ಸುರಪುರ:ಚುನಾವಣಾಧಿಕಾರಿ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ

0
14

ಸುರಪುರ: ನಗರದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಸುರಪುರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಅಮರೇಶ ನಾಯಕ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಚುನಾವಣಾಧಿಕಾರಿಗಳು,ಈಬಾರಿಯ ಚುನಾವಣೆಯ ಕುರಿತು ನಿಮಗೆ ವಹಿಸಿರುವ ಕರ್ತವ್ಯವನ್ನು ಸರಿಯಾಗಿ ನಿಭಾಯಿಸುವಂತೆ ಕರೆ ನೀಡಿದರು.ನಿಮ್ಮ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಲೋಪವಾಗದಂತೆ ನಿಗಾವಹಿಸುವಂತೆ ತಿಳಿಸಿದರು.ಅಲ್ಲದೆ ಗೋಡೆ ಬರಹಗಳಾಗಲಿ,ಬ್ಯಾನರ್‍ಗಳಾಗಲಿ,ಧ್ವಜಗಳಾಗಲಿ ಯಾವುದು ಇಲ್ಲದಂತೆ ತೆರವುಗೊಳಿಸಿ.ನಿಮ್ಮೊಂದಿಗೆ ಅಗತ್ಯವಿದ್ದಲ್ಲಿ ಸ್ಥಳಿಯ ಗ್ರಾಮ ಪಂಚಾಯತಿಯ ಸಿಬ್ಬಂದಿಗಳನ್ನು ತೊಡಗಿಸಿಕೊಳ್ಳಿ ಎಂದು ತಿಳಿಸಿದರು.

Contact Your\'s Advertisement; 9902492681

ಇಂದಿನಿಂದಲೇ ನಿಮ್ಮ ಕಾರ್ಯವ್ಯಾಪ್ತಿಯಲ್ಲಿ ನಿಗಾವಹಿಸುವಂತೆ ತಿಳಿಸಿದರು.ಅಲ್ಲದೆ ಚೆಕ್‍ಪೋಸ್ಟ್‍ಗಳಲ್ಲಿ ಕಾರ್ಯನಿರ್ವಹಿಸುವವರು ತುಂಬಾ ನಿಗಾವಹಿಸುವಂತೆ ಸೂಚಿಸಿದರು.ಈಗಾಗಲೇ ಜಿಲ್ಲೆಯ ವಿವಿಧ ಚೆಕ್‍ಪೋಸ್ಟ್‍ಗಳಲ್ಲಿ ಅನೇಕ ವಸ್ತುಗಳು ಸೀಜಾಗ್ತಿವೆ,ಆದರೆ ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಏನೊಂದು ಸೀಜ್ ಆಗದಿರುವುದು ಮೇಲಾಧಿಕಾರಿಗಳಿಗೆ ಅನುಮಾನಕ್ಕೆ ಕಾರಣವಾಗಲಿದೆ.ಆದ್ದರಿಂದ ಎಲ್ಲಾ ಚೆಕ್‍ಪೋಸ್ಟ್‍ಗಳಲ್ಲಿ ತೀವ್ರನಿಗಾವಹಿಸಿ.ಯಾವುದೇ ಚೆಕ್ ಪೋಸ್ಟಿನಿಂದ ಏನಾದರು ಅಕ್ರಮವಾಗಿ ವಸ್ತುಗಳು ಪಾರಾಗಿ ಮುಂದಿನ ಚೆಕ್‍ಪೋಸ್ಟ್‍ಲ್ಲಿ ಸಿಕ್ಕರೆ ಹಿಂದಿನ ಎಲ್ಲಾ ಚೆಕ್‍ಪೋಸ್ಟ್‍ನವರಿಗೆ ಕ್ರಮವಾಗಲಿದೆ ಎಂಬುದು ನೆನಪಲ್ಲಿಟ್ಟುಕೊಳ್ಳುವಂತೆ ಎಚ್ಚರಿಸಿದರು.

