ಕಲಬುರಗಿ: ಜೈ ಭಾರತ ಮಾತಾ ಸೇವಾ ಸಮಿತಿ ನವದೆಹಲಿ ವತಿಯಿಂದ ಎಪ್ರಿಲ್ 14 ರಂದು ಮುಂಬೈನಲ್ಲಿ ಆಯೋಜಿಸಲಾಗಿರುವ ಸಂವಿಧಾನಾ ಶಿಲ್ಪಿ ಡಾ. ಬಿ.ಆರ್.ಅಂಬೆಡ್ಕರ ಅವರ ಜಯಂತಿ ಆಚರಣೆ ಸಂಭಂದ ಪೂರ್ವ ಸಿದ್ದತೆಗಾಗಿ ಸಮಿತಿಯ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷರಾದ ಹವಾ ಮಲ್ಲಿನಾಥ ಮಹಾರಾಜ ನಿರಗುಡಿಯವರು ಮುಂಬೈನ ದಾದರ ಬಳಿ ಇರುವ ಡಾ. ಅಂಬೆಡ್ಕರ್ ಅವರ ಚೈತ್ಯ ಭೂಮಿಯಲ್ಲಿರುವ ಸ್ಮಾರಕಕ್ಕೆ ಭೆಟಿ ನೀಡಿ ಮಾಹನಾಯಕ ಡಾ.ಬಿ .ಆರ್ ಅಂಬೇಡ್ಕರ ಅವರಿಗೆ ನಮನ ಸಲ್ಲಿಸಿ ಅವರ ಸ್ಮಾರಕ ಬಳಿ ಕರ್ತವ್ಯ ನಿರತ ಪೋಲಿಸ ಅಧಿಕಾರಿಗಳಿಗೆ ಸತ್ಕರಿಸಿದರು.
ನಂತರ ಕಾರ್ಯಕ್ರಮ ಆಯೋಜಿಸಿರುವ ಸ್ಥಳ ಪರಿಶೀಲನೆ ನಡೆಸಿ ಮುಂಬೈನ ವಿರಾರದಲ್ಲಿರುವ ಅವರ ಶಿವ ಮುಂದಿರ ಆಶ್ರಮದಲ್ಲಿ ಸಮಿತಿ ಮುಖಂಡರ ಹಾಗು ಕಾರ್ಯಕರ್ತರ ಸಭೆ ಕರೆದು ಕಾರ್ಯಕಮದ ಯಶಸ್ವಿಗೆ ಸುಕ್ತ ಮಾರ್ಗದರ್ಶನ ಹಾಗೂ ಸಲಹೆ ನೀಡಿದರು.
ಕಳೆದ ವರ್ಷವು ಕೂಡ ಸಮೀತಿ ವತಿಯಿಂದ ಡಾ. ಬಿ ಆರ್. ಅಂಬೆಡ್ಕರ ಅವರ ಜಯಂತಿ ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ಹವಾಮಲ್ಲಿನಾಥ ಮಹಾರಾಜರು ಸಹಸ್ರಾರು ದೇಶ ಬಾಂಧವರೊಂದಿಗೆ ಯಶಸ್ವಿಯಾಗಿ ಆಚರಣೆ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ ಎಂದು ಸಮಿತಿಯ ರಾಷ್ಟ್ರೀಯ ವಕ್ತಾರರಾದ ವೈಜನಾಥ ಎಸ್ ಝಳಕಿ ಅವರು ಮಾಧ್ಯಮಕ್ಕೆ ತಿಳಿಸಿದರು.