ರಾಜಕೀಯ ಪಕ್ಷಗಳ ಘೋಷಣಾ ಪತ್ರದಲ್ಲಿ ಸ್ಥಳೀಯ ಸಮಸ್ಯೆಗಳಿಗೆ ಆಧ್ಯತ್ಯೆ ನೀಡಬೇಕು; ಲಕ್ಷ್ಮಣ ದಸ್ತಿ

0
48

ಕಲಬುರಗಿ: ಪ್ರಸ್ತುತ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಆಯಾ ರಾಜಕೀಯ ಪಕ್ಷಗಳು ತಮ್ಮ ಘೋಷಣಾ ಪತ್ರದಲ್ಲಿ ಸ್ಥಳೀಯ ಸಮಸ್ಯೆಗಳ ನಿವಾರಣೆ ಬಗ್ಗೆ ವಿಶೇಷ ಆದ್ಯತೆ ನೀಡಬೇಕು ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ತಿಳಿಸಿದರು.

ಬರುವ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಸಮಿತಿ ಹಮ್ಮಿಕೊಂಡ “ಸಮಿತಿಯ ನಡೆ ರಾಜಕೀಯ ಪಕ್ಷಗಳ ಕಡೆ” ಅಭಿಯಾನದಂತೆ ಆಮ್ ಆದ್ಮಿ ಪಕ್ಷದ ಕಛೇರಿಯಲ್ಲಿ ಕಲ್ಯಾಣ ಕರ್ನಾಟಕದ ರಚನಾತ್ಮಕ ಪ್ರಗತಿ ಮತ್ತು ಸಂವಿಧಾನದ 371ನೇಜೆ ಕಲಂ ತಿದ್ದುಪಡಿಯ ಪರಿಣಾಮಕಾರಿ ಅನುಷ್ಠಾನದ ಕುರಿತು ರಾಜಕೀಯ ಪಕ್ಷಗಳ ಪ್ರಣಾಳಿಕೆಯಲ್ಲಿ ಸೇರಿಸುವ ಬಗ್ಗೆ ಮಾತ್ನಾಡಿದ್ದರು.

Contact Your\'s Advertisement; 9902492681

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳಿಗೆ ತಮ್ಮ ತಮ್ಮ ಪಕ್ಷಗಳಿಗಿಂತ ಸ್ಥಳೀಯ, ಪ್ರದೇಶದ, ರಾಜ್ಯದ ಮತ್ತು ರಾಷ್ಟ್ರದ ಅಭಿವೃದ್ಧಿ ಮುಖ್ಯವಾಗಿರುವದರಿಂದ,ಅಭಿವೃದ್ಧಿಯ ಮಾನದಂಡವೆ ರಾಜಕೀಯ ಪಕ್ಷಗಳ ಅಸ್ತಿತ್ವ ಉಳಿಸಸುತ್ತದೆ, ಇದನ್ನು ಗಂಭೀರವಾಗಿ ಪರಿಗಣಿಸಿ ಪ್ರಸ್ತುತ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಕಲ್ಯಾಣ ಕರ್ನಾಟಕದ ಮತ್ತು ತಮ್ಮ ತಮ್ಮ ಮತ ಕ್ಷೇತ್ರದ ರಚನಾತ್ಮಕ ಪ್ರಗತಿಯ ವಿಷಯಗಳು ಘೋಷಣಾ ಪತ್ರದಲ್ಲಿ ಸೇರಿಸಿ ಮತಯಾಚಿಸ ಬೇಕು ಎಂದರು.

ಸಮಿತಿ ಸಲ್ಲಿಸಿದ 31ಅಂಶಗಳ ಪ್ರಸ್ತಾವನೆಗೆ ತಮ್ಮ ಪಕ್ಷ ಗಂಭೀರವಾಗಿ ಪರಿಗಣಿಸಿ ಘೋಷಣಾ ಪತ್ರದಲ್ಲಿ ಸೇರಿಸುವದಾಗಿ ಆಮ್ ಆದ್ಮಿ ಪಕ್ಷದ ಮುಖಂಡರಾದ ಸಜ್ಜಾದ ಅಲಿ ಇನಾಮದಾರ ಮತ್ತು ಸಿದ್ದು ಪಾಟೀಲ,ಶಿವರಾಜ ಪಾಟೀಲ,ಸಂಧ್ಯಾರಾಜ,ಗುಲಾಮ ರಸೋಲ ರವರು ಸಕಾರಾತ್ಮಕವಾಗಿ ಸ್ಪಂದಿಸಿ ಮಾತನ್ನಾಡಿದರು.

ಈ ಸಂದರ್ಭದಲ್ಲಿ ಸಮಿತಿಯ ಮುಖಂಡರಾದ ಮನೀಷ ಜಾಜು, ಲಿಂಗರಾಜ ಸಿರಗಾಪೂರ, ಅಬ್ದುಲ ರಹೀಮ, ಸಾಬಿರಲಿ  ಸ್ಥಳೀಯ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಈ ಅಭಿಯಾನದಲ್ಲಿ ಸಮಿತಿಯ ಪ್ರಮುಖರಾದ ಶಾಂತಪ್ಪ ಕಾರಭಾಸಗಿ,ಸಲೋಮನ್ ದಿವಾಕರ್,ರಾಜು ಜೈನ್,ಅನೀಲ ಕುಲಕರ್ಣಿ, ಮಲ್ಲಿನಾಥ ಸಂಗಶೆಟ್ಟಿ,ಬಾಬುರಾವ ಗಂವಾರ್,ಶಿವಕುಮಾರ, ರುದ್ರಗೌಡ ಬೀರಾದರ, ನಾಗೇಂದ್ರ, ದಿನೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here