ಜೂ. 5 ರಿಂದ 7ವರೆಗೆ ಹಜರತ್ ಖಾಜಾ ಬಂದಾ ನವಾಜ್ ರವರ 619ನೇ ಉರುಸ್

0
60

ಕಲಬುರಗಿ: ದಕ್ಕನ್ ಭಾಗದ ಸೂಪ್ರಸಿದ್ಧ ಸೂಫಿ ಸಂತರಾದ ಹಜರತ್ ಖಾಜಾ ಬಂದಾ ನವಾಜ್ ಗೇಸೂದರಾಜ್ (ರ.ಅ)ರ ವರೆ 619ನೇ ಉರುಸ್ ಶರೀಫ್ ಜೂನ್ 5 , 6 ಹಾಗೂ 7ರವರೆಗೆ ಜರುಗಲಿದೆ ಎಂದು ದರ್ಗಾದ ಪೀಠಾಧಿಪತಿಗಳಾದ ಸೈಯದ್ ಶಾ ಖೂಸ್ರೊ ಹುಸೇನಿ ತಿಳಿಸಿದ್ದಾರೆ.

ಜೂನ್ ಸೋಮವಾರ 5 ರಂದು ಕಲಬುರಗಿ ನಗರದ ಮಹೆಬೂಬ್ ಗುಲಶನ್ ಗಾರ್ಡನದಿಂದ ಗಂಧದ ಮೆರವಣಿಗೆ ಸೂಪರ್ ಮಾರ್ಕೆಟ್ ಮಾರ್ಗವಾಗಿ ಖಾಜಾ ಬಂದಾ ನವಾಜ್ ದರ್ಗಾಕ್ಕೆ ತೆರಳಲಿದೆ. ಮಂಗಳವಾರ 6 ರಂದು ದೀಪೋತ್ಸವ ಕಾರ್ಯಕ್ರಮ. 7 ರಂದು ಜಿಯಾರತ್ (ದರ್ಶನ) ಸೇರಿದಂತೆ ಖವಾಲಿಗಳು ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಅದರಂತೆ ಪ್ರತಿ ವರ್ಷದಂತೆ ಅಖಿಲ ಭಾರತ ಕೈಗಾರಿಕಾ ಪ್ರದರ್ಶನ ಮೇಳದ ಉದ್ಘಾಟನೆಯನ್ನು ಜೂ. 4ರ ಸಾಯಂಕಾಲ 7.30 ಗಂಟೆಗೆ ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ  ಜನಾಬ್ ರಹೀಮ್ ಖಾನ್ ನಡೆಸಿಕೊಡಲಿದ್ದು, ಉರುಸ್ ನಲ್ಲಿ ಈ ಬಾರಿ ಅತಿಹೆಚ್ಚಿನ ಭಕ್ತಾದಿಗಳು ಬರುವಿಕೆ ನಿರೀಕ್ಷೆಯಿದೆ.

ಸ್ಥಳೀಯ ಆಡಳಿತ ಮಂಡಳಿಯ ಅಧಿಕಾರಿಗಳೊಂದಿಗೆ ಪೀಠಾಧಿಪತಿಗಳು ಸಭೆ ನಡೆಸಿ ಹೈದಾರಾಬಾದಿಂದ ವಿಶೇಷ ರೈಲುಗಳು ಸಹ ಆರಂಭಿಸಲಾಗಿದೆ. ಜಾತ್ರೆಯಲ್ಲಿ ಜಿಲ್ಲಾಡಳಿತ ಒಳಗೊಂಡಂತೆ ಎಲ್ಲ ಇಲಾಖೆಯ ಅಧಿಕಾರಿಗಳು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಎಚ್ಚರಿಕೆ ನೀಡಿದು, ಜನರಿಗೆ ತೊಂದರೆ ಯಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಉರುಸ್ ನಲ್ಲಿ ಭಕ್ತಾದಿಗಳು ಶಾಂತಿ ಕಾಪಾಡುವಂತೆ ದರ್ಗಾ ಕಮಿಟಿಯು ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದೆ.

ಉರುಸ್ ಕಾರ್ಯಕ್ರಮಗಳಾದ ಗಂಧದ ಮೆರವಣಿಗೆಯ ಕಾರ್ಯಕ್ರಮ https://www.youtube.com/user/khwajabandanawaz/live ಲಿಂಕ್ ಬಳಸಿ ಯೂಟ್ಯೂ ಬ್ ನಲ್ಲಿ ನೇರಪ್ರಸಾರದ ವೀಕ್ಷಣೆಗೆ ಅವಕಾಶ ಕಲ್ಪಿಸಿಸಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here