ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಮತದಾನ ಅವಶ್ಯಕ: ಲಕ್ಷ್ಮಣ ದಸ್ತಿ

0
91

ಕಲಬುರಗಿ: ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಲು ಪ್ರತಿಯೊಬ್ಬರೂ ಕಡ್ಡಾಯವಾಗಿ ತಮ್ಮ ಮತ ಹಕ್ಕು ಚಲಾಯಿಸಬೇಕು ಎಂದು ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ ಅವರು ಹೇಳಿದರು.

ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಜಯನಗರ ಶಿವಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ “ಮತದಾನ ಜಾಗೃತಿ ಅಭಿಯಾನ”ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಮತದಾರರು ತಮಗೆ ನೀಡಿದ ಹಕ್ಕಿನ ಬಗ್ಗೆ ಅರಿತುಕೊಳ್ಳಬೇಕು.ನಿರ್ಲಕ್ಷ ಮಾಡದೆ ಮತದಾನದಿನದಂದು ಮತಗಟ್ಟೆಗೆ ತೆರಳಿ ಮತ ನೀಡುವಂತೆ ಮನವಿ ಮಾಡಿದ ಅವರು ಒಂದೊಂದು ಮತದ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು.ಮತದಾನಕ್ಕೆ ಅರ್ಹತೆ ಪಡೆದವರು ಕಡ್ಡಾಯವಾಗಿ ತಮ್ಮ ಹಕ್ಕನ್ನು ಚಲಾಯಿಸಲು ಕಾನೂನು ರೂಪಿಸಬೇಕು.ಚುನಾವಣೆ ಪ್ರಜಾತಂತ್ರದ ಉತ್ಸವವಾಗಿ ಪರಿವರ್ತಿಸಬೇಕು.ಮತದಾನ ಎನ್ನುವುದಕ್ಕಿಂತ ನಮ್ಮ ಮತ ನಮ್ಮ ಹಕ್ಕು ಎನ್ನುವುದು ಸೂಕ್ತ ಎಂದು ಅವರು ತಿಳಿಸಿದರು.

Contact Your\'s Advertisement; 9902492681

ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಚಿಂತಕ, ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಎಸ್.ಗುಳಶೆಟ್ಟಿ ಮಾತನಾಡಿಮತದಾನ ದೇಶದ ಭದ್ರ ಬುನಾದಿಯಾಗಿದೆ.ಅದು ನಮ್ಮ ಹಕ್ಕು.ಸಂವಿಧಾನಿಕ ಕರ್ತವ್ಯವು ಕೂಡ ಆಗಿದೆ.ಅರ್ಹ ಜನಪರ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಸೂಕ್ತ ವೇದಿಕೆಯಾಗಿದೆ.ಯಾವುದೆ ಆಮಿಷಗಳಿಗೆ ಒಳಗಾಗದೆ ಮತ ಚಲಾಯಿಸಬೇಕು ಎಂದು ಕರೆ ನೀಡಿದರು.ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಕೆ.ಬಿ ನಿರೂಪಿಸಿದರು.

ಟ್ರಸ್ಟ್ ಕೋಶಾಧ್ಯಕ್ಷ ಬಸವರಾಜ ಮಾಗಿ, ಕಾರ್ಯದರ್ಶಿ ಶಿವಪುತ್ರಪ್ಪ ಮರಡಿ, ಹಿರಿಯ ಸದಸ್ಯರಾದ ಬಸವರಾಜ ಅನ್ವರಕರ, ಭೀಮಾಶಂಕರ ಶೆಟ್ಟಿ, ಬಸವರಾಜ ಪುರ್ಮಾ, ವಾಸುದೇವ ಮಾಲಿ ಬಿರಾದಾರ, ನಾಗರಾಜ ಖೂಬಾ,ಎಸ್.ಡಿ.ಸೇಡಂಕರ, ಮಲ್ಲಯ್ಯ ಸ್ವಾಮಿ ಬಿದಿಮನಿ, ವಿಶಾಲ ತಿವಾರಿ,ಗುರು ಮುಕ್ರಂಬಿ, ಪ್ರಶಾಂತ ತಂಬೂರಿ ಸೇರಿದಂತೆ ಹಲವು ಮಹಿಳೆಯರು, ಹಿರಿಯರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here