ಅಫಜಲಪೂರ; ಶ್ರೀ ಮಹಾಂತಜ್ಯೋತಿ ವಿದ್ಯಾಪೀಠದಅಡಿಯಲ್ಲಿ ನಡೆಯುತ್ತಿರುವ ಶ್ರೀ ಮಹಾಂತೇಶ್ವರ ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿಗಳು 2022-23 ನೇ ಸಾಲಿನಲ್ಲಿ ನಡೆದ ಪಿಯುಸಿ ದ್ವಿತೀಯ ವರ್ಷದ ವಾರ್ಷೀಕ ಪರೀಕ್ಷೆಯಲ್ಲಿಉತ್ತಮ ಸಾಧನೆ ಮಾಡಿದ್ದಾರೆ.
ಕಲಾ ವಿಭಾಗದಲ್ಲಿ ಕು.ಐಶ್ವರ್ಯ ಶಿವಯೋಗೆಪ್ಪಾ ಬಳಬಟ್ಟಿ ಶೇ.93.16, ಗೀತಾತಂದೆಚಂದ್ರಶೇಖರ ಪಾಣೇಗಾಂವ ಶೆ. 89.16, ಅಂಬಿಕಾ ತಂದೆ ವಿಕ್ರಮ ಕಾಳೆ ಶೇ.88.66, ವೈಷ್ಣವಿ ತಂದೆಗುರುಲಿಂಗಯ್ಯಾ ಶೇ.87.16 ಹಾಗೂ ಬಾಬು ತಂದೆ ಸಿದ್ದು ಕುಂಬಾರ ಶೇ.86.00 ರಷ್ಟು ಅಂಕಗಳನ್ನು ಪಡೆದಉನ್ನತ ಶ್ರೇಣಿಯಲ್ಲಿಉತ್ತೀರ್ಣರಾಗಿಕಾಲೇಜಿಗೆಕೀರ್ತಿತಂದಿದ್ದಾರೆ.
ಒಟ್ಟಾರೆ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಲ್ಲಿ 5 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 39 ವಿದ್ಯಾರ್ಥಿಗಳು ಪ್ರಥಮದರ್ಜೆಯಲ್ಲಿ, 20 ವಿದ್ಯಾರ್ಥಿಗಳು ದ್ವಿತೀಯದರ್ಜೆಯಲ್ಲಿ ಹಾಗೂ 16 ವಿದ್ಯಾರ್ಥಿಗಳು ತೃತೀಯದರ್ಜೆಯಲ್ಲಿಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಪೂಜ್ಯ ಶ್ರೀ ಷ.ಬ್ರ. ಸಿದ್ದರಾಮ ಶಿವಾಚಾರ್ಯರು ಹಾಗೂ ಸಂಸ್ಥೆಯ ಸಹ ಅಧ್ಯಕ್ಷರಾದ ಶ್ರೀ ಷ.ಬ್ರ. ವೀರಮಹಾಂತ ಶಿವಾಚಾರ್ಯರು ಶುಭ ಹಾರೈಸಿದ್ದಾರೆ.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾದ ಚನ್ನಬಸಯ್ಯಾ ಹಿರೇಮಠ, ಆಡಳಿತ ಮಂಡಳಿಯ ಸದಸ್ಯರು, ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಹಾಗೂ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.