ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ಪುಸ್ತಕಗಳು ಅಗತ್ಯ: ಮುದ್ನೂರು

0
66

ಶಹಾಪುರ: ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ಹಾಗೂ ಜ್ಞಾನ ಸಂಪಾದನೆಗೆ ಪುಸ್ತಕಗಳು ಓದುವ ಹವ್ಯಾಸ ರೂಢಿಸಿಕೊಳ್ಳುವುದು ಅಗತ್ಯ ಎಂದು ಪತ್ರಕರ್ತರಾದ ಮಲ್ಲಿಕಾರ್ಜುನ ಮುದ್ನೂರು ಹೇಳಿದರು.

ಶಹಾಪುರ ನಗರದ ಶ್ರೀ ಜೀವೇಶ್ವರ ಪ್ರೌಢಶಾಲೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಅವರು ಹಮ್ಮಿಕೊಂಡಿರುವ ರಸಪ್ರಶ್ನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ದೇಶ ಮತ್ತು ಸಂಸ್ಕೃತಿಯ ಇತಿಹಾಸವನ್ನು ನಾವು ಸಂಪೂರ್ಣ ಮಾಹಿತಿ ಅರಿತು ಕೊಳ್ಳಬೇಕಾದರೆ ಹಾಗೂ ಪ್ರಾಪಂಚಿಕ ಜ್ಞಾನ ಪಡೆಯಬೇಕಾದರೆ ಉತ್ತಮ ಇತಿಹಾಸ ಚರಿತ್ರೆಯುಳ್ಳ ಗ್ರಂಥಗಳನ್ನು ಅಧ್ಯಯನ ಮಾಡಬೇಕೆಂದು ಬಿ.ಎಸ್.ಎಫ್. ಯೋಧರಾದ ದುರ್ಗಪ್ಪ ಎಂ ನಾಯಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

Contact Your\'s Advertisement; 9902492681

ಯಾದಗಿರಿ ಜಿಲ್ಲಾ ಕನ್ನಡ ಜಾನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಡಿವಾಳ ಪಾಟೀಲ್ ಮಾತನಾಡುತ್ತಾ ವಿದ್ಯಾರ್ಥಿ ದಿಸೆಯಿಂದಲೇ ಪ್ರತಿಯೊಬ್ಬರೂ ೨೫ ವರ್ಷಗಳ ಕಾಲ ಕಷ್ಟಪಟ್ಟು ಪುಸ್ತಕಗಳು ಓದಿದರೆ ಇನ್ನುಳಿದ 75 ವರ್ಷಗಳ ಕಾಲ ಉತ್ತಮ ಜೀವನ ನಡೆಸಲು ಸಾಧ್ಯ ಎಂದು ತಮ್ಮದೇ ಜಾನಪದ ಶೈಲಿಯಲ್ಲಿ ಹೇಳಿದರು. ಈ ಸಮಾರಂಭದ ವೇದಿಕೆಯ ಮೇಲೆ ಸಾಹಿತಿಗಳಾದ ಪಂಚಾಕ್ಷರಿ ಹಿರೇಮಠ ಹಾಗೂ ಶ್ರೀ ಜೀವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ವಿಶ್ವನಾಥ್ ಚಿಲ್ಲಾಳ, ಪ್ರೌಢಶಾಲೆಯ ಮುಖ್ಯಗುರುಗಳಾದ ಪ್ರವೀಣ್ ಫಿರಂಗಿ, ವಿಜಯಲಕ್ಷ್ಮಿ ಹುಗ್ಗೆಳ್ಳಿ ಮಠ, ಪ್ರತಿಭಾ ರುಮಾಲ ಹಾಗೂ ಇತರರು ಉಪಸ್ಥಿತರಿದ್ದರು.ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮಲ್ಲಯ್ಯ ಫಿರಂಗಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.

ಹಮ್ಮಿಕೊಂಡಿರುವ ರಸಪ್ರಶ್ನೆ ಕಾರ್ಯಕ್ರಮದಲ್ಲಿ ೬ ತಂಡಗಳು ಭಾಗವಹಿಸಿದ್ದವು ಅದರಲ್ಲಿ ಕುವೆಂಪು ತಂಡದ ಮುಖ್ಯಸ್ಥರಾದ ಶಂಕ್ರಪ್ಪ ಪ್ರಥಮ, ಚಂದ್ರಶೇಖರ್ ಕಂಬಾರ ಅವರ ತಂಡದ ವಿದ್ಯಾರ್ಥಿ ದ್ವಿತೀಯ, ದ.ರಾ ಬೇಂದ್ರೆಯವರ ತಂಡದ ಮುಖ್ಯಸ್ಥರಾದ ಹಣಮಂತ ತೃತೀಯ ಸ್ಥಾನ ಪಡೆದುಕೊಂಡರು ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರ ಮತ್ತು ಪುಸ್ತಕಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.

ಕಾರ್ಯಕ್ರಮದ ಪ್ರಾರಂಭದಲ್ಲಿ ಕುಮಾರಿ ಕೃತ್ತಿಕಾ ಪ್ರಾರ್ಥಿಸಿದರೆ, ಶಿಕ್ಷಕಿ ಲಕ್ಷ್ಮೀ ಪಿರಂಗಿ ಸ್ವಾಗತಿಸಿದರು,ಕನ್ನಡ ಶಿಕ್ಷಕರಾದ ಮೌನೇಶ್ ಹಯ್ಯಾಳಕರ್ ನಿರೂಪಿಸಿದರು ಸುರೇಖಾ ಏಕಬೋಟೆ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here