ಸಂಪನ್ನಗೊಂಡ ಶ್ರಾವಣಿ ಯಜ್ಞೋಪವೀತ ಧಾರಣ ಕಾರ್ಯಕ್ರಮ

0
84

ಸುರಪುರ: ನಗರದ ಪ್ರಸನ್ನ ವೆಂಕಟೇಶ್ವರ ದೇವಸ್ಥಾನದಲ್ಲಿ ನೂಲಹುಣ್ಣಿಮೆ ಅಂಗವಾಗಿ ಶ್ರೀಯೋಗೀಶ್ವರ ಯಾಜ್ಞವಲ್ಕ್ಯ ಸಂಘದಿಂದ ಆಯೋಜಿಸಿದ್ದ ಶ್ರಾವಣಿ ಕಾಅರ್ಯಕ್ರಮದಲ್ಲಿ ಶುಕ್ಲಯಜುರ್ವೇದಿಯರು ಯಜ್ಞೋಪವೀತ ಧಾರಣ ಮಾಡಿಕೊಂಡರು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಭೀಮಸೇನಾಚಾರ್ಯ ಜೋಷಿ ಮಂಗಳೂರು ಮಾತನಾಡಿ,ಪ್ರಾಚೀನ ಕಾಲದ ಋಷಿ ಪರಂಪರೆಯಿಂದಲೂ ಪ್ರತಿವರ್ಷ ನೂಲಹುಣ್ಣಿಮೆಯಂದು ಎಲ್ಲ ದ್ವಿಜರು ನದಿ ತೀರಗಳಿಗೆ ಹೋಗಿ ಸಂಕಲ್ಪ ಸ್ನಾನ, ವೇದಗಳ ಅಧ್ಯಾಯನ,ಸಪ್ತ ಋಷಿಗಳ ಆವಾಹನ, ಹೋಮ,ಗಾಯತ್ರಿ ಜಪ,ಗೋಧೂಮಪಿಷ್ಠ ಪಂಚಗವ್ಯ ಸೇವನೆ, ಯಜ್ಞೋಪವೀತ ಧಾರಣೆಯನ್ನು ಪುರೋಹಿತರ ಸನ್ಮಾರ್ಗದಲ್ಲಿ ಮಾಡಿಕೊಂಡು ದೇಹಶುಧ್ಧಿ ಮಾಡಿಕೊಳ್ಳುವುದು ಮಹಾಭಾರತ, ರಾಮಾಯಣ ಕಾಲದಿಂದಲೂ ಈ ಪಧ್ಧತಿ ಬೆಳೆದು ಬಂದಿದೆ.ಇತ್ತೀಚಿನ ದಿನಗಳಲ್ಲಿ ದೈನಂದಿನ ಚಟುವಟಿಕೆಯಲ್ಲಿ ಜನ ಸಂಸಾರ,ಆಚಾರ ವಿಚಾರ,ನಿಯಮ ನಿತ್ಯಗಳಿಗೆ ಒತ್ತು ಕೊಟ್ಟು ಸಂಧ್ಯಾವಂದನೆ,ಜಪ ಮುಂತಾದ ಕಾರ್ಯಗಳನ್ನು ಮಾಡಿಜೀವನವನ್ನು ಸುಗಮವಾಗಿ ನಡೆಸಲು ಭಗವಂತ ಪ್ರೇರಣೆ ನೀಡುತ್ತಾನೆ ಎಂದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ರಾಘವೇಂದ್ರಾಚಾರ್ ಹಳ್ಳದ,ಕೃಷ್ಣಾಚಾರ ದೇವರು,ದತ್ತುರಾವ್ ತೆಗ್ಗಳ್ಳಿ,ತಿರುಮಲರಾವ್ ಅರಳಹಳ್ಳಿ,ಲಕ್ಷ್ಮೀಕಾಂತರಾವ್ ಅಮ್ಮಾಪುರ,ಮಲ್ಲಾರಾವ್ ಪಟವಾರಿ,ಚಂದ್ರಕಾಂತ ನಾಡಗೌಡ,ರಾಘವೇಂದ್ರ ಗೆದ್ದಲಮರಿ,ಶ್ರೀನಿವಾಸ ದೇವಡಿ,ಪ್ರವೀಣ ಲಾಯದುಣಸಿ,ರಾಘವೇಂದ್ರ ನಾಗರಾಳ,ಮುಖೇಶ ರಾಯನಪಾಳ್ಯ, ಪ್ರಹ್ಲಾದ ದಿಕ್ಷೀತ,ಗಿರೀಶ ಮುನಳ್ಳಿ,ಗುಂಡುರಾವ್ ಅರಳಹಳ್ಳಿ,ಶ್ರೀನಿವಾಸ ದೇವರು, ಭಾಸ್ಕರ್, ವಿನಯ, ವಿಜಯ, ಅನಂತ, ರಮೇಶ,ರಾಮಕೃಷ್ಣ,ಗುರುರಾಜ ಅಗ್ನಿಹೋತ್ರಿ,ರಮೇಶ ಗೆದ್ದಲಮರಿ,ಕೃಷ್ಣಾ ಜೋಷಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here