ಕಲಬುರಗಿ: ಅಖಿಲ ಭಾರತ ಯುವಜನ ಫೆಡೆರೇಶನ್ (ಎಐವೈಎಫ್) ಜಿಲ್ಲಾ ಸಮಿತಿ ವತಿಯಿಂದ ಕಲ್ಯಾಣ ಕರ್ನಾಟಕ ಭಾಗದ 371 (ಜೆ ) ಸಮರ್ಪಕವಾಗಿ ಜಾರಿಗೊಳಿಸಬೇಕೆಂದು ಶಾಸಕರಾದ ಶ್ರೀ ಬಿ ಆರ್ ಪಾಟೀಲ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕಲ್ಯಾಣ ಕರ್ನಾಟಕ ಭಾಗದಲ್ಲಿನ ಕೈ ಬಿಟ್ಟು ಹೋದ ಹಲವಾರು ಯೋಜನೆಗಳು ಮರಳಿ ತಂದು ಅಭಿವೃದ್ಧಿಗೊಳಿಸುವ ಮೂಲಕ ಮುಖ್ಯಮಂತ್ರಿಗಳ ಮೇಲೆ ಒತ್ತಡ ತರುವ ಮೂಲಕ ಈ ಭಾಗ “ಕಲ್ಯಾಣ ಕರ್ನಾಟಕ” ಮಾಡಬೇಕು. ಹೊಸ ಹೊಸ ಯೋಜನೆಗಳು ಜಾರಿಗೆ ತಂದು ಈ ಭಾಗದ ಯುವಕರಿಗೆ ಉದ್ಯೋಗ ನೀಡಬೇಕೆಂದು ಜಿಲ್ಲೆಯ ಸಚಿವರಿಗೂ, ಆಡಳಿತ ಪಕ್ಷದ ಶಾಸಕರಿಗೂ ಹಾಗೂ ವಿರೋಧ ಪಕ್ಷದ ಶಾಸಕರಿಗೂ ಮನವಿ ಪತ್ರ ನೀಡುವ ಮೂಲಕ ಚಳುವಳಿ ರೂಪಿಸಲಾಗಿದೆ ಅದರ ಅಂಗವಾಗಿ ಇಂದು ಶಾಸಕರಿಗೆ ಮನವಿ ಪತ್ರ ನೀಡಲಾಯಿತು ಎಂದು ಅಖಿಲ ಭಾರತ ಯುವಜನ ಫೆಡರೇಶನ್ (ಎಐವೈಎಫ್) ಕಲಬುರಗಿ ಜಿಲ್ಲಾ ಅಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಎಸ್ ಅಟ್ಟೂರ ಮನವಿ ಪತ್ರ ನೀಡಿ ಮಾತನಾಡಿದರು. ರಮೇಶ ಪಾಟೀಲ, ರಘುನಂದನ ಕುಲಕರ್ಣಿ, ಶರಣು ಕಡಾಳೆ, ರವೀಂದ್ರ ವಗ್ಗಿ, ಬಂಡಪ್ಪ ಚಾಣಕ್ಯ, ಜಿಂದಾವಲಿ ಭಾಗವಹಿಸಿದರು.