ಬೆಂಗಳೂರು: ಶೋಷಿತರ ಏಳ್ಗೆಗಾಗಿ ಶ್ರಮಿಸುತ್ತಿರುವ ಚಂದ್ರಶೇಖರ್ ರಾವಣ್ ಅವರು ನಮ್ಮೇಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ಅವರ ಭೀಮ್ ಆರ್ಮಿ ಶಕ್ತಿ ದೇಶದಾದ್ಶಂತ ಹರಡಲಿ ಎಂದು ಹೋರಾಟಗಾರ ಗುರಣ್ಣ ಐನಾಪುರ ಹೇಳಿದರು.
ಬೆಂಗಳೂರಿನಲ್ಲಿ ಭೀಮ್ ಆರ್ಮಿ ಸಂಸ್ಥಾಪಕ ಚಂದ್ರಶೇಖರ್ ರಾವಣ್ ಅವರನ್ನು ಸನ್ಮಾನಿಸಿ ಮಾತನಾಡಿದರು. ಸೇನೆಯ ಶಕ್ತಿ ಹೆಚ್ಚಾಗಲಿ. ದೇಶದ ಅಸಮಾನತೆ ಹೊಡೆದೊಡಿಸಲು ಅವರಿಗೆ ಇನ್ನಷ್ಟು ಶಕ್ತಿ ತುಂಬೋಣ ಎಂದರು.
ಈ ವೇಳೇ ಭೀಮ್ ಆರ್ಮಿ ರಾಷ್ಟ್ರೀಯ ಅಧ್ಯಕ್ಷರಾದ ರಾವಣ್ ಚಂದ್ರಶೇಖರ್ ಆಜಾದ್ ಅವರನ್ನು ರಾಜ್ಯ ಅಧ್ಯಕ್ಷರಾದ ಎಸ್. ಪಾಲ್ ಬೋರೆˌ ದೇವೇಂದ್ರ ಬಾಲಕೆˌ ಸಂಪತ್ತು ಬಯ್ಯˌ ಸಂತೋಷ್ ಪಾಳ ಕಲಬುರ್ಗಿ ಜಿಲ್ಲಾ ಅಧ್ಯಕ್ಷರಾದ ನಾಗೇಶ್ ಕೊಳ್ಳಿˌ ತಾಲ್ಲೂಕು ಅಧ್ಯಕ್ಷ ಬಾಬು ಬಿಲ್ವಾಡˌ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಸತೀಶ್ ಹುಗ್ಗಿ ಸೇರಿದಂತೆ ಇತರರು ಸನ್ಮಾನಿಸಿದರು.