ಕ್ರೀಡೆಗಳು ದೈಹಿಕ ಬಲವರ್ದನೆಗೆ ಸಹಕಾರಿಯಾಗುತ್ತವೆ: ಅಂಗಡಿ

0
48

ಸುರಪುರ: ವಿದ್ಯಾರ್ಥಿಗಳಿಗೆ ಮತ್ತು ಯುವಜನರಿಗೆ ಕ್ರೀಡೆಗಳು ದೈಹಿಕ ಬಲವರ್ಧನೆಯ ಜೊತೆಗೆ ಆರೋಗ್ಯ ಬೆಳವಣಿಗೆಗೆ ಸಹಕಾರ ನಿಡುತ್ತವೆ ಎಂದು ಸಗರನಾಡು ಯುವಕ ಸಂಘದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನಳ್ಳಿ ಹೆಳಿದರು.

ರಂಗಂಪೇಟೆಯ ಖಾಧಿ ಕೇಂದ್ರದ ಆವರಣದಲ್ಲಿ ಸ್ವಾತಂತ್ರೋತ್ಸವದ ಅಂಗವಾಗಿ ಸಗರನಾಡು ಯುವಕ ಸಂಘ ಕನ್ನೆಳ್ಳಿ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಯಾದಗಿರಿ ಸಹಯೋಗದೊಂದಿಗೆ ಆಯೋಜಿಸಿದ್ದ ಗ್ರಾಮಿಣ ಕ್ರೀಡೊತ್ಸವ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಇಂದಿನ ಒತ್ತಡದ ಬದುಕಿನಲ್ಲಿ ನಮ್ಮ ಯುವ ಜನಾಂಗ ಗ್ರಾಮೀಣ ಕ್ರೀಡೆಗಳನ್ನು ಹಾಗೂ ದೇಸಿ ಕ್ರೀಡೆಗಳನ್ನು ಮರೆಯುತ್ತಿದ್ದು, ಅವುಗಳ ಪುನರುತ್ತಾನಕ್ಕಾಗಿ ಗ್ರಾಮಿಣ ಕ್ರೀಡೊತ್ಸವದ ಮೂಲಕ ಯುವಜನರಿಗಾಗಿ ಕಬ್ಬಡ್ಡಿ ಪಂದ್ಯಾವಳಿ, ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ ಈ ಕ್ರೀಡೆಗಳು ವಿದ್ಯಾರ್ಥಿಗಳಿಗೆ ತುಂಬಾ ಸಹಕಾರಿಯಾಗಿದ್ದು ಆರೋಗ್ಯ ರಕ್ಷಣೆಯಲ್ಲಿ ದೈಹಿಕ ಬಲವರ್ಧನೆಯಲ್ಲಿ ಸಹಕಾರಿಯಾಗಲಿವೆ ಎಂದು ಹೇಳಿದರು.

Contact Your\'s Advertisement; 9902492681

ಕರ್ನಾಟಕ ನವನಿರ್ಮಾಣ ವೇದಿಕೆ ವಿಭಾಗಿಯ ಅಧ್ಯಕ್ಷ ಶಿವರಾಜ ಕಲಿಕೇರಿ ಕ್ರೀಡೊತ್ಸವ ಕಾರ್ಯಕ್ರಮಕ್ಕೆ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದರು. ಪ್ರಮುಖರಾದ ಶಾಂತು ನಾಯಕ , ವಿರೇಶ ಹಳಿಮನಿ, ಬಲಭೀಮ ಪಾಟೀಲ್, ಬಿರೇಶ ಕುಮಾರ ದೇವತ್ಕಲ್, ವಿರೇಶ ಕುಂಬಾರ, ಶ್ರೀಕಾಂತ ರತ್ತಾಳ ಸೇರಿದಂತೆ ಇತರರು ಇದ್ದರು, ಶ್ರೀಮತಿ ಭಾರತಿ ಪೂಜಾರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here