ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ತೇಲ್ಕೂರ ರಾಜೀನಾಮೆ

0
38

ಕಲಬುರಗಿ: ಇಲ್ಲಿನ ಕಲಬುರಗಿ- ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ ( ಡಿಸಿಸಿ) ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜಕುಮಾರ ಪಾಟೀಲ್ ತೇಲ್ಕೂರ ರಾಜೀನಾಮೆ ನೀಡಿದ್ದಾರೆ.

ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ರಾಜೀನಾಮೆ ಸಲ್ಲಿಸಿದ್ದು, ತಕ್ಷಣ ಜಾರಿಗೆ ಬರುವಂತೆ ರಾಜೀನಾಮೆ ಅಂಗೀಕರಿಸುವಂತೆ ಕೋರಿದ್ದಾರೆ. ಎರಡುವರೆ ವರ್ಷಗಳಿಂದ ಸ್ಥಗಿತ ವಾಗಿದ್ದ ಬಡ್ಡಿ ರಹಿತ ಸಾಲ ಪ್ರಾರಂಭಿಸಲಾಗಿತ್ತು. ಬ್ಯಾಂಕ್ ಲಾಭದತ್ತ ಹೆಜ್ಜೆ ಹಾಕಿತು. ಇನ್ನಷ್ಟು ಬ್ಯಾಂಕ್ ಅಭಿವೃದ್ಧಿ ಹೊಂದಿ ಕಲಬುರಗಿ- ಯಾದಗಿರಿ ಜಿಲ್ಲೆಯ ಎಲ್ಲ ಪ್ರತಿಯೊಬ್ಬ ರೈತರಿಗೆ ಸಾಲ ಕೊಡಿಸಲು ಉದ್ದೇಶಿಸಲಾಗಿತ್ತು. ಆದರೆ ಅದು ಕೈಗೂಡಲಿಲ್ಲ. ಮುಂದೆ ಅಧ್ಯಕ್ಷರಾದವರು ಅದನ್ನು ಸಾಕಾರಗೊಳೊಸಲಿ‌. ಸೇಡಂ ತಾಲೂಕಿಗೆ 120 ಕೋ.ರೂಬಡ್ಡಿ ರಹಿತ ಸಾಲ ವಿತರಿಸಲಾಗಿದೆ. ಈ ಮುಂಚೆ ಸೇಡಂ ತಾಲೂಕಿಗೆ ಕೇವಲ ಎಂಟು ಕೋ.ರೂ ಸಾಲ ಬೆಳೆಸಾಲ ವಿತರಿಸಲಾಗಿತ್ತು ಎಂದು ಪತ್ರಿಕಾ ಪ್ರಕಟಣೆಯಲ್ಲ ತಿಳಿಸಿದ್ದಾರೆ.

Contact Your\'s Advertisement; 9902492681

ಸೇಡಂ ತಾಲೂಕಿನಲ್ಲಿ ಮಹಿಳಾ ಸ್ವಸಹಾಯ ಸಂಘಗಳನ್ನು ರಚಿಸಿ  15 ಸಾವಿರಕ್ಕೂ ಅಧಿಕ ಹೆಚ್ಚು ಮಹಿಳೆಯರಿಗೆ ಆರ್ಥಿಕ  ಸ್ವಾವಲಂಬನೆ ಕಲ್ಪಿಸಲು ಸಾಲ ನೀಡಲಾಗಿದೆ. ನೂರಾರು ಕೋಟಿ ರೂ ಠೇವಣಿ ತಂದಿರುವುದು,  ಕಲಬುರಗಿಯಲ್ಲಿ ಬ್ಯಾಂಕ್ ಗೆ ನಿವೇಶನ ಖರೀದಿಸುವುದರ ಜತೆಗೇ ಹತ್ತಾರು ನಿಟ್ಟಿನ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.

ಹೈನೋದ್ಯಮ ಹೆಚ್ಚಳಕ್ಕೆ ಯೋಜನೆ ರೂಪಿಸಿ ಚಾಲನೆ ನೀಡಲಾಗಿರುವುದನ್ನು ಹಾಗೂ ಎಲ್ಲರಿಗೂ ಸಾಲ ದೊರಕಿಸಲು ಹೊಸ ಅಧ್ಯಕ್ಷರು ಮುಂದಾಗಬೇಕು ಎಂದು ತೇಲ್ಕೂರ ರೈತರ ಪರವಾಗಿ ಸಲಹೆ ನೀಡಿದ್ದಾರೆ.‌

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here