ತಹಸೀಲ್ದಾರರು ಹಾಗೂ ಸಹಾಯಕ ಚುನಾವಣಾಧಿಕಾರಿ ಸುಬ್ಬಣ್ಣ ಜಮಖಂಡಿ ಮಾತನಾಡಿ,ಚೆಕ್‍ಪೋಸ್ಟ್‍ಗಳಿಂದ ಚಿಕ್ಕ ಮಕ್ಕಳ ಬ್ಯಾಗ್‍ಗಳು ಅಥವಾ ಚೆಕ್‍ಪೋಸ್ಟ್ ಬಂದಾಗ ವಾಹನ ದಿಂದ ಇಳಿದು ನಡೆದುಕೊಂಡು ತಪ್ಪಿಸಿಕೊಂಡು ಹೋಗುವುದು ಇಂತಹ ಹಲವಾರು ತಂತ್ರಗಳನ್ನು ಮಾಡುತ್ತಾರೆ ಇದರ ಬಗ್ಗೆ ಗಮನವಿರಲಿ ಎಂದರು.ಅಲ್ಲದೆ ಯಾವುದೇ ಅಧಿಕಾರಿಗಳು ಮಾಹಿತಿ ನೀಡದೆ ಕ್ಷೇತ್ರ ಬಿಟ್ಟು ಹೋಗುವಂತಿಲ್ಲ,ಹಾಗೊಮ್ಮೆ ಅಗತ್ಯವಿದ್ದಲ್ಲಿ ಚುನಾವಣಾ ಅಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಡಿವೈಎಸ್ಪಿ ಡಾ:ಮಂಜುನಾಥ ಟಿ ಮಾತನಾಡಿ.ಟಿ ಮಾತನಾಡಿ,ಯಾವುದೇ ಚೆಕ್‍ಪೋಸ್ಟ್‍ಲ್ಲಿ ರಾಜಕಾರಣಿಗಳು ಏನಾದರು ತಪ್ಪಿಸಿಕೊಂಡು ತರುವಂತದ್ದನ್ನು ಕೇವಲ ಪೊಲೀಸರೆ ಸೀಜ್ ಮಾಡಲಿ ಎಂದು ಇರಬೇಡಿ,ಎಲ್ಲರಿಗೂ ಜವಬ್ದಾರಿ ಇರುವುದರಿಂದ ಯಾವುದೇ ರೀತಿಯ ಅಕ್ರಮವಾಗಿ ವಸ್ತುಗಳು,ಹಣ ತರದಂತೆ ತಾವೆಲ್ಲರು ಸೇರಿ ಎಚ್ಚರಿಕೆ ವಹಿಸುವಂತೆ ತಿಳಿಸಿದರು.

ಸಭೆಯಲ್ಲಿ ಹುಣಸಗಿ ತಹಸೀಲ್ದಾರರು ಹಾಗೂ ಸಹಾಯಕ ಚುನಾವಣಾ ಅಧಿಕಾರಿಗಳಾದ ಜಗದೀಶ ಚೌರ್,ಗ್ರೇಡ-2 ತಹಸೀಲ್ದಾರ್ ಮಲ್ಲಯ್ಯ ದಂಡು,ಉಪ ತಹಸೀಲ್ದಾರ್ ಅವಿನಾಶ್, ಸುರಪುರ ಠಾಣೆ ಪಿ.ಐ ಆನಂದ ವಾಘ್ಮೋಡೆ,ಹುಣಸಗಿ ಠಾಣೆ ಸರ್ಕಲ್ ಇನ್ಸ್ಪೇಕ್ಟರ್ ಬಿ.ಎನ್.ಚಿಕ್ಕಣ್ಣನವರ್,ತಾ.ಪಂ ಇಒ ಚಂದ್ರಶೇಖರ್ ಪವಾರ್,ನಗರಸಭೆ ಪೌರಾಯುಕ್ತ ಪ್ರೇಮ್ ಚಾಲ್ರ್ಸ್,ಸಿಡಿಪಿಓ ಅನಿಲ್ ಕಾಂಬ್ಳೆ,ಟಿ.ಹೆಚ್.ಓ ಡಾ:ಆರ್.ವಿ.ನಾಯಕ, ಸಮಾಜಕಲ್ಯಾಣಾಧಿಕಾರಿ ಶೃತಿ ಎಸ್ ಸೇರಿದಂತೆ ಕ್ಷೇತ್ರದ ಎಲ್ಲಾ ಅಧಿಕಾರಿಗಳು ಭಾಗವಹಿಸಿದ್ದರು.ಹಣಮಂತ್ರಾಯ ಪೂಜಾರಿ ಸಭೆಯ ಕುರಿತು ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here