ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಶ್ರೀ ಕೊಟ್ಟೂರು ಬಸವೇಶ್ವರ ಶಿಕ್ಷಣ ಸಂಸ್ಥೆಯ ನೂತನ ಶಾಲಾ ಕಟ್ಟಡ ನಿರ್ಮಾಣದ ಭೂಮಿ ಪೂಜೆ ಇಂದು ಭಾನುವಾರ ಬೆಳಿಗ್ಗೆ ನಡೆಯಿತು.
ಗ್ರಾಮದ ಹಿರೇಮಠ ಸಂಸ್ಥಾನದ ಪೂಜ್ಯ ಶ್ರೀ ಶಾಂತಮೂರ್ತಿ ಶಿವಾಚಾರ್ಯ ಪೂಜಾಕಾರ್ಯ ನೆರವೇರಿಸಿ ಅಶೀರ್ವಚನ ನೀಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗುಣಮಟ್ಟದ ಶಿಕ್ಷಣ ಎಂಬುದು ಹಣವಂತರ ಸ್ವತ್ತಾಗಿದೆ. ಆದರೆ ಕಳೆದ ೨೫ ವರ್ಷಗಳ ಹಿಂದೆ ಗ್ರಾಮದ ಬಡ ವಿದ್ಯಾರ್ಥಿಗಳಿಗೆ ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಆರಂಭಿಸಲಾದ ಈ ಶಿಕ್ಷಣ ಸಂಸ್ಥೆ ತನ್ನ ಸಾರ್ಥಕ ಸೇವೆ ಸಲ್ಲಿಸುತ್ತಾ ಗ್ರಾಮದ ಬಡವರಿಗೆ ವರದಾನವಾಗಿದೆ ಎಂದರು.
ಈ ಸಂಸ್ಥೆಯಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಉನ್ನತ ವ್ಯಾಸಂಗದೊಂದಿಗೆ ದೇಶ, ವಿದೇಶದಲ್ಲಿ ಉದ್ಯೋಗ ದಲ್ಲಿ ಕಾರ್ಯ ನಿರ್ವಹಿಸುತ್ತಿರುವುದೆ
ಸಾಕ್ಷಿಯಾಗಿದೆ ಎಂದರು.
ಇತ್ತಿಚೆಗೆ ವಿದ್ಯಾರ್ಥಿಗಳು ಮೊಬೈಲ್ ಗೆ ಅಂಟಿಕೊಂಡು ಓದುವ ಹವ್ಯಾಸ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ನೆನಪಿನ ಶಕ್ತಿಯು ಕುಂದುತ್ತಿದೆ. ಮೊಬೈಲ್ ನಿಂದ ದೂರ ಉಳಿದು, ಓದುವ-ಬರೆಯುವ ಹವ್ಯಾಸ ಬೆಳೆಸಿಕೊಂಡು ಅಭಿವೃದ್ಧಿ ಹೊಂದಬೇಕೆಂದು ಕರೆ ನೀಡಿದರು.
ಸಂಸ್ಥೆಯ, ಕಾರ್ಯದರ್ಶಿ ಬಸಪ್ಪ ಸಲೆಗಾರ ಮಾತನಾಡಿ ನಮ್ಮ ಶಾಲಾ ಕಟ್ಟಡ ನಿರ್ಮಾಣಕ್ಕೆ ಹಾರಕೂಡ ಹಿರೇಮಠ ಸಂಸ್ಥಾನದ ಶ್ರೀ ಚೆನ್ನವೀರ ಶಿವಾಚಾರ್ಯರು ೫೦ ಸಾವಿರ ದೇಣಿಗೆ ನೀಡಿ ಆಶೀರ್ವಾದ ಮಾಡಿದ್ದನ್ನು ಸ್ಮರಿಸಿ, ಬಹುದಿನಗಳ ಕನಸು ಇಂದು ನನಸಾಗಿದೆ. ಶಿಕ್ಷಕರು ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದರು.
ಸಹ ಕಾರ್ಯದರ್ಶಿ ಸಂಗಫ್ಪ ಶಿರಗೊಳ, ಗ್ರಾ.ಪಂ. ಉಪಾಧ್ಯಕ್ಷ ಯಂಕಪ್ಪ ಡಿ, ಹಿರಿಯ ಪತ್ರಕರ್ತ ಸುಭಾಷ್ ಬಣಗಾರ, ಮುಖ್ಯಗುರು ಶರಣಪ್ಪ ಬಳಿಗಾರ, ಇಂಜಿನಿಯರ ಬಸವರಾಜ ಬೂದಿಹಾಳ, ಸದಾಶಿವ ಮಿಣಜಗಿ, ಶಿವಶರಣಪ್ಪ ಆದಿ, ಗೋಪಾಲ ಚವಾಲಕರ್, ನಂದಪ್ಪ ಕುಂಬಾರ, ಗಂಗಾಧರ ಟೊಣಪೆ, ಬಲಭೀಮ ದೇವಾಪುರಕರ್, ನಾಗೇಶ ಬಂಢಾರಿ, ಸಂಗಮ್ಮ ಶಿರಗೊಳ, ಶಿಕ್ಷಕರಾದ ಗಿರಿಜಾ ಎಂ, ಅರುಣಾಕುಮಾರಿ ಶಿರಗೊಳ, ಶಕುಂತಲಾ ಎಂ, ಪ್ರಬಾವತಿ, ವೀಣಾ ಎಂ. ಶಿವಲೀಲಾ ಸಲೆಗಾರ ಸೇರಿದಂತೆ ಮೊದಲಾದವರು ಇದ್ದರು.