ಕಲಬುರಗಿ: ಕಬ್ಬಲಿಗ ಕೋಲಿ ಸಮಾಜಕ್ಕೆ ದಿವಂಗತ ವಿಠ್ಠಲ್ ಹೇರೂರು ಅವರ ಕೊಡುಗೆ ಅಪಾರವಾದುದು. 12 ನೇ ಶತಮಾನದಲ್ಲಿ ಅಂಬಿಗರ ಚೌಡಯ್ಯನವರು ಕಬ್ಬಲಿಗ ಕೋಲಿ ಸಮಾಜವನ್ನು ಗುರುತಿಸಿದರೆ, 21 ನೇ ಶತಮಾನದಲ್ಲಿ ಹೇರೂರು ಅವರು ಸಮಾಜಕ್ಕಾಗಿ ಹೋರಾಟ ಮಾಡಿದರು ಎಂದು ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು ಅಭಿಪ್ರಾಯಪಟ್ಟರು.
ಚಿತ್ತಾಪುರ ಮತಕ್ಷೇತ್ರದ ಹೊನಗುಂಟಿ ಗ್ರಾಮದಲ್ಲಿ ನಿರ್ಮಿಸಲಾಗಿದ್ದ ವಿಠ್ಠಲ್ ಹೇರೂರ್ ಅವರ ಪತ್ರಿಮೆ ಅನಾವರಣಗೊಳಿಸಿ ಅವರು ಮಾತನಾಡುತ್ತಿದ್ದರು.
ಕೋಲಿ ಸಮಾಜ ಒಗ್ಗಟ್ಟಾಗುವುದರ ಜೊತೆಗೆ ಇತರೆ ಸಮುದಾಯದವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸೌಹಾರ್ದಯುತ ಜೀವನ ನಡೆಸಿಕೊಂಡು ಹೋಗಬೇಕು ಎಂದ ಕಮಕನೂರು, ಸಮಾಜದ ಅಭ್ಯುದಯಕ್ಕೆ ಹಿರಿಯ ನಾಯಕರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಹಾಗೂ ಶಾಸಕರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರು ಶ್ರಮಿಸಿದ್ದಾರೆ ಎಂದರು.
ವೇದಿಕೆಯ ಮೇಲೆ ಶಾಸಕರಾದ ಮಾನ್ಯ ಶ್ರೀ ಪ್ರಿಯಾಂಕ್ ಖರ್ಗೆ, ಅಲ್ಲಮಪ್ರಭು ಪೀಠದ ಮಲ್ಲಣ್ಣಪ್ಪ ಮುತ್ಯಾ ತೊಣಸನಹಳ್ಳಿ, ಜಿಪಂ ವಿರೋಧ ಪಕ್ಷದ ನಾಯಕರಾದ ಶಿವಾನಂದ್ ಪಾಟೀಲ್, ಭೀಮಣ್ಣ ಸಾಲಿ ಸೇರಿದಂತೆ ಮತ್ತಿತರಿದ್ದರು.