕ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು ಹೆಸರಾಂತ ಚಿಂತಕರು ಕಥೆಗಾರರು ಪ್ರೊ ಎಚ್ ಟಿ ಪೋತೆ ಅವರು ವಹಿಸಿ ಕಲೆಯನ್ನು ಆಸ್ವಾದಿಸುವ ಗುಣ ಎಲ್ಲರಲ್ಲಿ ಇರಬೇಕು ಕಲೆ ನಮ್ಮ ಆರೋಗ್ಯ ಆಯುಷ್ಯ ಹೆಚ್ಚುತ್ತದೆ ಎಂದು ಹೇಳಲಾಗುತ್ತಿದೆ ಕಲಾವಿದರು ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿ  ಕಲೆಯನ್ನು ನೀಡುತ್ತಾರೆ ಕಲಾವಿದರು ನೋವುಂಡು ನಗುವನ್ನು ನೀಡುವ ನಿಜವಾದ ಪ್ರತಿಭಾವಂತರು ಎಂದು ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥರು ಪ್ರೊ ಜಿ ಶ್ರೀರಾಮಲು ಅವರು ಈ ಸಂದರ್ಭದಲ್ಲಿ ಬರಗೂರು ಕನ್ನಡದ ಬಹುದೊಡ್ಡ ಚಿಂತಕರು ಅವರ ಸಾಮಾಜಿಕ ಬದ್ದತೆ ಸಾಹಿತ್ಯ ಪ್ರೀತಿ ಚಲನಚಿತ್ರ ರಂಗವನ್ನು ಸದಭಿರುಚಿ ಗೊಳಿಸಿದ  ಶ್ರೇಷ್ಠ ನಿರ್ದೇಶಕ ರು ಎಂದು ಹೇಳಿದರು. ಸಮೂಹ ಮಾಧ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥರು ಪ್ರೊ ಡಿ ಬಿ ಪಾಟೀಲ  ಕನ್ನಡ ಅಧ್ಯಯನ ಸಂಸ್ಥೆಯ ಸಂದರ್ಶಕ ಪ್ರಾಧ್ಯಾಪಕ ಡಾ ಶ್ರೀಶೈಲ ನಾಗರಾಳ ಅತಿಥಿಯಾಗಿದ್ದರು.

ಡಾ ಎಂ ಬಿ ಕಟ್ಟಿ ಅವರು ಪ್ರಾಸ್ತಾವಿಕ ಮಾತನಾಡಿದರು. ಅತಿಥಿ ಸಹಾಯಕ ಪ್ರಾಧ್ಯಾಪಕ ಡಾ ವಸಂತ ನಾಶಿ ಅವರು ಅತಿಥಿಗಳನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿದರು, ಡಾ  ಹಣಮಂತ ಮೇಲಕೇರಿ ವಂದಿಸಿದರು. ನಂತರ ಸಾಹಿತಿ ಡಾ ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದ ಅಮ್ರತಮತಿ ಚಲನಚಿತ್ರ ಪ್ರದರ್ಶಿಸಲಾಯಿತು.

ದಾವಣಗೆರೆ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ ಶಾಂತರಾಜು ರಾಜು ಸಂಕ ಕರಾಟೆ ತರಬೇತುದಾರರು. ಕನ್ನಡ ಅಧ್ಯಯನ ಸಂಸ್ಥೆಯ ಅತಿಥಿ ಸಹಾಯಕ ಪ್ರಾಧ್ಯಾಪಕರು ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here