ಭಾಲ್ಕಿ; ಭಾಲ್ಕಿಯ ಹಿರೇಮಠ ಸಂಸ್ಥಾನ ವಿದ್ಯಾಪೀಠದ ಅಡಿಯಲ್ಲಿ ನಡೆಯುತ್ತಿರುವ ಗುರುಪ್ರಸಾದ ಪ್ರೌಢಶಾಲೆಯ 10ನೇ ತರಗತಿ ಮಕ್ಕಳ ಬೀಳ್ಕೋಡುಗೆ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ, ವಿದ್ಯಾರ್ಥಿ ಜೀವನ ಮತ್ತೆ ಮತ್ತೆ ಬರುವುದಿಲ್ಲ. ಬೆಳಿಗ್ಗೆಯಿಂದ ರಾತ್ರಿಯವರೆಗೆ ಎಲ್ಲಾ ಕಾರ್ಯಗಳು ಒಳ್ಳೆಯ ರೀತಿಯಿಂದ ನಡೆಸಿಕೊಂಡು ಹೋದರೆ ಅದಕ್ಕಿಂತ ದೊಡ್ಡ ಜೀವನ ಮತ್ತೊಂದಿಲ್ಲ. ನೀವೆಲ್ಲರೂ ನಾಳೆ ನಡೆಯುವ ಪರೀಕ್ಷೆಯನ್ನು ಹಬ್ಬದಂತೆ ಆನಂದದಿಂದ ವಿಜೃಂಭಣೆಯಿಂದ ಎದುರಿಸಬೇಕು. ಸಮಯವನ್ನು ವ್ಯರ್ಥ ಮಾಡದೆ ಸದುಪಯೋಗಪಡಿಸಿಕೊಳ್ಳಬೇಕು. ನಿ
ಮ್ಮ ಮನಸ್ಸು ಸರಿಯಾಗಿ ಇಟ್ಟುಕೊಳ್ಳಿ ನಿಮ್ಮ ಶರೀರ ಕೆಡಸಿಕೊಳ್ಳಬೇಡಿ, ನಿಮ್ಮ ಅತಿ ದೊಡ್ಡ ಶತ್ರು ಎಂದರೆ ನೀವು ಖಿನ್ನತೆಗೆ ಒಳಗಾಗುವುದು. ಜನ್ಮ ಕೊಟ್ಟ ತಂದೆ-ತಾಯಿಗೆ, ವಿದ್ಯೆ ಕಲಿಸಿದ ಗುರುಗಳಿಗೆ ಎಂದೂ ಮರೆಯದೆ ಕೃತಜ್ಞತೆ ಭಾವದಿಂದ ಗೌರವಿಸಬೇಕು. 10ನೇ ಮುಗಿದ ನಂತರ ಮುಂದಿನ ಕೋರ್ಸನ್ನು ಬಹಳ ಎಚ್ಚರದಿಂದ ಆರಿಸಿಕೊಳ್ಳಿ, ಅಂದಿನ ವಿಷಯ ಅಂದೆ ಓದಿ ಮುಗಿಸಿ. ನೀವು ಬರೆಯುವ ಪರೀಕ್ಷೆಗೆ ಯಶಸ್ವಿ ಸಿಗಲಿ ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಆಶೀರ್ವದಿಸಿದರು.
ದಿವ್ಯ ಸಮ್ಮುಖ ವಹಿಸಿದ ಅನುಭವಮಂಟಪ ಸಂಚಾಲಕರಾದ ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳು, ಗುರುಪ್ರಸಾದ ಎಂದರೆ ಗುರುವಿನ ಆಶೀರ್ವಾದವೇ ಗುರುಪ್ರಸಾದ. ಇಂತಹ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ತಾವೆಲ್ಲರೂ ಭಾಗ್ಯವಂತರು, ನೀವು ಶಿಕ್ಷಣದ ಜೊತೆಗೆ ಸಂಸ್ಕಾರಯುತ ಒಳ್ಳೆಯು ಶಿಕ್ಷಣವನ್ನು ಕಲಿಯುತ್ತಿದ್ದೀರಿ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿಯೂ ಭಾಗವಹಿಸಬೇಕು, 10ನೇ ಮುಗಿದ ನಂತರ ಸೈನ್ಸ್ ಅಷ್ಟೇ ಮೇಲುಗೈ ಅಲ್ಲ, ಆರ್ಟನಲ್ಲಿಯೂ ಬಹಳಷ್ಟು ದಾರಿಗಳಿವೆ ಎಂದು ನುಡಿದರು.
ಶರಣ ಸಿದ್ಧಯ್ಯ ಕಾವಡಿಮಠ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ, ಶರಣ ಪ್ರದೀಪ ಬಿರಾದಾರ ಆಗಮಿಸಿದ್ದರು. ಪ್ರಾಸ್ತಾವಿಕವಾಗಿ ಮುಖ್ಯಗುರುಗಳಾದ ಬಾಬು ಬೆಲ್ದಾಳ ಮಾತನಾಡಿದರು. ಮುಖ್ಯಗುರುಗಳಾದ ಸವಿತಾ ಭೂರೆ ವಂದನಾರ್ಪಣೆ ಮಾಡಿದರು.
ಶಿಕ್ಷಕರಾದ ಸಿದ್ರಾಮ ರಾಜಪುರೆ ಅವರು ನಿರೂಪಿಸಿದರು. ಗುರುಪ್ರಸಾದ ವಿದ್ಯಾರ್ಥಿ ಕರಣ ಶಿವಕುಮಾರ ಸ್ವಾಗತಿಸಿದರು. ಗುರುಪ್ರಸಾದ ಶಾಲೆಯ ಎಲ್ಲಾ ಶಿಕ್ಷಕ ಶಿಕ್ಷಕೇತರ ಸಿಬ್ಬಂದಯವರು ಉಪಸ್ಥಿತರಿದ್ದರು. 10ನೇ ತರಗತಿ ಮಕ್ಕಳು ತಮ್ಮ ಅನಿಸಿಕೆಗಳನ್ನು ವ್ಯಕ್ತಿಪಡಿಸಿದರು. ತಮಗೆ ಬೋದನೆ ಮಾಡಿರುವ ಗುರುಗಳಿಗೆ ವಿದ್ಯಾರ್ಥಿಗಳು ಗುರುಕಾಣಿಕೆಯನ್ನು ನೀಡಿದರು.