ಸುರಪುರ: ನಗರದ ವಿವಿಧೆಡೆಗಳಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಮೂಲಕ ವಿಜೃಂಭಣೆಯ ರಮ್ಜಾನ್ ಹಬ್ಬ ಆಚರಿಸಿದರು.ನಗರದ ಝಂಡದಕೇರ ಬಳಿಯಲ್ಲಿನ ಈದ್ಗಾ ಮೈದಾನದಲ್ಲಿ ಶನಿವಾರ ಮುಂಜಾನೆ ಸಾವಿರಾರು ಸಂಖ್ಯೆಯ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಹಾಗೂ ಪರಸ್ಪರ ಶುಭಾಶಯ ವಿನಮಯಿಸಿಕೊಂಡು ಹಬ್ಬವನ್ನು ಆಚರಿಸಿದರು.
ಅದೇರೀತಿಯಾಗಿ ರಂಗಂಪೇಟೆಯ ಈದ್ಗಾ ಮೈದಾನದಲ್ಲಿಯೂ ಸಡಗರ ಸಂಭ್ರಮದ ರಮ್ಜಾನ್ ಆಚರಿಸಲಾಯಿತು.ಎಲ್ಲಾ ಮುಸ್ಲಿಂ ಬಾಂಧವರು ಹೊಸ ಬಟ್ಟೆಯನ್ನು ಧರಿಸಿ ದೊಡ್ಡ ಮಸೀದ್ ನಿಂದ ಕಲ್ಮಾ ಓದುತ್ತ ಹಸನಾಪುರ ಬಳಿಯ ಈದ್ಗಾ ಮೈದಾನಕ್ಕೆ ಆಗಮಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಹಬ್ಬ ಶುಭಾಷಯ ವಿನಿಮಯಿಸಿಕೊಂಡರು.
ರಮ್ಜಾನ್ ಹಬ್ಬದ ಅಂಗವಾಗಿ ಸುರಪುರ ಮತ್ತು ರಂಗಂಪೇಟೆಯ ವಿವಿಧ ಕಡೆಗಳಲ್ಲಿ ಪ್ಯಾರಾ ಮಿಲಿಟರಿ ಪಡೆ,ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿ ಶಾಂತಿ ಸುವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿತ್ತು.
ಸಾಮೂಹಿಕ ಪ್ರಾರ್ಥನೆಯಲ್ಲಿ ಪ್ರಮುಖರಾದ ಈದ್ಗಾ ಕಮಿಟಿ ಅಧ್ಯಕ್ಷ ಎ.ಆರ್ ಪಾಷಾ,ಸೈಯ್ಯದ್ ಅಹ್ಮದ್ ಪಾಶಾ ಖಾದ್ರಿ,ಹುಸೇನ್ ಗುತ್ತೇದಾರ,ಮಹ್ಮದ್ ಮೌಲಾ ಸೌದಾಗರ್,ಮಹ್ಮದ್ ಖಾಜಾ ಗುಡಗುಂಟಿ,ಖಾಜಾ ಖಲೀಲ ಅಹ್ಮದ್ ಅರಕೇರಿ,ಇಫ್ತಿಕಾರ್ ಒಂಟಿ,ಶೇಖ್ ಮಹಿಬೂಬ ಒಂಟಿ,ಅಬ್ದುಲ ಗಫೂರ ನಗನೂರಿ,ಹೈವiದ್ ಪಠಾಣ್,ಉಸ್ತಾದ್ ವಜಾಹತ್ ಹುಸೇನ್,ಮೊಹ್ಮದ್ ಹುಸೇನ್ ಅಡ್ವೋಕೆಟ್,ಅಬೀದ್ ಹುಸೇನ್ ಪಗಡಿ,ಮೆಹಬೂಬಸಾಬ್ ಜಮಾದಾರ್,ಕಲೀಮುದ್ದಿನ್ ಫರೀದಿ,ಗೌಸಮಿಯಾ ಜಮಾದಾರ್ ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು.