ವಚನೋತ್ಸವ ಪ್ರತಿಷ್ಠಾನದ ವತಿಯಿಂದ ‘ವಚನಗಳಲ್ಲಿ ಜೀವನ ಮೌಲ್ಯಗಳು’ ಕುರಿತ ಕಾರ್ಯಕ್ರಮ

0
80

ಕಲಬುರಗಿ: ವಚನೋತ್ಸವ ಪ್ರತಿಷ್ಠಾನವು ಮತ್ತು ವಚನೋತ್ಸವ ಸಮಿತಿಗಳ ಒಕ್ಕೂಟವು ಶ್ರಾವಣ ಮಾಸದಂಗವಾಗಿ ‘ವಚನಗಳಲ್ಲಿ ಜೀವನ ಮೌಲ್ಯಗಳು’ ಕುರಿತ ಕಾರ್ಯಕ್ರಮವನ್ನು ಪರೋಪಕಾರಿ-ಸರಳ ಶರಣ ಹೃದಯವಂತ ಪ್ರಭುದೇವ ಯಳವಂತಗಿ ಅವರ ಮಹಾಮನೆಯಲ್ಲಿ ಗುರುವಾರ ಏರ್ಪಡಿಸಲಾಗಿತ್ತು.

ಅನುಭಾವ ನೀಡಿದ ಶರಣ ಲೇಖಕ ವಿಶ್ವನಾಥ ಡೋಣೂರ, ಶರಣರು ಮೌಲ್ಯಗಳ ಕುರಿತು ಬರೀ ಮಾತನಾಡಲಿಲ್ಲ, ಬದಲಾಗಿ ಮೌಲ್ಯಗಳೇ ಬದುಕಾಗಿಸಿಕೊಂಡಿದ್ದರು. ಸತ್ಯ ಮತ್ತು ಪ್ರಾಮಾಣಿಕತೆಯಿಂದ ಕೂಡಿದ ಬದುಕು ವಚನಕಾರದ್ದಾಗಿತ್ತು. ಅಂಥ ಶ್ರೇಷ್ಠ ಶರಣರ ವಿಚಾರಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದರು.

Contact Your\'s Advertisement; 9902492681

ಪ್ರಾಸ್ತಾವಿಕ ನುಡಿಗಳನ್ನಾಡಿದ ವೈಚಾರಿಕ ಚಿಂತಕ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಇವನಾರವ, ಇವನೆನ್ನದೇನಾರವ, ಇವನಾರವನೆನ್ನದೇ, ಇವ ನಮ್ಮವ, ಇವ ನಮ್ಮವ, ಇವ ನಮ್ಮಮನೆಯ ಮಗನಯ್ಯ ಎಂದು ಎಲ್ಲ ವರ್ಗದ ಜನರನ್ನು ಆತ್ಮೀಯತೆಯಿಂದ ಕಂಡ ಶರಣರು ವಿಶ್ವಮಾನವರೆನಿಸಿಕೊಂಡರು ಎಂದು ಮಾರ್ಮಿಕವಾಗಿ ಹೇಳಿದರು. ಎಂ.ಆರ್.ಎಂ ಸಿ.ಯ ಪ್ರಾಧ್ಯಾಪಕ ಡಾ.ಶ್ರೀಶೈಲ ಘೂಳಿ ಅಧ್ಯಕ್ಷತೆ ವಹಿಸಿದ್ದರು.

ಶರಣ ಚಿಂತಕರಾದ ದೇವೇಗೌಡ ತೆಲ್ಲೂರ, ಪ್ರಕಾಶ ಪಾಟೀಲ ಹೀರಾಪುರ, ರವೀಂದ್ರಕುಮಾರ ಭಂಟನಳ್ಳಿ, ನಾಗೇಂದ್ರಪ್ಪ ಮಾಡ್ಯಾಳೆ, ಮಹಾಮನೆಯ ಮಾಲೀಕ ಪ್ರಭುದೇವ ಯಳವಂತಗಿ, ಪ್ರಮುಖರಾದ ಬಿ.ಎಂ.ಪಾಟೀಲ ಕಲ್ಲೂರ, ಸೋಮಶೇಖರ ಮಾಲಿಪಾಟೀಲ ತೇಗಲತಿಪ್ಪಿ, ಶಿವರಾಜ ಮಾಲಿಪಾಟೀಲ ತೇಗಲತಿಪ್ಪಿ, ಮಹೇಶ ಪಾಟೀಲ ಹಾವನೂರ, ಪರಮೇಶ್ವರ ಶಟಕಾರ, ವಚನೋತ್ಸವ ಸಮಿತಿಯ ಡಾ ಬಸವರಾಜ ಮೋದಿ, ಬಸವರಾಜ ಧೂಳಾಗುಂಡಿ, ಕಲ್ಯಾಣಪ್ಪ ಬಿರಾದಾರ, ಎಂ.ಬಿ.ಸಿಪಾಯಿ, ಮಲ್ಲಣ್ಣ ನಾಗರಾಳ ಸೇರಿದಂತೆ ಬಡಾವಣೆಯ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here