ಶ್ರೀಸಿಮೆಂಟ್ ಕಂಪೆನಿ ಎದುರು ಮೃತ ರೈತನ ಶವವಿಟ್ಟು ಅಹೋರಾತ್ರಿ ಧರಣಿ

0
52

ಕಲಬುರಗಿ: ಸೇಡಂ ತಾಲೂಕಿನ ಕೋಡ್ಲಾ ಶ್ರೀ ಸಿಮೆಂಟ್ ಕಂಪೆನಿ ಎದುರು 183ನೇ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹದಲ್ಲಿ ರೈತ ಮೃತಪಟ್ಟಿದ್ದು, ಕಂಪನಿಯ ಮುಂದೆ ಶವ ಇಟ್ಟು ಆಹೋರಾತ್ರಿ ಧರಣಿ ಮುಂದುವರೆದಿದೆ.

ಮೃತಪಟ್ಟ ದೇವಿಂದ್ರಪ್ಪ ಕುಟುಂಬಕ್ಕೆ ಪರಿಹಾರ ಘೋಷಿಸಬೇಕು. ಭೂಮಿ ಕಳೆದುಕೊಂಡ ರೈತ ಕುಟುಂಬಸ್ಥರಿಗೆ ಖಾಯಂ ಉದ್ಯೋಗ, ಭೂ ಸ್ವಾಧೀನ ಕಾಯ್ದೆ ಪ್ರಕಾರ ರೈತರ ಜಮೀನುಗಳಿಗೆ ಬೆಲೆ ಕೊಡಬೇಕು ಎಂದು ಕರ್ನಾಟಕ ಪ್ರಾಂತ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಶರಬಸಪ್ಪ ಮಮಶೇಟಿ ಆಗ್ರಹಿಸಿದರು.

Contact Your\'s Advertisement; 9902492681

ಸೇಡಂ ತಾಲೂಕಿನ ಬೆನಕನಹಳ್ಳಿ ಗ್ರಾಮದ ನಿವಾಸಿಯಾದ ದೇವಿಂದ್ರಪ್ಪ ಮಲ್ಲಣ್ಣ ಜೊಗೆರ ಉದ್ಯೋಗ ಇಲ್ಲದೆ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ, ಸರ್ವೆ ನಂಬರ್ 358, 2 ಎಕರೆ 20 ಗುಂಟೆ ಜಮೀನು ಶ್ರೀಸಿಮೆಂಟ್ ಕಂಪೆನಿ ಜಾಬ್ ಕಾರ್ಡ್ ಕೊಟ್ಟರು ಭೂಮಿ ನೂ ಕೂಡಾ ಭೂಮಿ ಕೊಟ್ಟಿದ್ದಾರೆ. ಅವರ ಮಗನಿಗೆ ಉದ್ಯೋಗ ಕೊಟ್ಟಿಲ್ಲ.

645 ಜನ ರೈತರ, ಬೆನಕನಹಳ್ಳಿ ಡೋಣಗಾಂವ ಕೋಡ್ಲಾ ರಾಜೋಳ ಹುಳಗೋಳ, 2009 ಮತ್ತು 2012 ಹಾಗೂ 2016 ರಲ್ಲಿ ರೈತರ ಜಮೀನು ಖರೀದಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here