ಸುರುಪುರು: ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ.ಚನ್ನಬಸವ ಎಂ ನಿಷ್ಠಿ ಸಾಮಾನ್ಯ ಶಸ್ತ್ರಚಿಕಿತ್ಸೆ ತಜ್ಞರು, ಡಾ.ಶಿವಪ್ರಸಾದ ಗೌಡ ಚರ್ಮರೋಗ ತಜ್ಞರು & ಡಾ.ಅಮರಾನಾಥ ಯಲುಬುರೋಗ ತಜ್ಞರು ಆಗಮಿಸಿದ್ದರು.
ಡಾ.ಚನ್ನಬಸವ ಎಂ ನಿಷ್ಠಿ ಯವರ ಮಾನವನಿಗೆ ಅವನ ಸಂಪೂರ್ಣ ಜೀವಿತಾವಧಿಯಲ್ಲಿ ಆರೋಗ್ಯವೇ ದೊಡ್ಡ ಸಂಪತ್ತು ಅಧಿಕ ಹಣವಿಲ್ಲದೆ ಬದುಕಬಹುದು ಆದರೆ ಉತ್ತಮ ಆರೋಗ್ಯವಿಲ್ಲದೆ ಬದುಕಲು ಸಾಧ್ಯವಿಲ್ಲ. ಆರೋಗ್ಯವು ನಾವು ಹಣದಿಂದ ಖರೀದಿಸಲು ಸಾಧ್ಯವಿಲ್ಲ ಆದರೆ ನಾವು ಅದನ್ನು ನೋಡಿಕೊಳ್ಳಬಹುದು ಮತ್ತು ಹಣದ ಸಹಾಯದಿಂದ ಅಗತ್ಯವಿದ್ದಾಗ ಅದನ್ನು ಗುಣಪಡಿಸಬಹುದು. ಒಬ್ಬ ವ್ಯಕ್ತಿಯು ಉತ್ತಮ ಆರೋಗ್ಯವನ್ನು ಹೊಂದಿಲ್ಲದಿದ್ದರೆ, ಅವನು ತನ್ನ ಜೀವನವನ್ನು ಪೂರ್ಣವಾಗಿ ಆನಂದಿಸಲು ಸಾಧ್ಯವಾಗುವುದಿಲ್ಲ. ಹಣವು ವ್ಯಕ್ತಿಯನ್ನು ಶ್ರೀಮಂತ ಮತ್ತು ಸಂತೋಷವನ್ನು ತರುವುದಿಲ್ಲ ಆದರೆ ಉತ್ತಮ ಆರೋಗ್ಯವನ್ನು ನೀಡುತ್ತದೆ. ಇದಲ್ಲದೆ, ಒಬ್ಬ ವ್ಯಕ್ತಿಯು ಉತ್ತಮ ಆರೋಗ್ಯವಿಲ್ಲದೆ ಸಂಪೂರ್ಣ ಮತ್ತು ಸಂತೋಷವನ್ನು ಅನುಭವಿಸಲು ಸಾಧ್ಯವಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಸುರಪುರ ನಗರದ ಹಾಗು ಸುತ್ತಮುತ್ತ ಹಳ್ಳಿ ಜನರಿಗೆ ಪ್ರತಿ ಶುಕ್ರವಾರಕ್ಕೊಮ್ಮೆ ಮಹಾ ವಿದ್ಯಾಲಯದ ಆವರಣದಲ್ಲಿ ತಜ್ಞ ವೈದ್ಯರ ತಂಡದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗುವುದು ಎಂದು ತಿಳಿಸಿದರು.
ಡಾ.ಶಿವಪ್ರಸಾದ ಗೌಡ ಚರ್ಮರೋಗ ತಜ್ಞರು ನಿಮ್ಮ ತ್ವಚೆಯನ್ನು ಚೆನ್ನಾಗಿ ನೋಡಿಕೊಳ್ಳುವುದರಿಂದ ಅನೇಕ ಪ್ರಯೋಜನಗಳಿವೆ ಉತ್ತಮ ಚರ್ಮದ ಆರೈಕೆಯು ಚರ್ಮದ ವಯಸ್ಸಾದ ಮತ್ತು ಚರ್ಮದ ಕ್ಯಾನ್ಸರ್ನ ಆರಂಭಿಕ ಚಿಹ್ನೆಗಳನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ. ಸರಿಯಾದ ಚರ್ಮದ ಆರೈಕೆಯ ದಿನಚರಿಯು ಕೆಂಪು ಬಣ್ಣವನ್ನು ಕಡಿಮೆ ಮಾಡುತ್ತದೆ, ಕಡಿಮೆ ಮುರಿತಗಳಿಗೆ ಕಾರಣವಾಗಬಹುದು ಮತ್ತು ನಿಮಗೆ ಆರೋಗ್ಯಕರವಾಗಿ ಕಾಣುವ ಚರ್ಮವನ್ನು ನೀಡುತ್ತದೆ ಎಂದು ತಿಳಿಸಿಕೊಟ್ಟರು.
ಡಾ.ಅಮರಾನಾಥ ಯಲುಬುರೋಗ ತಜ್ಞರು ವೈಜ್ಞಾನಿಕ ಜೀವನ ಶೈಲಿಯನ್ನು ಬೆನ್ನು ಹತ್ತಿದ ಮನುಷ್ಯ ತನ್ನ ಆರೋಗ್ಯದ ಕಡೆ ಗಮನ ಕೊಡುವುದನ್ನು ಮರೆತಿದ್ದಾನೆ. ಸರಳ ಜೀವನ ಉತ್ತಮ ಆಹಾರ ಒತ್ತಡ ನಿರ್ವಹಣೆ ಮತ್ತು ಯೋಗ ಇವುಗಳನ್ನು ಅಳವಡಿಕೆ ಮಾಡಿಕೊಳ್ಳುವುದರಿಂದ ಉತ್ತಮ ಆರೋಗ್ಯ ಕಾಯ್ದುಕೊಳ್ಳಬಹುದು ಎಂದು ತಿಳಿಸಿದರು
ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾ. ಶರಣಬಸಪ್ಪ ಸಾಲಿಯವರು, ಪ್ರೊ. ಮೋಹನರೆಡ್ಡಿ ದೇಸಾಯಿ ಪ್ರಾಚಾರ್ಯರು ಬಸವರಾಜಪ್ಪ ಅಪ್ಪಾ ವಾಣಿಜ್ಯ ಪದವಿ ಮಹಾವಿದ್ಯಾಲಯ ಸುರಪುರ, ಡಾ. ಅಶೋಕ ಪಾಟೀಲ ಪರೀಕ್ಷಾ ವಿಭಾಗ, ಪ್ರೊ.ಶರಣಗೌಡ ಪಾಟೀಲ ಶೈಕ್ಷಣಿಕ ವಿಭಾಗದ, ಹಾಗೂ ಎಲ್ಲಾ ಭಾಗದ ಮುಖ್ಯಸ್ಥರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಪ್ರೊ. ಗಂಗಾಧರ ಹೂಗಾರ ನಿರೂಪಿಸಿ ವಂದಿಸಿದರು.