ಶಹಾಬಾದ:ಚಿತ್ತಾಪೂರ ಮತಕ್ಷೇತ್ರದ ಶಂಕರವಾಡಿ ಗ್ರಾಮದ ಮಡಿವಾಳ ಸಮಾಜದ ಬಂಧುಗಳು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಅವರಿಗೆ ಬೆಂಬಲಿಸಲು ಮುಂದಾಗಿದ್ದಾರೆ.
ಮಡಿವಾಳ ಸಮಾಜದ ತಾಲೂಕಾಧ್ಯಕ್ಷ ಚಂದ್ರಕಾಂತ ಮಡಿವಾಳ ಹಾಗೂ ಬಸವರಾಜ ಪರೀಟ್ ನೇತೃತ್ವದಲ್ಲಿ ಗ್ರಾಮದಲ್ಲಿ ಸಭೆ ನಡೆಸಲಾಯಿತು. ಗ್ರಾಮದಲ್ಲಿ ಸುಮಾರು 150 ಮಡಿವಾಳ ಸಮಾಜದ ಮತಗಳಿದ್ದು, ಅವರೆಲ್ಲರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಪ್ರಿಯಾಂಕ್ ಖರ್ಗೆ ಅವರಿಗೆ ಬೆಂಬಲ ನೀಡುವುದಾಗಿ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಶರಣಗೌಡ ದಳಪತಿ ಭಂಕೂರ, ಭೀಮರಾಯ ಹೊಸಮನಿ ಶಂಕರ ವಾಡಿ, ಗ್ರಾಮ ಪಂಚಾಯತ್ ಸದಸ್ಯರಾದ ರಾಜು ಸಾಗರ್, ವಿವೇಕಾನಂದ ಪೂಜಾರಿ, ಪವನ್ ಬಿರಾದರ್, ಸೇರಿದಂತೆ ಅನೇಕರು ಇದ್ದರು.
ಎಸ್‍ಯುಸಿಐ:ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಎಸ್.ಯು.ಸಿ.ಐ(ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಕಾಮ್ರೇಡ್ ಗಣಪತರಾವ.ಕೆ.ಮಾನೆ ತೆಗನೂರ ಗ್ರಾಮದಲ್ಲಿ ಪ್ರಚಾರ ನಡೆಸಿದರು. ಸಮಿತಿಯ ಸದಸ್ಯರಾದ ರಾಘವೇಂದ್ರ ಎಮ್.ಜಿ. ಜಗನ್ನಾಥ್ ಎಸ್. ಎಚ್., ರಾಜೇಂದ್ರ ಆತ್ನೂರ್. ಗುಂಡಮ್ಮ ಮಡಿವಾಳ, ಸಿದ್ದು ಚೌಧರಿ, ತುಳಜರಾಮ, ಸದಸ್ಯರಾದ ಮಹಾದೇವಿ ಮಾನೆ, ರಘು ಪವಾರ, ಕಿರಣ ಮಾನೆ, ರಮೇಶ ದೇವಕರ್, ಅಜಯ ಗುರಜಾಲಕರ್, ಆನಂದ, ಸಾಕ್ಷಿ ಮಾನೆ, ರಾಧಿಕ ಚೌಧರಿ, ಮಹಾದೇವಿ ಅತನೂರ್ ಮುಂತಾದವರು ಉಪಸ್ಥಿತರಿದ್ದರು.
ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರೇವುನಾಯಕ ಬೆಳಮಗಿ ಅವರ ಪರವಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ನಗರದ ವಿವಿಧ ಬಡಾವಣೆಗಳಿಗೆ ತೆರಳಿ ಬಿರುಸಿನ ಪ್ರಚಾರ ಕೈಗೊಂಡರು. ಶರಣಗೌಡ ಪೋ.ಪಾಟೀಲ ಗೋಳಾ[ಕೆ], ಮೃತ್ಯುಂಜಯ್ ಹಿರೇಮಠ, ಸಾಹೇಬಗೌಡ ಬೋಗುಂಡಿ, ಶಂಕರ ಕೋಟನೂರ್,ನಿಂಗಣ್ಣ ಪೂಜಾರಿ, ಡಾ.ಅಹ್ಮದ್ ಪಟೇಲ್, ಕಿರಣ ಚವ್ಹಾಣ, ಸೂರ್ಯಕಾಂತ ಕೋಬಾಳ, ಸೈಯದ ಜಹೀರ, ರಾಜೇಶ ಯನಗುಂಟಿಕರ, ಮೃತ್ಯುಂಜಯ ಸ್ವಾಮಿ ಹಿರೇಮಠ,ಯಾಕೂಬ ಮರ್ಚಂಟ, ಹಾಶಮ ಖಾನ್, ಅನ್ವರ ಪಾಶಾ ನಸೀರುದ್ದಿನ್, ನಾಗೇಂದ್ರ ನಾಟೀಕಾರ, ನಿಂಗಣ್ಣ ದೇವಕರ್, ರಾಜು ಮೇಸ್ತ್ರಿ, ಸುರೇಶ ನಾಯಕ, ನಿಂಗಣ್ಣ ಸಂಗಾವಿಕರ್,ಜಾವೀದ್ ಸೇರಿದಂತೆ ಅನೇಕ ಜನರು ಹಾಜರಿದ್ದರು.