ಮಾನವೀಯತೆಯ ಮೊತ್ತವೇ ವಚನ ಸಾಹಿತ್ಯ: ಜಯಶ್ರೀ ಚಟ್ನಳ್ಳಿ

0
119

ಕಲಬುರಗಿ: ವಚನ ಸಾಹಿತ್ಯ ವಿಶ್ವಕ್ಕೆ ಕೊಟ್ಟ ವಿಶಿಷ್ಟ ಕೊಡುಗೆ ಎಂದು ಕಲಬುರಗಿ ಅಸಿಸ್ಟಂಟ್ ಕಮಿಷನರ್ ಆಫ್ ಪೊಲೀಸ್ (ಎಸಿಪಿ) ವಿಜಯಕುಮಾರ ಅಭಿಪ್ರಾಯಪಟ್ಟರು.

ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ವತಿಯಿಂದ ಶರಣರಾದ ಲಿಂಗಣ್ಣ ಸತ್ಯಂಪೇಟೆ ಹಾಗೂ ಸಿದ್ರಾಮಪ್ಪ ಬಾಲಪ್ಪಗೋಳ ಸ್ಮರಣಾರ್ಥ ನಗರದ ಎಚ್ಕೆಇ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಮತತ್ವ ಬಿತ್ತ ಬನ್ನಿ ಸರ್ವೋದಯಕ್ಕಾಗಿ ಮನಬೆಸೆದು ಮಾಡೋದಿದೆ ಮಾನವೀಕರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಚನಗಳು ಇಂದು ಕೇವಲ ವೇದಿಕೆಗೆ ಮಾತ್ರ ಸೀಮಿತವಾಗಿದ್ದು, ವಚನದಂತೆ ನಡೆಯಬೇಕು. ಬೇರೆ ದೇಶದವರು ಸಹ ಅದನ್ನು ಅಳವಡಿಸಿಕೊಳ್ಳುತ್ತಿರುವಾಗ ನಾವ್ಯಾಕೆ ಅವರ ತತ್ವಗಳನ್ನು ಯಾಕೆ ಪಾಲಿಸುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

Contact Your\'s Advertisement; 9902492681

ಎಚ್ಕೆಇ ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಅರುಣಕುಮಾರ ಪಾಟೀಲ, ಚಿತ್ತಾಪುರ ಸರ್ಕಾರಿ ಮಹಾವಿದ್ಯಾಲಯದ ಅತಿಥಿ ಉಪನ್ಯಾಸಕ ಡಾ. ಅನಿಲಕುಮಾರ ಟೆಂಗಳಿ ಮುಖ್ಯ ಅತಿಥಿಗಳಾಗಿ ಆಗಮಿಸಿ, ಮಾನವೀಯ ಸಂಬಂಧಗಳನ್ನು ಬೆಸೆಯುವ, ಗಟ್ಟಿಗೊಳಿಸುವ ಇಂತಹ ಕಾರ್ಯಕ್ರಮಗಳು ಹೆಚ್ಚಾಗಬೇಕು. ಬಸವಣ್ಣ ಸಮಾಜದ ಆಸ್ತಿ ಎಂದು ಹೇಳಿದರು. ‘ವಚನಕಾರರ ದೃಷ್ಟಿಯಲ್ಲಿ ಮನುಷ್ಯ ಸಂಬಂಧ’ ವಿಷಯ ಕುರಿತು ಶರಣ ಚಿಂತಕಿ ಜಯಶ್ರೀ ಚಟ್ನಳ್ಳಿ ಮಾತನಾಡಿ, ಮನುಕುಲದ ಉದ್ದಾರಕ, ವಿಶ್ವಗುರು ಬಸವಣ್ಣನವರು, ಸಮಾಜದಲ್ಲಿ ಮಾನವೀಯ ಸಂಬಂಧವನ್ನು ಗಟ್ಟಿಗೊಳಿಸಿದರು ಎಂದು ತಿಳಿಸಿದರು.

ಆಧುನಿಕ ತಂತ್ರಜ್ಞಾನದ ಈ ವಾಟ್ಸ್ ಆ್ಯಪ್, ಫೇಸ್ ಬುಕ್ ಯುಗದಲ್ಲಿ ಮನೆಯೊಳಗಿರುವ ಸದಸ್ಯರುಗಳೇ ಪರಸ್ಪರ ಅಪರಿಚಿರಾಗಿದ್ದೇವೆ. ಗಾಡಂಧಕಾರದ, ಅಸಹನೀಯದ ಆ ಕಾಲದಲ್ಲಿ ವಚನಕಾರರು ಸಮಾಜದಲ್ಲಿ ಸಮಾನತೆ ನೆಲೆಗೊಳಿಸಿದರು. ದನಿಯಿಲ್ಲದವರಿಗೆ ಧ್ವನಿ ಒದಗಿಸಿದ ಶರಣರು ದೀನ-ದಲಿತರಲ್ಲಿ ಆತ್ಮವಿಶ್ವಾಸ, ಸ್ವಾಭಿಮಾನ, ಸ್ವಾವಲಂಬನೆ ಮೂಡಿಸಿದರು ಎಂದು ವಿವರಿಸಿದರು. ದಯೆ, ಮಾನವೀಯತೆ, ಪ್ರೀತಿ, ಕರುಣೆ, ವಿಶ್ವಾಸವನ್ನೇ ತಮ್ಮ ಅನುಭಾವ ಸಾಹಿತ್ಯದ ಅವಿಭಾಜ್ಯ ಅಂಗವಾಗಿಸಿಕೊಂಡ ಶರಣರು, ಮನುಷ್ಯ ಸಂಬಂಧಗಳನ್ನು ಬೆಸೆದರು ಎಂದು ತಿಳಿಸಿದರು.

ಪ್ರಾಸ್ತಾವಿಕ ಮಾತನಾಡಿದ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ದೇವರು, ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಮೂಢನಂಬಿಕೆ, ಶೋಷಣೆ ವಿರುದ್ಧ ಶರಣರು ಅಂದು ಸಮರ ಸಾರಿದ್ದರು. ಶರಣರ ವೈಚಾರಿಕ, ವೈಜ್ಞಾನಿಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು. ಕಾಲೇಜಿನ ಪ್ರಾಚಾರ್ಯ ಎನ್.ಜಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.ಶಿವರಾಜ ಅಂಡಗಿ ಸ್ವಾಗತಿಸಿದರು. ಡಾ. ಕೆ.ಗಿರಿಮಲ್ಲ ನಿರೂಪಿಸಿದರು.

ಭಾಗ್ಯ ಪ್ರಾರ್ಥಿಸಿದರು. ಕಸ್ತೂರಿ ಮೇಡಂ ವಚನ ಪ್ರಾರ್ಥನೆ ನೆರವೇರಿಸಿದರು. ಎಸ್.ಎಂ. ಪಟ್ಟಣಕರ, ಶ್ರೀಕಾಂತಗೌಡ ಪಾಟೀಲ ತಿಳಗೂಳ, ಬಿ.ಎಂ. ಪಾಟೀಲ ಕಲ್ಲೂರ, ಗುರುಬಸಪ್ಪ ಸಜ್ಜನಶೆಟ್ಟಿ, ಶಿವಾನಂದ ಮಠಪತಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here