ಸುರಪುರ: ತಾಲೂಕಿನಲ್ಲಿ ಕೃಷ್ಣಾ ನದಿಯಲ್ಲಿ ಉಂಟಾದ ಪ್ರವಾಹಕ್ಕೆ ಒಳಗಾದ ಗ್ರಾಮಗಳಿಗೆ ಸರಕಾರದ ವತಿಯಿಂದ ಆಶ್ರಯ ಕಲ್ಪಿಸಿರುವ ಸ್ಥಳೀಯ ಕುಂಬಾರಪೇಟನ ಗಂಜ್ನಲ್ಲಿರುವ ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ವಿವಿಧ ಗ್ರಾಮಗಳ ಪ್ರವಾಹ ಸಂತ್ರಸ್ಥರಿಗೆ ನಗರದ ಗಾಯತ್ರಿ ಮಹಿಳಾ ಮಂಡಲದ ವತಿಯಿಂದ ಚಹಾ, ಬಿಸ್ಕತ್ ಉಪಹಾರ ವ್ಯವಸ್ಥೆ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಗಂಜಿ ಕೇಂದ್ರದಲ್ಲಿರುವ ವಿವಿಧ ಗ್ರಾಮಗಳ ಗ್ರಾಮಸ್ಥರಿಗೆ ಮಂಡಳಿಯ ಮಹಿಳಾ ಸದಸ್ಯರು ಚಹಾ ಮತ್ತು ಬಿಸ್ಕತ್ಗಳನ್ನು ವಿತರಿಸಿದರು, ಈ ಸಂದರ್ಭದಲ್ಲಿ ಮಂಡಳಿಯ ಸದಸ್ಯರು ಪ್ರವಾಹ ದಿಂದ ತೊಂದರೆಗೊಳಗಾದ ಜನತೆ ಸ್ಥೈರ್ಯವನ್ನು ಕಳೆದುಕೊಳ್ಳಬಾರದು ಈ ಸಂದರ್ಭದಲ್ಲಿ ಪ್ರವಾಹ ಸಂತ್ರಸ್ಥರಿಗೆ ಇತರ ಸಂಘ ಸಂಸ್ಥೆಗಳು ಕೂಡಾ ಮುಂದೆ ಬಂದು ಎಲ್ಲಾ ರೀತಿಯಿಂದಲೂ ನೆರವು ನೀಡಿ ಸಂತ್ರಸ್ಥರಿಗೆ ಮಾನಸಿಕ ಸ್ಥೈರ್ಯ ತುಂಬುವುದು ಅವಶ್ಯಕ ಎಂದು ಹೇಳಿದರು, ಚಹಾ ಮತ್ತು ಬಿಸ್ಕತ್ ವಿತರಿಸಿದ ನಂತರ ಸಂತ್ರಸ್ಥರು ಇರುವ ಸುತ್ತಲೂ ಇರುವ ಪ್ರದೇಶವನ್ನು ಸ್ವಚ್ಛಗೊಳಿಸುವ ಕೆಲವನ್ನು ಮಹಿಳಾ ಮಂಡಳಿಯ ಸದಸ್ಯರು ಕೈಗೊಂಡರು.