ಸಾಮಾಜಿಕ ಪರಿಶೋಧನೆ ಕುರಿತು 30 ದಿನಗಳ ಪ್ರಮಾಣಿಕರಣ ತರಬೇತಿ ಉದ್ಘಾಟನೆ

0
16

ಕಲಬುರಗಿ: ಜಿಲ್ಲೆಯ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ರಾಜ್ ಸಂಸ್ಥೆಯ ಕಲಬುರಗಿ ಪ್ರಾದೇಶಿಕ ಕಚೇರಿಯಲ್ಲಿ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಂಸ್ಥೆ ಹೈದ್ರಾಬಾದ್, ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭೀವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ, ಮೈಸೂರು ವತಿಯಿಂದ ಹಾಗೂ ಸಾಮಾಜಿಕ ಪರಿಶೋಧನೆ ನಿರ್ದೇಶನಾಲಯ, ಬೆಂಗಳೂರು ರವರ ಸಹಯೋಗದಲ್ಲಿ ಸಾಮಾಜಿಕ ಪರಿಶೋಧನೆ ಕುರಿತು 30 ದಿನಗಳ ಪ್ರಮಾಣಿಕರಣ ತರಬೇತಿಯನ್ನು 01-06-2023 ರಿಂದ 30-06-2023 ರವರೆಗೆ ಆಯೋಜಿಸಲಾಗಿತ್ತು.

ಇಂದು ಕಾರ್ಯಕ್ರಮವನ್ನು ಶ್ರೀ.ಎಲ್.ಕೆ ಅತೀಕ್. ಅಪರ ಮುಖ್ಯ ಕಾರ್ಯದರ್ಶಿಗಳು, ಆರ್.ಡಿ.ಪಿ.ಆರ್. ಇಲಾಖೆ ಶ್ರೀಮತಿ ಉಮಾ ಮಹಾದೇವನ್, ಐ.ಎ.ಎಸ್. ಅಪರ ಮುಖ್ಯ ಕಾರ್ಯದರ್ಶಿಗಳು, (ಪಂಚಾಯತ್‍ರಾಜ್ ) ಆರ್.ಡಿ.ಪಿ.ಆರ್. ಇಲಾಖೆ ಬೆಂಗಳೂರು ರವರು ವಿಡಿಯೋ ಮುದ್ರಿತ ನುಡಿ ಸಂದೇಶದ ನೀಡಿದರು. ಈ ಕಾರ್ಯಕರಮದಲ್ಲಿ ಶ್ರೀ ನಲಿನ್ ಅತುಲ್. ನಿರ್ದೇಶಕರು, ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯ ಬೆಂಗಳೂರು ರವರು ಆನ ಲೈನ್ ಮೂಲಕ ತರಬೇತಿಗೆ ಚಾಲನೆ ನೀಡಿದರು. ಹಾಗೂ ಶ್ರೀಮತಿ. ಕೆ. ಲಕ್ಷ್ಮೀ ಪ್ರಿಯಾ ರವರು ತರಬೇತಿಯನ್ನು ಉದ್ದೇಶಿಸಿ ಆನ ಲೈನ್ ಮುದ್ರಿತ ಮೂಲಕ ಸಂದೇಶ ನುಡಿ ನೀಡಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಆನ್ ಲೈನ್ ಮೂಲಕ ಮಾತನಾಡುತ್ತ ಶ್ರೀ ಎಂ.ಕೆ.ಕೆಂಪೇಗೌಡ ಜಂಟಿ ನಿರ್ದೇಶಕರು, ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯ ಬೆಂಗಳೂರು ರವರು ತರಬೇತಿ ಕುರಿತು ಪ್ರಾಸ್ತವಿಕ ನುಡಿಯನ್ನು ನುಡಿದರು.

ತರಬೇತಿ ಕಾರ್ಯಕ್ರಮವನ್ನು ಸಸಿಗೆ ನೀರೆರುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ತದನಂತರ ಕಾರ್ಯಕ್ರಮದಲ್ಲಿ ಶ್ರೀ ವಿಜಯಕುಮಾರ ಸಿ ಬೋಧಕರು ಮತ್ತು ತರಬೇತಿ ಸಂಯೋಜಕರು ಎ.ಎನ್.ಎಸ್.ಐ,ಆರ್.ಡಿ ಮೈಸೂರು ರವರು ತರಬೇತಿಯ ರೂಪು ರೇಷೆಗಳ ಕುರಿತು ಮಾತನಾಡಿದರು. ಶ್ರೀ ನರಸರೆಡ್ಡಿ ವರಂಗಲ್ ಎಲ್.ಸಿ.ಸಿ ಮತ್ತು ರಾಜ್ಯ ಕಾರ್ಯಕ್ರಮ ವ್ಯವಸ್ಥಾಪಕರು ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯ ಬೆಂಗಳೂರು ಒಂದು ತಿಂಗಳ ತರಬೇತಿ ವಿಷಯ ಪಠ್ಯ ಕುರಿತು ಹೇಳಿದರು.

ಕಾರ್ಯಕ್ರಮವನ್ನು ಬೋಧಕರಾದ ಶಿವಪುತ್ರಪ್ಪ ಗೊಬ್ಬೂರು, ರವರು ನಿರೂಪಿಸಿದರು. ಬೋಧಕರಾದ ಡಾ.ರಾಜು ಕಂಬಳಿಮಠ,ಸರ್ವರವನ್ನು ಸ್ವಾಗತಿಸಿದರು, ಶ್ರೀ ಪಾಶಾಮಿಯಾ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು ಕಲಬುರಗಿ ಜಿಲ್ಲೆ ರವರು ವಂದಿಸಿದರು. ಕಾರ್ಯಕ್ರಮದಲ್ಲಿ ಶ್ರೀ ದೇವದಾಸ್ ಜಿಲಾ ್ಲಕಾರ್ಯಕ್ರಮ ವ್ಯವಸ್ಥಾಪಕರು ಬೀದರ ಜಿಲೆ,್ಲ ತರಬೇತಿ ವ್ಯವಸ್ಥಾಪಕರಾದ ಪ್ರಶಾಂತ ಅಂಗಡಿ, ತರಬೇತಿ ಸಹಾಯಕರಾದ ಅರ್ಚನಾ ಪಾಟೀಲ್, ಅಶ್ವೀನಿ ಪೂಜಾರಿ ಸಿಬ್ಬಂಧಿಗಳಾದ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here