ಸುರಪುರ: ಮೇ 10 ರಂದು ನಡೆಯುವ ವಿಧಾನಸಭೆ ಚುನಾವಣೆ ದಿನ ಚುನಾವಣೆ ಕರ್ತವ್ಯಕ್ಕೆ ಆಗಮಿಸುವ ಭೂತ್ ಮಟ್ಟದ ಅಧಿಕಾರಿಗಳಿಗೆ ಅಡುಗೆ ಮಾಡಲು ಕಾಂಟಿಜೆನ್ಸ್ ಹಣವನ್ನು ನೀಡಬೇಕೆಂದು ಆಗ್ರಹಿಸಿ ತಹಸೀಲ್ದಾರಗೆ ಮನವಿ ಸಲ್ಲಿಸಲಾಗಿದೆ.
ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಅನೇಕ ಮುಖಂಡರು ಮನವಿಯನ್ನು ಸಲ್ಲಿಸಿ,ಚುನಾವಣೆ ದಿನ ಮತ್ತು ಅದರ ಹಿಂದಿನ ದಿನ ಎರಡು ದಿನಗಳ ಕಾಲ ಅಡುಗೆ ಮಾಡಲು ಕಾಂಟಿಜೆನ್ಸ್ ಭತ್ಯೆ ನೀಡಬೇಕು,ಇಲ್ಲವಾದಲ್ಲಿ ನಾವು ಅಡುಗೆ ಕೆಲಸಕ್ಕೆ ಹೋಗುವುದಿಲ್ಲ,ನಮ್ಮ ಹೆಸರಲ್ಲಿ ಖರ್ಚು ಹಾಕಲಾಗಿರುತ್ತದೆ ಆದರೆ ನಮಗೆ ಆ ಹಣ ನೀಡಿರುವುದಿಲ್ಲ.ಆ
ದ್ದರಿಂದ ಈಬಾರಿಯ ಚುನಾವಣೆ ಸಮಯದಲ್ಲಿ ಅಡುಗೆ ಕೆಲಸಕ್ಕೆ ಬರುವ ಎಲ್ಲ ಅಕ್ಷರ ದಾಸೋಹ ನೌಕರರಿಗೆ ಭತ್ಯೆ ನೀಡುವಂತೆ ಆಗ್ರಹಿಸಿ ಗ್ರೇಡ-2 ತಹಸೀಲ್ದಾರರಿಗೆ ಮತ್ತು ಅಕ್ಷರದಾಸೋಹದ ಸಹಾಯಕ ನಿರ್ದೇಶಕ ಮೌನೇಶ ಕಂಬಾರವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಮುಖಂಡರಾದ ಸೌಭಾಗ್ಯ ಮಾಲಗತ್ತಿ, ಶಹಾಜೀದಿ ಬೇಗಂ,ಪ್ರಕಾಶ ಆಲ್ಹಾಳ ಇದ್ದರು.