ಕಲಬರುಗಿ: ಶಹಾಪುರ ಕ್ಷೇತ್ರದಿಂದ 5ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಮಾಜಿ ಸಚಿವರು, ಹಿರಿಯ ಅನುಭವಿ ರಾಜಕಾರಣಿಯಾದ ಎಲ್ಲಾ ವರ್ಗದ ಹಿತ ಕಾಪಾಡುವ ಶರಣಬಸಪ್ಪಗೌಡ ದರ್ಶನಾಪುರವರನ್ನು ಸಂಪುಟ ದರ್ಜೆ ಸಚಿವರಾಗಿ ನೇಮಕ ಮಾಡಬೇಕೆಂದು ಯುವ ರೆಡ್ಡಿ ಸಮಾಜದ ಅಧ್ಯಕ್ಷ ವಿಜಯ ರೆಡ್ಡಿ ಪಾಟೀಲ ಒತ್ತಾಯಿಸಿದ್ದಾರೆ.
ಕಳೆದ ಕೇಲವು ವರ್ಷಗಳಿಂದ ಸಮಾಜಕ್ಕೆ ಆದ್ಯತೆ ನೀಡುತ್ತಿಲ್ಲ. ಹೀಗಾಗಿ ಈ ಸಲ ರೆಡ್ಡಿ ಸಮಾಜದ ಏಳಿಗೆಗಾಗಿ ಹಾಗೂ ಸಮಾಜದಲ್ಲಿ ಪ್ರಾಮುಖ್ಯತೆ ನೀಡಬೇಕೆಂದು ಎಐಸಿಸಿ ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಮತ್ತು ಪಕ್ಷದ ಹೈಕಮಾಂಡಗೆ ಮನವಿ ಮಾಡಿದ್ದಾರೆ.